ಹೂವಿನ ಹಡಗಲಿ

ಏಕೀಕರಣ ಹೋರಾಟಗಾರರ ತ್ಯಾಗ ಸ್ಮರಣೀಯ

ಏಕೀಕರಣ ಹೋರಾಟಗಾರರ ತ್ಯಾಗ ಸ್ಮರಣೀಯ

ಹೂವಿನ ಹಡಗಲಿ 01:  ಏಕೀಕರಣ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಣೆ ಅಗತ್ಯ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ ಎಂ ಧರ್ಮಣ್ಣ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ನಿಮಿತ್ತ  ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕರುನಾಡಿನ ಹಿರಿಮೆ ಹೆಚ್ಚಿಸಿವೆ ಎಂದು ತಿಳಿಸಿದರು.ಸಂಸ್ಥೆಯ ನಿರ್ದೇಶಕ ಈ ಟಿ ಮಾಲತೇಶ್ ಮಾತನಾಡಿ ತುಂಗಭದ್ರಾ ವಿದ್ಯಾ ಸಂಸ್ಥೆಯು ಮಾತೃಭಾಷೆ ಕನ್ನಡದಲ್ಲೇ ಶಿಕ್ಷಣ ನೀಡುವ ಮಹತ್ತರ ಸದುದ್ದೇಶದಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ ವಿದ್ಯಾರ್ಥಿಗಳು ಕನ್ನಡ ಶುದ್ಧವಾಗಿ ಓದುವ ಬರೆಯುವ ಸಂಕಲ್ಪ ಮಾಡಬೇಕು. 

 ಕನ್ನಡದ ಹೆಸರಾಂತ ಕವಿ ಲೇಖಕರ ಕೃತಿಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿರಿ ಎಂದರು.ಕನ್ನಡ ವಿಷಯ ಶಿಕ್ಷಕ ಬಸವರಾಜ ಕೆ ಕನ್ನಡ ಸಾಹಿತ್ಯಓದಿನ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಮುಖ್ಯ ಗುರುಗಳಾದ ಸುರೇಶ ಅಂಗಡಿ ಮಾತನಾಡಿ ಡೆಪ್ಯೂಟಿ ಚನ್ನಬಸಪ್ಪ, ಅತ್ತಿಮಬ್ಬೆ, ದಿನಕರ ದೇಸಾಯಿ ಪಿಂಜಾರ ರಂಜಾನ್ ಸಾಬ್ ಕನ್ನಡ ನಾಡು ನುಡಿ ಸಂಸ್ಕೃತಿ ಬೆಳೆಸಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಎಂಟನೇ ತರಗತಿ ವಿದ್ಯಾರ್ಥಿನಿ ದಾನೇಶ್ವರಿ ಕನ್ನಡ ತಾಯಿ ಭುವನೇಶ್ವರಿ ವೇಷಭೂಷಣ ಗಮನ ಸೆಳೆಯಿತು.ವಿದ್ಯಾರ್ಥಿಗಳಾದ ಭಾರತಿ ಅಡವಳ್ಳಿಮಠ ಅಶ್ವಿನಿ ಅ ಇರಕಲ್ ಇತರರು ಮಾತನಾಡಿದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ಆನಂದ್ ಜಿ ಲಂಬಾಣಿ ಗಿಡ್ಡಾನಾಯ್ಕ್‌ ಪ್ರತಿಮಾ ಎನ್ ಗೀತಾ ,ಸಂತೋಷ ಕುಮಾರ್  ಎಸ್ ,ಇತರರು ಇದ್ದರು. 


ಸುದ್ದಿ ಓದಿ