ಹೂವಿನ ಹಡಗಲಿ

ಹೂವಿನಹಡಗಲಿ ರೈತರಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ

ಹೂವಿನಹಡಗಲಿ ರೈತರಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ


ಲೋಕದರ್ಶನ ವರದಿ 

         ಹೂವಿನಹಡಗಲಿ ಅ.29:  ಕೃಷಿ ಪಂಪ್ಸೆಟ್ಗಳಿಗೆ ನಿರಂತರ ಏಳು ಗಂಟೆಗಳ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿ ನಡೆಸಿದ ಹೋರಾಟಕ್ಕೆ ಯಶಸ್ಸು ದೊರೆತಿದೆ. ಅಧಿಕಾರಿಗಳ ಭರವಸೆಯಂತೆ ತಾಲೂಕಿನ ಐಪಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಆರಂಭವಾಗಿದೆ.ಸೆ.22ರಂದು ರೈತ ಸಂಘ ಮನವಿ ಸಲ್ಲಿಸಿ, ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿತ್ತು.

          ಬಳಿಕ ಅ.15ರಂದು ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಲಾಗಿತ್ತು. ಅಧಿಕಾರಿಗಳ ಮನವಿಯ ಮೇರೆಗೆ ಮುಷ್ಕರ ಮುಂದೂಡಲಾಗಿದ್ದು, ಅ.17ರಂದು ನಡೆದ ಸಭೆಯಲ್ಲಿ ಆರು ದಿನಗಳೊಳಗೆ ವಿದ್ಯುತ್ ಪೂರೈಕೆ ಸುಧಾರಿಸುವ ಭರವಸೆ ನೀಡಲಾಗಿತ್ತು. ಪ್ರಸ್ತುತ ಎರಡು ಬ್ಯಾಚ್ಗಳಲ್ಲಿ ವಿದ್ಯುತ್ ಪೂರೈಕೆ ನಡೆಯುತ್ತಿದೆ. ಮೊದಲ ಬ್ಯಾಚ್ನಲ್ಲಿ ಬೆಳಿಗ್ಗೆ 3ರಿಂದ 10ರವರೆಗೆ ಹಾಗೂ ಎರಡನೇ ಬ್ಯಾಚ್ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನೀಡಲಾಗುತ್ತಿದೆ.

           ಈ ಹಿನ್ನೆಲೆಯಲ್ಲಿ ರೈತ ಸಂಘದ ತಾಲೂಕು ಸಮಿತಿ ಅಧಿಕಾರಿಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿತು. ತಾಲೂಕಿಗೆ ಹೊಸದಾಗಿ ಬಂದ ಕೆಇಬಿ ಅಧಿಕಾರಿಗಳನ್ನು ಸ್ವಾಗತಿಸಿ, ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಮನವಿ ಮಾಡಲಾಯಿತು.ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಸಿಪಿಎಂ ಮುಖಂಡ ಸುರೇಶ ಹಲಗಿ, ಜಿಲ್ಲಾ ಉಪಾಧ್ಯಕ್ಷ ಕೆ.ಮಂಜುನಾಥ್, ಶಿವರಾಜ್ ಎಂ.ಹೊಳಗುಂದಿ ಇದ್ದರು. 


ಸುದ್ದಿ ಓದಿ