ಸೇವಾ ನಿವೃತ್ತಿ ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಬೀಳ್ಕೊಡುಗೆ " ಗ್ರಾಮೀಣ ಮಕ್ಕಳಿಗೆ ವಿ.ವಿ. ಸಂಘದ ಶೈಕ್ಷಣಿಕ ಕೊಡುಗೆ"
ಹೂವಿನಹಡಗಲಿ 31- ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಎಸ್.ಎಸ್.ಪಾಟೀಲ್ ಸುದೀರ್ಘ 36 ವರ್ಷ ಸೇವೆ ಸಲ್ಲಿಸಿ ಅ.31ರಂದು ನಿವೃತ್ತಿ ಯಾದ ಎಸ್.ಎಸ್.ಪಾಟೀಲ್ ಅವರನ್ನು ವಿದ್ಯಾಸಂಸ್ಥೆ, ಕಾಲೇಜು ಆಡಳಿತ ಮಂಡಳಿಯಿಂದ ಶನಿವಾರ ಸೇವಾ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿತು. ಸನ್ಮಾನ ಸ್ವೀಕರಿಸಿ ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ್ ಮಾತನಾಡಿ ನಗರ ಪ್ರದೇಶಗಳಿಗೆ ಸೀಮಿತವಾಗದೆ,
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ (ವಿ.ವಿ. ಸಂಘ) ಪಟ್ಟಣದಲ್ಲಿ ಕಾಲೇಜು ತೆರೆದು ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮಹತ್ತರ ಕೊಡುಗೆ ನೀಡಿದೆ.ಹಡಗಲಿಯಲ್ಲಿ ಸರಕಾರಿ ಕಾಲೇಜು ಇಲ್ಲದ ಸಮಯದಲ್ಲಿ ವಿವಿ.ಸಂಘವುಒಟ್ಟಾರೆಯಾಗಿ, ದೂರದ ಹಳ್ಳಿಗಳಿಂದ ಬರುವ ಬಡ ,ಗ್ರಾಮೀಣ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿಯ ಉನ್ನತ ಶಿಕ್ಷಣವು ಕೇವಲ ಮರೀಚಿಕೆಯಾಗಿದ್ದ ಕಾಲದಲ್ಲಿ, ವಿ.ವಿ. ಸಂಘವು ಅವರ ಮನೆಬಾಗಿಲಿಗೆ ಜ್ಞಾನದ ಜ್ಯೋತಿಯನ್ನು ಕೊಂಡೊಯ್ದು ಲಕ್ಷಾಂತರ ಗ್ರಾಮೀಣ ಬದುಕನ್ನು ಹಸನುಗೊಳಿಸಿದೆ.
ಎಂದ ಅವರು ಎಲ್ಲರ ಸಹಕಾರ ದಿಂದ ನಾನು ಪ್ರಾಚಾರ್ಯರಾಗಿ ಕರ್ತವ್ಯ ದಲ್ಲಿ ನಿಷ್ಠುರವಾಗಿ ಕಳಂಕರಹಿತ ಪ್ರಾಮಾಣಿಕ ಸೇವೆಯನ್ನು ಮಾಡಿದ್ದಾನೆ ಹೊರತು ವೈಯಕ್ತಿಕ ಅಲ್ಲ.ವಿ.ವಿ.ಸಂಘವು ದೊಡ್ಡ ಅವಕಾಶ ಮಾಡಿದ್ದಕ್ಕೆ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕ ಎಲ್.ಕೃಷ್ಣನಾಯಕ ಮಾತನಾಡಿ ರಾಜ್ಯದ ಆರ್ಥಿಕ ಸ್ಥಿತಿ ಗತಿ,ಶೈಕ್ಷಣಿಕ ಸಾಧನೆ ಮಾಡಿದ ಎಸ್.ಎಸ್.ಪಾಟೀಲ್ ರು ರಾಜ್ಯ ಹೊರ ರಾಜ್ಯದಲ್ಲಿ ತಮ್ಮ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕಾಲೇಜು ಆಡಳಿತ ಮಂಡಳಿ ಮಾಜಿ ಅದ್ಯಕ್ಷ ಅಕ್ಕಿ ಶಿವಕುಮಾರ್, ಬಾವಿ ಬೆಟ್ಟಪ್ಪ, ಉಪನ್ಯಾಸಕ ಪ್ರಭು ಸೊಪ್ಪಿನ, ಪಿಯುಸಿ ಅಮರೇಗೌಡ ಪಾಟೀಲ್ ಸೇರಿದಂತೆ ಸ್ನೇಹಿತರು ಮಾತನಾಡಿದರು. ಕಾಲೇಜು ಅಡಳಿತ ಮಂಡಳಿ ಅದ್ಯಕ್ಷ ಸಿ.ಮೋಹನ್ ರೆಡ್ಡಿ ಮಾತನಾಡಿದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮಿ ಸಾನಿದ್ಯ ವಹಿಸಿದ್ದರು. ಇದೇ ವೇಳೆ ಕಾಲೇಜಿನ ಅಡಳಿತ ಮಂಡಳಿ ಸದಸ್ಯರಾದ ಮಲ್ಕಿಒಡೆಯರ ಮಲ್ಲಿಕಾರ್ಜುನ, ಸಿಎಂ.ಉದಾಸಿ, ಸೊಪ್ಪಿನ ಪ್ರಕಾಶ ಇದ್ದರು.