ಎಲಬುರ್ಗ

ಶಿಕ್ಷಣ, ಸಾಹಿತ್ಯ ಕ್ಷೇತ್ರದ ಸಾಧಕಿ ಸುನಿತಾ ಪತಂಗರಾಯಗೆ ರಾಜ್ಯಮಟ್ಟದ ‘ಬಸವಭೂಷಣ’ ಪ್ರಶಸ್ತಿ

ಶಿಕ್ಷಣ, ಸಾಹಿತ್ಯ ಕ್ಷೇತ್ರದ ಸಾಧಕಿ ಸುನಿತಾ ಪತಂಗರಾಯಗೆ ರಾಜ್ಯಮಟ್ಟದ ‘ಬಸವಭೂಷಣ’ ಪ್ರಶಸ್ತಿ
State-level 'Basavabhushan' award to Sunita Patangaraya, an achiever in the field of education and l


          ಯಲಬುರ್ಗಾ: ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಯಲಬುರ್ಗಾದ ಬಸವಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಕವಯತ್ರಿ ಸುನಿತಾ ಪತಂಗರಾಯ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ‘ಬಸವಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.  

            ಬಸವನಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನದಿಂದ ನೀಡಲಾಗುವ ಈ ಗೌರವಕ್ಕೆ ಸುನಿತಾ ಪತಂಗರಾಯ ಅವರು ಭಾಜನರಾಗಿರುವುದು ಯಲಬುರ್ಗಾ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕಿಯಾಗಿ ಮಕ್ಕಳಲ್ಲಿ ಜ್ಞಾನದ ಬೆಳಕು ಮೂಡಿಸುವುದರ ಜತೆಗೆ, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರ ಸಾಧನೆಗೆ ಈ ಪ್ರಶಸ್ತಿ ಮತ್ತೊಂದು ಮಹತ್ವದ ಗರಿ ಮೂಡಿಸಿದೆ.                  

           ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಹಾಗೂ ಕವನಗಳ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಾ ಓದುಗರ ಗಮನ ಸೆಳೆದಿರುವ ಸುನಿತಾ ಪತಂಗರಾಯ ಅವರು, ಶಿಕ್ಷಣ ಮತ್ತು ಸಾಹಿತ್ಯವನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಮೌಲ್ಯಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಅವರು, ತಮ್ಮ ವೃತ್ತಿಪರ ಬದ್ಧತೆ ಮತ್ತು ಸೃಜನಶೀಲ ಚಿಂತನೆಯ ಮೂಲಕ ಗುರುತಿಸಿಕೊಂಡಿದ್ದಾರೆ.  

          ಈಗಾಗಲೇ ಎರಡು ಬಾರಿ ‘ಉತ್ತಮ ಶಿಕ್ಷಕಿ’ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಅವರ ಸಾಧನೆಗೆ ಇದೀಗ ರಾಜ್ಯಮಟ್ಟದ ‘ಬಸವಭೂಷಣ’ ಪ್ರಶಸ್ತಿಯ ಗರಿ ಸೇರೆ​‍್ಡಯಾಗಿದೆ. ಶಿಕ್ಷಣ ಸೇವೆಯ ಜತೆಗೆ ಸಾಹಿತ್ಯ ಕೃಷಿಯಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿರುವ ಸುನಿತಾ ಪತಂಗರಾಯ ಅವರ ಈ ಸಾಧನೆ ಶಿಕ್ಷಕ ವೃಂದಕ್ಕೆ ಹಾಗೂ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿದ್ದು, ಯಲಬುರ್ಗಾ ತಾಲೂಕಿನ ಶೈಕ್ಷಣಿಕ ಮತ್ತು ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. 


ಸುದ್ದಿ ಓದಿ