ಉಪನ್ಯಾಸಕ ಸೇವೆಯಿಂದ ತೆಗೆದು ಅನ್ಯಾಯದ ವಿರುದ್ಧ ಪ್ರತಿಭಟನೆ
ಲೋಕದರ್ಶನ ವರದಿ
ಹೂವಿನಹಡಗಲಿ 07: ಅತಿಥಿ ಉಪನ್ಯಾಸಕ ಎಂ.ಪಿ.ಎಂ.ಶಿವಪ್ರಕಾಶ್ ಸ್ವಾಮಿ ಇವರನ್ನು ಸೇವೆಯಿಂದ ತೆಗೆದ ಅನ್ಯಾಯದ ವಿರುದ್ಧ ಜಿಬಿಆರ್ ಕಾಲೇಜಿನ ಎದುರು ಶನಿವಾರ ಪ್ರಗತಿಪರ ಪರ ಸಂಘಟನೆ ಒಕ್ಕೂಟ ದಿಂದ ಪ್ರತಿಭಟನೆ ನಡೆಯಿತು. ಇದೇ ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಹಲಗಿ ಸುರೇಶ್, ರೈತ ಸಂಘದ ಅದ್ಯಕ್ಷ ಸಿದ್ದಪ್ಪ,ಎಬಿವಿಪಿ ಸಂಚಾಲಕ ಎಂ.ಧನುಷ ಕುಮಾರ, ಪರ್ತಕರ್ತರಾದ ಎಂ.ಜಗದೀಶ, ಎಂ.ದಯಾನಂದ,
ವಿಕಲಚೇತನ ಜಿಲ್ಲಾ ಉಪಾಧ್ಯಕ್ಷ ಚಂದ್ರ್ಪ, ಮಂಗಳಾ ಮಾತನಾಡಿ ಜಿಬಿಆರ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ 31 ವರ್ಷಗಳ ಕರ್ತವ್ಯ ನಿರ್ವಹಿಸಿ, ಏಕಾ -ಏಕಿ ನೋಟೀಸ್ ನೀಡದೇ ಕರ್ತವ್ಯ ದಿಂದ ಬಿಡುಗಡೆ ಮಾಡಿದ್ದು ಜತೆಗೆ ಸೇವಾ ಪ್ರಮಾಣ ಪತ್ರ, ಹಾಜರಾತಿ ಪ್ರಮಾಣ ಪತ್ರ ಕೊಡದೇ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕರ್ತವ್ಯ ದಲ್ಲಿ ಮುಂದುವರಿಸಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಕಾಲೇಜ್ ಎದುರು ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಅತಿಥಿ ಉಪನ್ಯಾಸಕ ಎಂ.ಪಿ.ಎಂ.ಶಿವಪ್ರಕಾಶ್ ಸ್ವಾಮಿ ಮಾತನಾಡಿ 2026-27ನೇ ಸಾಲಿನ ಶೈಕ್ಷಣಿಕ ವರ್ಷ ನಾಲ್ಕು ತಿಂಗಳ ಕಾಲ ಕಾರ್ಯಭಾರವನ್ನು ನಿಭಾಯಿಸಿ,
ವೇತನವನ್ನು ಪಡೆದಿದ್ದು, ಏಕಾ-ಏಕಿ ಯಾವುದೇ ನೋಟೀಸ್ ನೀಡದೆ ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ ಜತೆಗೆ ಸೇವಾ ಪ್ರಮಾಣ ಪತ್ರ, ಹಾಜರಾತಿ ಪ್ರಮಾಣ ಪತ್ರ, ಕೊಡಬೇಕೆಂದು ಮನವಿ ಪತ್ರವನ್ನು ಪ್ರಾಚಾರ್ಯರಿಗೆ ನೀಡಿ 40 ದಿನಗಳಾದರು ಕೂಡ ಕೊಡದೇ ಸುಧೀರ್ಘ ಸೇವೆ ಮಾಡಿದ ಉಪನ್ಯಾಸಕ ವೃತ್ತಿಗೆ ಆಡಳಿತದ ಮಂಡಳಿ ಅವಮಾನಿಸಲಾಗಿದೆ ಎಂದು ದೂರಿದರು.
ಬೇಡಿಕೆಯ ಮನವಿಯನ್ನು ಜಿಪಿಜಿ ಕಾಲೇಜಿನ ಪ್ರಾಚಾರ್ಯರಾದ ಕೋರಿ ಹಾಲೇಶ ಮೂಲಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಜಿಬಿಆರ್ ಕಾಲೇಜಿನ ಪ್ರಾಚಾರ್ಯರಿಗೆ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಮಂಜುನಾಥ ಪಾಟೀಲ್, ಕೆ.ಸಿ.ಪರಶುರಾಮ, ಎಂ.ಗಂಗಪ್ಪ, ಎಂ.ಪಿ.ಎಂ.ವಿರಯ್ಯ,ಈಟಿ.ವಿನಾಯಕ, ಪಿ.ಮಲ್ಲಿಕಾರ್ಜುನ,ಉಮೇಶ್, ಮಂಜುನಾಥ ಸೇರಿದಂತೆ ನಾನಾ ಸಂಘಟನೆಯ ಪತ್ರಕರ್ತರು ಇದ್ದರು.