ಎಲಬುರ್ಗ

ಜನಸೇವೆಯೇ ಧ್ಯೇಯ, ಪ್ರಾಮಾಣಿಕತೆಯೇ ಗುರುತು! ಯಲಬುರ್ಗಾದ ಯುವ ತಲಾಟಿ ಮಣಿಕಂಠ ಕಟ್ಟಿಮನಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವಿಶೇಷ ವರದಿ : ವೀರೇಶ ಈ ಸ್ಟಾಂಪಿನ

ಜನಸೇವೆಯೇ ಧ್ಯೇಯ, ಪ್ರಾಮಾಣಿಕತೆಯೇ ಗುರುತು! ಯಲಬುರ್ಗಾದ ಯುವ ತಲಾಟಿ ಮಣಿಕಂಠ ಕಟ್ಟಿಮನಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವಿಶೇಷ ವರದಿ : ವೀರೇಶ ಈ ಸ್ಟಾಂಪಿನ
Service to the people is the mission; integrity is the hallmark! Appreciation for the work style of

 ಯಲಬುರ್ಗಾ 01 : ಸರ್ಕಾರಿ ಅಧಿಕಾರಿಗಳೆಂದರೆ ಕೇವಲ ಕಚೇರಿಗೆ ಸೀಮಿತವಾಗಿರುವವರಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಜವಾದ ಜನಸೇವಕರಾಗಿರಬೇಕು. ಇಂತಹ ಆಡಳಿತಾತ್ಮಕ ಜವಾಬ್ದಾರಿಯ ಮಹತ್ವವನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿರುವ ಯುವ ತಲಾಟಿ ಮಣಿಕಂಠ ಕಟ್ಟಿಮನಿ ಅವರು ಗಮನ ಸೆಳೆಯುತ್ತಿದ್ದಾರೆ. ಯುವ ವಯಸ್ಸಿನಲ್ಲಿಯೇ ಆಡಳಿತಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಮಣಿಕಂಠ ಕಟ್ಟಿಮನಿ ಅವರು ತಮ್ಮ ಕರ್ತವ್ಯದಲ್ಲಿ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಹಾಗೂ ಜನರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವ ಮನೋಭಾವಕ್ಕೆ ಆದ್ಯತೆ ನೀಡುವ ಅಧಿಕಾರಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರು ತಮ್ಮ ಜಮೀನು, ಕಂದಾಯ, ದಾಖಲೆಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾದಾಗ, ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಮಾರ್ಗದರ್ಶನ ನೀಡುವ ಅಧಿಕಾರಿಗಳ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಜನರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಕಾನೂನುಬದ್ಧವಾಗಿ ಕೆಲಸಗಳನ್ನು ನಿರ್ವಹಿಸುವುದು ಮತ್ತು ಸರ್ಕಾರಿ ಸೇವೆಯ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ.  

ಅಧಿಕಾರ ಎನ್ನುವುದು ದರ​‍್ ಪ್ರದರ್ಶಿಸುವ ಸಾಧನವಲ್ಲ, ಜನರ ಸೇವೆ ಮಾಡುವ ಜವಾಬ್ದಾರಿ ಎಂಬ ಸಂದೇಶವನ್ನು ಯುವ ಅಧಿಕಾರಿಗಳು ತಮ್ಮ ಕಾರ್ಯದ ಮೂಲಕ ಸಾರಬೇಕಿದೆ. ಮಣಿಕಂಠ ಕಟ್ಟಿಮನಿ ಅವರಂತಹ ಯುವ ಅಧಿಕಾರಿಗಳ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವ ಇತರ ಸರ್ಕಾರಿ ನೌಕರರಿಗೂ ಪ್ರೇರಣೆಯಾಗಲಿ ಎಂಬುದು ಸಾರ್ವಜನಿಕರ ಆಶಯ. ಅಧಿಕಾರಕ್ಕೆ ಗೌರವ ಬರುವುದು ಹುದ್ದೆಯಿಂದಲ್ಲ, ಆ ಹುದ್ದೆಯಲ್ಲಿ ಮಾಡುವ ಪ್ರಾಮಾಣಿಕ ಸೇವೆಯಿಂದ. ಜನರ ವಿಶ್ವಾಸ ಗಳಿಸುವ ಅಧಿಕಾರಿಯೇ ನಿಜವಾದ ಜನಸೇವಕ. ( ಬಾಕ್ಸ್‌ ಸುದ್ದಿ ) 01. ಮಣಿಕಂಠ ಕಟ್ಟಿಮನಿ, ತಲಾಟಿ ಯಲಬುರ್ಗಾ  “ಸರ್ಕಾರಿ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ, ಅದು ಸಾರ್ವಜನಿಕರ ವಿಶ್ವಾಸ ಮತ್ತು ಜವಾಬ್ದಾರಿಯ ಪ್ರತೀಕ. 

 ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ನಿಯಮಾವಳಿಗಳ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವುದೇ ನನ್ನ ಆದ್ಯತೆ. ಸಾರ್ವಜನಿಕರ ತೃಪ್ತಿಯೇ ನನ್ನ ಸೇವೆಯ ನಿಜವಾದ ಸಾರ್ಥಕತೆ.” 02. ಪ್ರಕಾಶ್ ಎಂ. ನಾಶಿ, ತಹಶೀಲ್ದಾರ್ ಯಲಬುರ್ಗಾ  “ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಕರ್ತವ್ಯನಿಷ್ಠೆ ಅತ್ಯಂತ ಮಹತ್ವದ ಗುಣಗಳು. ಯುವ ಅಧಿಕಾರಿಗಳು ಜನಪರ ಕಾಳಜಿಯೊಂದಿಗೆ ಜವಾಬ್ದಾರಿ ನಿರ್ವಹಿಸಿದಾಗ ಆಡಳಿತದ ಮೇಲಿನ ಸಾರ್ವಜನಿಕರ ವಿಶ್ವಾಸ ಹೆಚ್ಚುತ್ತದೆ. ಮಣಿಕಂಠ  ಕಟ್ಟಿಮನಿ ಅವರಂತಹ ಯುವ ಸಿಬ್ಬಂದಿ ತಮ್ಮ ವೃತ್ತಿಬದ್ಧತೆಯನ್ನು ಮುಂದುವರಿಸಿ ಉತ್ತಮ ಸೇವೆ ಸಲ್ಲಿಸಲಿ ಎಂಬುದು ನಮ್ಮ ಆಶಯ.” 


ಸುದ್ದಿ ಓದಿ