ಹೂವಿನ ಹಡಗಲಿ

ಬಿಜೆಪಿ ಗೆಲುವು : 2028 ವಿಧಾನಸಭೆ ಚುನಾವಣೆ ಸ್ಪಷ್ಟ ಜನಾದೇಶ

ಬಿಜೆಪಿ ಗೆಲುವು : 2028 ವಿಧಾನಸಭೆ ಚುನಾವಣೆ ಸ್ಪಷ್ಟ ಜನಾದೇಶ


ಲೋಕದರ್ಶನ ವರದಿ 

         ಹೂವಿನಹಡಗಲಿ  ಅ.29:  ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ  ಮೈತ್ರಿಕೂಟ ಗಳಿಸಿದ ಗೆಲುವು 2028ರ ವಿಧಾನಸಭಾ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಶಾಸಕ ಕೃಷ್ಣನಾಯಕ  ಪ್ರತಿಕ್ರಿಯಿಸಿದ್ದಾರೆ.

            ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ   ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕರು, ವಿದ್ಯಾವಂತರು  ಎನ್ಡಿಎ ಅಭ್ಯರ್ಥಿಗಳ ಗೆಲುವು ನೀಡಿದ್ದು, ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದರು.

         ,ಮುಖಂಡರಾದ ಬೀರಬ್ಬಿ ಬಸವರಾಜ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಮಂಜುನಾಥ್ ಜೈನ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೀರಾಬಾಯಿ, ಜಿಲ್ಲಾ ಉಪಾಧ್ಯಕ್ಷರಾದ  ಹಣ್ಣಿ ಶಶಿಧರ್, ಜಿಲ್ಲಾ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ  ಈ ಟಿ ಲಿಂಗರಾಜ್, ಮಂಡಲ ಅಧ್ಯಕ್ಷರಾದ ಪೂಜಾರ್ ಮಲ್ಲಿಕಾರ್ಜುನ,  ಸೌಮ್ಯ ಇದ್ದರು.  


ಸುದ್ದಿ ಓದಿ