ಲಕ್ಷ್ಮೇಶ್ವರದಲ್ಲಿ ಹೊನ್ನಕೇರಿ ಮಲ್ಲಯ್ಯನ ಸರಪಣಿ ಪವಾಡ ಶ್ರದ್ಧಾಭಕ್ತಿಯಿಂದ ಜರಗಿತು
ಲಕ್ಷ್ಮೇಶ್ವರ 22: ಪಟ್ಟಣದ ಮ್ಯಾಗೇರಿ ಓಣಿಯ ಶ್ರೀ ಹೊನ್ನಕೇರಿ ಮಲ್ಲಯ್ಯನ ದೇವಸ್ಥಾನದಲ್ಲಿ ಪ್ರತಿ ವರ್ಷ ವಿಜಯದಶಮಿ ಎಂದು ನಡೆದುಕೊಂಡು ಬರುತ್ತಿರುವ ಸರಪಣಿ ಹರಿಯುವ ಪವಾಡವು ಈ ವರ್ಷವೂ ಕೂಡ ಶ್ರದ್ದಾ ಭಕ್ತಿಯಿಂದ ಜರಗಿತು 9 ದಿನಗಳ ವರೆಗೂ ಉಪವಾಸ ವೃತವನ್ನು ಆಚರಿಸುವ ಮೂಲಕ ಗೂರವಪ್ಪ ನೀಲಪ್ಪ ಕೊರಿ ಯವರು ಸರಪಣಿ ಹರಿಯುವ ಮೂಲಕ ಪವಾಡ ನಿರ್ವಹಿಸಿದರು ಯಾದಗಿರಿಯಲ್ಲಿರುವ ಶ್ರೀ ಹೊನ್ನಕೇರಿ ಮಲ್ಲಯ್ಯನ ದೇವಸ್ಥಾನವನ್ನು ಹೊರತುಪಡಿಸಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇರುವ ಹೊನ್ನಕೇರಿ ಮಲ್ಲಯ್ಯನ ದೇವಸ್ಥಾನಕ್ಕೆ ಗದಗ್ ಜಿಲ್ಲೆ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಹ ಹೊನ್ನಕೇರಿ ಮಲ್ಲಯ್ಯನ ಭಕ್ತರು ಅಮಾವಾಸ್ಯೆ ಹುಣ್ಣಿಮೆ ಬಂದು ಹೋಗುತ್ತಾರೆ ಅದರಂತೆ ವಿಜಯದಶಮಿ ಎಂದು ನಡೆಯುವ ಸರಪಣಿ ಪವಾಡ ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪವಾಡ ಹರಿಯುವ ದೃಶ್ಯದ ಪವಾಡವನ್ನು ನೋಡಿ ಪುನೀತರಾದರು ದೇವಸ್ಥಾನ ಟೆಸ್ಟ್ ಕಮಿಟಿಯ ಅಧ್ಯಕ್ಷ ಮಲ್ಲೇಶ ಗೊಜಗೋಜಿ ಟ್ರಸ್ಟ್ ಕಮಿಟಿಯ ಎಲ್ಲ ಗುರು ಹಿರಿಯ ಮುಖಂಡರು ಪಾಲ್ಗೊಂಡಿದ್ದರು ಹಾಗೂ ಶ್ರೀ ಬೀರ್ಪ ದೇವಸ್ಥಾನದಿಂದ ಸೋಮೇಶ್ವರ ದೇವಸ್ಥಾನಕ್ಕೆ ಹೊರಟ ಬೀರ್ಪ ದೇವರ ಪಾಲಕಿ ಕೆಳಗೆ ಭಕ್ತರು ಮಲಗಿ ತಮ್ಮ ಕಷ್ಟ ಕಾರ್ಪಣಯಗಳನ್ನು ದೂರ ಮಾಡಿ ನಮ್ಮ ಇಷ್ಟಾರ್ಥಗಳನ್ನು ಎಡೇರಿಸುವಂತೆ ಭಕ್ತಿಯನ್ನು ಸಮರ್ಿಸಿದರು