ಎಲಬುರ್ಗ

ಶ್ರೀ ವಿಜಯ ದುರ್ಗಾದೇವಿ ಜಾತ್ರೆ: ಭವ್ಯ ಮೆರವಣಿಗೆಯಲ್ಲಿ ಭಕ್ತಿಭಾವದ ಸಂಭ್ರಮ

ಶ್ರೀ ವಿಜಯ ದುರ್ಗಾದೇವಿ ಜಾತ್ರೆ: ಭವ್ಯ ಮೆರವಣಿಗೆಯಲ್ಲಿ ಭಕ್ತಿಭಾವದ ಸಂಭ್ರಮ

            ಯಲಬುರ್ಗಾ ; ಪಟ್ಟಣದ ಆರಾಧ್ಯ ದೇವತೆ ಶ್ರೀ ವಿಜಯ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಪುರಾಣದ ಮಹಾಮಂಗಲದೊಂದಿಗೆ ಜಾತ್ರೆಯ ಸಂಭ್ರಮ ಕಳೆಗಟ್ಟಿದ್ದು, ದೇವಿಯ ಭವ್ಯ ಮೆರವಣಿಗೆ ಪಟ್ಟಣದ ಧಾರ್ಮಿಕ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.

           ಜಾತ್ರೆಯ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸಲಿಂಗೇಶ್ವರ ಸ್ವಾಮೀಜಿ ಹಾಗೂ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕುಂಭ-ಕಳಸಗಳ ವೈಭವ, ಡೊಳ್ಳು ಕುಣಿತದ ಸದ್ದು ಹಾಗೂ ವೀರಗಾಸೆ ಕಲಾವಿದರ ಪ್ರದರ್ಶನ ನೋಡುಗರ ಗಮನ ಸೆಳೆದವು.

            ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ದೇವಿಯ ಮೇಲಿನ ತಮ್ಮ ಭಕ್ತಿಯನ್ನು ಸಮರ​‍್ಿಸಿದರು. ಜಾತ್ರೆಗೆ ಸುತ್ತಮುತ್ತಲಿನ ಸಂಗನಾಳ, ಹೊಸಳ್ಳಿ, ಕಲ್ಲೂರು, ರಾಜೂರು, ಮುಧೋಳ, ಗೆದಗೇರಿ ಹಾಗೂ ಚಿಕ್ಕಮ್ಯಾಗೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

           ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಅನ್ನಸಂತರೆ​‍್ಣ ಏರಿ​‍್ಡಸಲಾಗಿತ್ತು. ಧಾರ್ಮಿಕ ಪರಂಪರೆ, ಸಾಂಪ್ರದಾಯಿಕ ಕಲಾಪ್ರದರ್ಶನ ಹಾಗೂ ಭಕ್ತರ ಪಾಲ್ಗೊಳ್ಳುವಿಕೆಯಿಂದ ಶ್ರೀ ವಿಜಯ ದುರ್ಗಾದೇವಿ ಜಾತ್ರೆ ಸಡಗರದಿಂದ ನೆರವೇರಿತು. 


ಸುದ್ದಿ ಓದಿ