ಎಸ್.ಎಸ್.ವಿದ್ಯಾಸಂಸ್ಥೆಗೆ ಬಿಇಓ ಬಡದಾನಿ ಭೇಟಿ
ತಾಳಿಕೋಟಿ 14: ಪಟ್ಟಣದ ಎಸ್ ಎಸ್ ವಿದ್ಯಾ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಶುಕ್ರವಾರ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಎಸ್.ಬಡದಾನಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆರಿ್ಬ.ದಮ್ಮುರಮಠ ಹಾಗೂ ತಾಲೂಕಾ ನೋಡಲ್ ಅಧಿಕಾರಿ ಇಲಿಯಾಸಬಾಗವಾನ,ಬಿ ಆರ್ ಸಿ ಕಾಶೀನಾಥ ಸಜ್ಜನ,ಸಿ ಆರ್ ಸಿ ರಾಜು ವಿಜಾಪುರ ಪ್ರೌಢಶಾಲೆಗೆ ಬೇಟಿ ಮಾಡಿ ಶಿಕ್ಷಕರ ನಿರ್ವಹಿಸಿದ ಎಲ್ ಬಿ ಎ ಹಾಗೂ ಎಪ್ ಎಲ್ ಎನ್ ದಾಖಲೆಗಳನ್ನು ಪರೀಶೀಲಿಸಿ ಶಿಕ್ಷಕರಿಗೆ ಕೆಲವು ಅಗತ್ಯ ಸಲಹೆಗಳನ್ನು ಸೂಚಿಸಿದರು.ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಶಿಕ್ಷಕರುಗಳಾದ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎಚ್.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ,ಯು.ಎಚ್ ಗಟನೂರ ಉಪಸ್ಥಿತರಿದ್ದರು.