ಬಾಗಲಕೋಟೆ

ಆಸ್ಪತ್ರೆ, ವಸತಿ ನಿಲಯ, ವೃದ್ದಾಶ್ರಮಕ್ಕೆ ಜಿ.ಪಂ ಸಿಇಒ ಭೇಟಿ ಪರೀಶೀಲನೆ ಅವ್ಯವಸ್ಥೆ ಕಂಡು ಹಲವರಿಗೆ ನೋಟಿಸ್ : ಸಿಇಒ ಗಜಾನನ ಬಾಲೆ

ಆಸ್ಪತ್ರೆ, ವಸತಿ ನಿಲಯ, ವೃದ್ದಾಶ್ರಮಕ್ಕೆ ಜಿ.ಪಂ ಸಿಇಒ ಭೇಟಿ ಪರೀಶೀಲನೆ ಅವ್ಯವಸ್ಥೆ ಕಂಡು ಹಲವರಿಗೆ ನೋಟಿಸ್ : ಸಿಇಒ ಗಜಾನನ ಬಾಲೆ
G. P.M. CEO visits hospitals, hostels, old age homes, notices to many after seeing chaos: CEO Gajana


             ಬಾಗಲಕೋಟೆ   26:   ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಹಾರ ಧಾನ್ಯಗಳ ಗುಣಮಟ್ಟದ ಕೊರತೆ ಹಾಗೂ ವೃದ್ಧಾಶ್ರಮದ ಮೂಲಸೌಕರ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.  ಸೋಮವಾರ ಜಮಖಂಡಿ ತಾಲ್ಲೂಕಿನ ವಿವಿಧ ಸರ್ಕಾರಿ ಸಂಸ್ಥೆಗಳು, ವಸತಿ ನಿಲಯಗಳು ಹಾಗೂ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

        ಜಮಖಂಡಿಯ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಿಇಒ ಅವರು ವಾರ್ಡ್ಗಳು, ಪ್ರಯೋಗಾಲಯ, ಹಾಗೂ ಅಡುಗೆಮನೆ ಪರೀಶೀಲಿಸಿದರು. ಸ್ವಚ್ಛತೆಯ ಕೊರತೆ ಮತ್ತು ಆಹಾರ ತಯಾರಿಕೆಯ ಕಳಪೆ ಗುಣಮಟ್ಟ ಕಂಡುಬಂದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯದ ವೇಳೆ ಹಾಜರಿರದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕರಿಯಣ್ಣವರ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.             

             ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರದ ಕೊರತೆಯಿಂದ ರೋಗಿಗಳು ಖಾಸಗಿ ಕೇಂದ್ರಗಳನ್ನು ಅವಲಂಬಿಸುತ್ತಿರುವ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಯಂತ್ರ ಮಂಜೂರಿಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಶೈಕ್ಷಣಿಕ ಪ್ರಗತಿ ಹಾಗೂ ವಿಷನ್ 90+ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯಗಳ ಗೋಡೌನ್ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಮಳಿಗೆ ಪರೀಶೀಲಿಸಿದಾಗ ಗುಣಮಟ್ಟದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.   


ಸುದ್ದಿ ಓದಿ