ಹಾವೇರಿ

ರಸ್ತೆ ಕಾಮಗಾರಿ ಬೇಗನೆ ಪೂರ್ಣಗೊಳ್ಳದಿದ್ದರೆ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ- ರಮೇಶ್ ಹಂಗನಕಟ್ಟಿ

ರಸ್ತೆ ಕಾಮಗಾರಿ ಬೇಗನೆ ಪೂರ್ಣಗೊಳ್ಳದಿದ್ದರೆ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ- ರಮೇಶ್ ಹಂಗನಕಟ್ಟಿ
Jaya Karnataka organization to launch intense protest if road work is not completed soon – Ramesh Ha

ರಸ್ತೆ ಕಾಮಗಾರಿ ಬೇಗನೆ ಪೂರ್ಣಗೊಳ್ಳದಿದ್ದರೆ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ- ರಮೇಶ್ ಹಂಗನಕಟ್ಟಿ 

ಲಕ್ಷ್ಮೇಶ್ವರ  04: ತಾಲೂಕಿನ ಸೂರಣಗಿ ಗ್ರಾಮದಿಂದ ಬಾಲೇಹೊಸೂರ ಗ್ರಾಮಕ್ಕೆ ತಲುಪುವ ಸುಮಾರು 9 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆ ಅಭಿವೃದ್ಧಿಗಾಗಿ ಸುಮಾರು ಏಳು ಕೋಟಿ ರೂ ಅನುದಾನ ಬಿಡುಗಡೆ ಗೊಂಡರು ಸಹ ರಸ್ತೆ ಕಾಮಗಾರಿ ಪ್ರಾರಂಭಗೊಂಡಿರಲಿಲ್ಲ  ಆದರೆ ಕೆಲವು ದಿನಗಳ ಹಿಂದೆ ಹಳೆಯ ರಸ್ತೆಯ ಡಾಂಬರೀಕರಣ ಕಿತ್ತು ರಸ್ತೆಯ ಕೆಲಸವನ್ನು ಪ್ರಾರಂಭ ಮಾಡಿ ಈಗ ಅರ್ಧಕ್ಕೆ ನಿಲ್ಲಿಸಿದ್ದಾರೆ ಗುತ್ತಿಗೆದಾರರು ಇದರಿಂದ ಸಾವ್ರಜಿನಿಕರಿಗೆ ಓಡಾಡಲು ತುಂಬಾ ತೊಂದರೆ ಉಂಟಾಗಿದ್ದು ಇದೇ ರಸ್ತೆಯನ್ನು ಅವಲಂಬಿಸಿ ಲಕ್ಷ್ಮೇಶ್ವರ ಹಾಗೂ ಗುತ್ತಲ ಮಾರ್ಗಕ್ಕೆ ಅತಿ ಹೆಚ್ಚು ಜನರು ಓಡಾಡುತ್ತಾರೆ ಇದರಿಂದ ಸಾರ್ವಜನಿಕರಿಗೆ ರೈತರಿಗೆ ವಾಹನ ಸವಾರರಿಗೆ ತುಂಬಾ ಸಮಸ್ಯೆ ಉಂಟಾಗಿದ್ದು ಇದಕ್ಕೆಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ಒಂದು ವಾರದ ಒಳಗಾಗಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡದಿದ್ದರೆ ನಮ್ಮ ಜಯ ಕರ್ನಾಟಕ ಸಂಘಟನೆಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಅದಕ್ಕೆ ಆಸ್ಪಂದ ಮಾಡಿಕೊಡದೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬೇಗನೆ ಎಚ್ಚೆತ್ತುಕೊಂಡು ಕೆಲಸವನ್ನು ಪ್ರಾರಂಭ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಲಕ್ಷ್ಮೇಶ್ವರ ಶಿರಹಟ್ಟಿ ತಾಲೂಕಿನ ಉಸ್ತುವಾರಿ ರಮೇಶ್ ಹಂಗನಕಟ್ಟಿ ಅವರು ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ 


ಸುದ್ದಿ ಓದಿ