ಹೂವಿನ ಹಡಗಲಿ

ರಾಜ್ಯ ಹೆದ್ದಾರಿ ಬಂದ್, ಸ್ವಯಂ ಪ್ರೇರಿತ ಅಂಗಡಿ ಮುಚ್ಚಿ ಬೆಂಬಲ ಹೊಳಲುನಲ್ಲಿ ಕಬ್ಬು ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

ರಾಜ್ಯ ಹೆದ್ದಾರಿ ಬಂದ್,  ಸ್ವಯಂ ಪ್ರೇರಿತ ಅಂಗಡಿ  ಮುಚ್ಚಿ ಬೆಂಬಲ ಹೊಳಲುನಲ್ಲಿ ಕಬ್ಬು ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ
State highway blocked; shops closed voluntarily in support; protest held in Holalu demanding the fix

ಹೂವಿನಹಡಗಲಿ :ನ.01- ತಾಲೂಕಿನ ಹೊಳಲು ಗ್ರಾಮದಲ್ಲಿ ನೂರಾರು ರೈತರು ಕಬ್ಬಿನದರ ನಿಗದಿಗೆ ಆಗ್ರಹಿಸಿ ಶನಿವಾರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಪ್ರತಿ ಟನ್ ಕಬ್ಬಿಗೆ  5,500 ರೂ.ಗಳ ನ್ಯಾಯಯುತ ಬೆಲೆ ನಿಗದಿ ಮಾಡಬೇಕೆಂಬ ಒತ್ತಾಯಕ್ಕೆ ಇಡೀ ಹೊಳಲು, ಮೈಲಾರ ಗ್ರಾಮದಲ್ಲಿನ ವ್ಯಾಪಾರ ಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ  ಮುಗ್ಗಟ್ಟು ಬಂದ್ ಮಾಡಿ  ಬೆಂಬಲ ವ್ಯಕ್ತಪಡಿಸಿದ್ದಾರೆ.ರೈತ ಪ್ರತಿಭಟನಾಕಾರರು ಮೈಲಾರ-ತೋರಣ ಗಲ್ಲು ರಾಜ್ಯ ಹೆದ್ದಾರಿ ಬೆಳಗಿನಿಂದ ಸಂಚಾರ ತಡೆದರು.ಈ ಬಾರಿ  ಮಳೆ ಇಲ್ಲದೇ ಅಂತರ್ಜಲ ಕುಸಿದಿದೆ. ಕೊಳವೆ ಬಾವಿ ಗಳು ಸಂಪೂರ್ಣ ಬತ್ತಿ ಹೋಗಿದ್ದು ಕಬ್ಬಿನ ಇಳುವರಿ ಕಡಿಮೆ ಯಾಗಿದೆ ಕೂಡಲೇ ರೈತರ ಬೇಡಿಕೆ ಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹರಪನಹಳ್ಳಿ ಸಹಾಯಕ ಆಯುಕ್ತ ಸುರೇಶ ಕುಮಾರ, ವಿಜಯನಗರ ಎಡಿಸಿ ಪಿ.ಎನ್‌. ಲೋಕೇಶ ಪ್ರತಿಭಟನಾ ಸ್ಥಳಕ್ಕೆ ಬಂದು ಕಬ್ಬಿನ ದರ ನಿಗದಿ ಕುರಿತು ಸರ್ಕಾರ ಕ್ರಮಕೈಗೊಳ್ಳಲಿದೆ. ರಾಜ್ಯ ಹೆದ್ದಾರಿ ಬಂದ್ ಮಾಡದೇ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ರೈತರನ್ನು ಮನವೊಲಿಸಲು ಪ್ರಯತ್ನಿಸಿದರೂ ವಿಜಯಪುರ, ಗೂರ್ಲಾಪೂರ ಬಳಿ ನಡೆಯುತ್ತಿ ರುವ ಕಬ್ಬು ಬೆಳೆಗಾರರ ಪ್ರತಿಭಟನೆ ಕೈ ಬಿಟ್ಟರೇ ಮಾತ್ರ ನಾವು ಬಿಡುತ್ತೇವೆ. ಇಲ್ಲದಿದ್ದರೇ ಇಡೀ ರಾತ್ರಿ ಪ್ರತಿಭಟನೆ ಹೀಗೆ ಮುಂದುವರೆಯಲಿದೆ ಎಂದು ರೈತರು ಬಿಗಿ ಪಟ್ಟು ಹಿಡಿದಿದ್ದರು.ಹೊಳಲು ಪ್ರತಿಭಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ಭೇಟಿ ನೀಡಿ ಪೊಲೀಸ್ ಬಿಗಿ ಬಂದೋಬಸ್ತ್‌ ನಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಜತೆಗೆ ಬಸ್ ಸಂಚಾರ ಇರಲಿಲ್ಲ ಎನ್ನಲಾಗಿದೆ. ಶಿವಯೋಗಿ ಹಾಲ ಸ್ವಾಮಿ ಮಠದ ಅಭಿನವ ಹಾಲವೀರ​‍್ಪಜ್ಜ ಸ್ವಾಮಿ,ರೈತ ಮುಖಂಡರಾದ ಕೋಡಬಾಳ ಚಂದ್ರ​‍್ಪ, ಕೋಡಬಾಳ ಹನುಮಂತಪ್ಪ, ಹರವಿ ಪ್ರಕಾಶ, ಶಿಗ್ಲಿ ಅಶೋಕ, ಹೊಟ್ಟೆಗೌಡ್ರ ಮಂಜುನಾಥ, ಚನ್ನವೀರಗೌಡ, ಮುದ್ದಣ್ಣನವರ ಬಸವರಾಜಪ್ಪ, ನಾರಮ್ಮನವರ ವೀರಣ್ಣ, ಮುದಿಗೇರಿ ನರೇಂದ್ರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ