ಎಲಬುರ್ಗ

ಕನ್ನಡ ನಾಡು-ನುಡಿ, ಪರಿಸರ ಸಂರಕ್ಷಣೆಗೆ ಜೂನಿಯರ್ ವಿಷ್ಣುವರ್ಧನ್ ಅಭಿಯಾನ

ಕನ್ನಡ ನಾಡು-ನುಡಿ, ಪರಿಸರ ಸಂರಕ್ಷಣೆಗೆ ಜೂನಿಯರ್ ವಿಷ್ಣುವರ್ಧನ್ ಅಭಿಯಾನ


             ಯಲಬುರ್ಗಾ 28:  ಕನ್ನಡ ನಾಡು-ನುಡಿ, ಸರ್ಕಾರಿ ಶಾಲೆಗಳ ಉಳಿವು, ಪರಿಸರ ಸಂರಕ್ಷಣೆ ಹಾಗೂ ರಸ್ತೆ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುತ್ತಿರುವ ‘ಜೂನಿಯರ್ ವಿಷ್ಣುವರ್ಧನ್‌’ ಎಂದೇ ಖ್ಯಾತರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರ ‘ಡಾ. ವಿಷ್ಣು ದಾದಾ ಕನ್ನಡ ರಥಯಾತ್ರೆ’ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿತು. ಕಳೆದ 11 ವರ್ಷಗಳಿಂದ ರಾಜ್ಯಾದ್ಯಂತ ರಥಯಾತ್ರೆ ನಡೆಸುತ್ತಿರುವ ಅವರಿಗೆ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿದರು.

           ಈ ವೇಳೆ ಮಾತನಾಡಿದ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರು, ಕನ್ನಡದ ಉಳಿವು, ಪರಿಸರ ಸಂರಕ್ಷಣೆ ಮತ್ತು ಸಂಚಾರ ನಿಯಮಗಳ ಪಾಲನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದರು.

              ಯಲಬುರ್ಗಾ ಪೊಲೀಸ್ ಠಾಣೆ ಪಿಎಸ್‌ಐ ವಿಜಯ ಪ್ರತಾಪ್ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್‌ ಬಳಸಬೇಕು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬಾರದು ಎಂದು ತಿಳಿಸಿದರು.                 

           ಈ ಸಂದರ್ಭದಲ್ಲಿ ಎಎಸ್‌ಐ ಕಲ್ಲಪ್ಪ ತಲಕಲ್, ಪ್ರಕಾಶ್ ಎಚ್, ಸಿಬ್ಬಂದಿಗಳಾದ ಬಾಳನಗೌಡ ಪೊಲೀಸ್ ಪಾಟೀಲ್ , ಶರಣಪ್ಪ ಕಲಕಬಂಡಿ, ಬಸಯ್ಯ ಶೇಶಿಮಠ , ವಿಠಲ್ ಗೌಡರ್,  ಆನಂದ ಬಾವಿಕಟ್ಟಿ, ರೇವಣಸಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ