ನಿವೃತ್ತಿಯ ಬಳಿಕ ಒಂದಾದ SSLC-PUC ಗೆಳೆಯರ ಬಳಗ
ಯಲಬುರ್ಗಾ 14 : 1981ರಿಂದ 1984ನೇ ಸಾಲಿನ sslc ಮತ್ತು puc ಗೆಳೆಯರ ಬಳಗದ ಸದಸ್ಯರು ವಿವಿಧ ಇಲಾಖೆಗಳ ಸೇವೆಯಿಂದ ನಿವೃತ್ತರಾದ ಬಳಿಕ ಒಂದೆಡೆ ಸೇರಿ ಸ್ನೇಹಮಿಲನ ನಡೆಸಿದರು. ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಪರಸ್ಪರ ಸುಖ-ದುಃಖಗಳನ್ನು ಹಂಚಿಕೊಂಡು ಆತ್ಮೀಯವಾಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಇಮಾಮಸಾಬ್ ಬೂದಿ, ಅಮರೇಶ ಗಾಂಜಿ, ರವೀಂದ್ರ ಪತ್ತಾರ, ವಿರುಪಾಕ್ಷಪ್ಪ ಗಾಂಜಿ, ಗೋವಿಂದಾಚಾರ್ಯ ಹೇಮಾದ್ರಿ, ಶಂಕರ್ಪ ಗಾಂಜಿ, ಸಂಗಪ್ಪ ಜಾಲಿಹಾಳ್, ಮೈಲಾರರಾವ್ ಎ.ಎಂ., ಹನಮಂತರಾವ್ ಪಾಟೀಲ, ಎ.ಎಂ. ಖಾಜಿ, ಸುಧಾಶರಣ ಗದಗ, ಗುಲಾಮಹಮ್ಮದ್ ಖಾಜಿ, ಸಂಗಪ್ಪ ಹಳ್ಳಿ, ಸಿದ್ದಪ್ಪ ಬಳಿಗಾರ ಹಾಗೂ ರೇಣುಕಾ ಸಿ. ಉಪಸ್ಥಿತರಿದ್ದರು.