ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ
ತಾಳಿಕೋಟೆ, 14: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ
ದಿನಾಚರಣೆ ದಿನಾಂಕ: 14/11/2026 ರಂದು ಆಚರಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಎಂ ಸಜ್ಜನ್ ಅವರು ಮಾತನಾಡಿ, ಈ ಮಕ್ಕಳ ದಿನಾಚರಣೆ ಎಂದರೆ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರ್ಲಾಲ್ ನೆಹರುರವರ ಜನ್ಮದಿನ ಈ ಜನ್ಮದಿನವನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾರೆ.
ಅಂದರೆ ಮಕ್ಕಳು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ತಮ್ಮ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಮಕ್ಕಳಿಗೆ ಸಮರೆ್ಣ ಮಾಡಿದರು. ನೆಹರು ಅವರ ವ್ಯಕ್ತಿತ್ವ ಕ್ರಿಯಾಶೀಲ ಮನೋಭಾವ ಬಡವರ ಬಗ್ಗೆ ಕಾಳಜಿ ದೇಶದ ಅಭಿವೃದ್ಧಿಗೆ ತಂದಿರತಕ್ಕಂತಹ ಪಂಚವಾರ್ಷಿಕ ಯೋಜನೆಗಳು ಮತ್ತು ಎಷ್ಟೇ ಶ್ರೀಮಂತ ಕುಟುಂಬದಿಂದ ಬಂದಿದ್ದರು .
ಅದರ ಅಹಂ ಭಾವನೆಯನ್ನು ಅವರು ತಲೆಗೇರಿಸಿಕೊಳ್ಳಲಿಲ್ಲ ಬದಲಾಗಿ ಬಡ ಜನರ ಕಾಳಜಿ,ದೇಶ ಸೇವೆ ಸ್ವತಂತ್ರ ಹೋರಾಟ ಇದರಲ್ಲಿ ಅವರ ಜೀವನವನ್ನು ಪರಿಪೂರ್ಣಗೊಳಿಸಿಕೊಂಡು. ಅಂತಹ ಒಬ್ಬ ಮಹಾನ್ ವ್ಯಕ್ತಿ ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಸಂಭ್ರಮಿಸಿ ಈ ದಿನ ಮಕ್ಕಳೆಲ್ಲ ಸಂತೋಷ ಪಡುವಂತಹ ಒಂದು ದಿನವನ್ನಾಗಿ ಪರಿವರ್ತಿಸಿದ ಧೀಮಂತ ನಾಯಕರು ಹೀಗಾಗಿ ಮಕ್ಕಳೆಲ್ಲರೂ ನೆಹರು ಅವರ ಆದರ್ಶಗಳನ್ನ ತತ್ವಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಪಿಯು ಕಾಲೇಜ್ ಪ್ರಾಚಾರ್ಯ ಶ್ರೀ ಮರೇಣ್ಣ ಸಿಬಿಎಸ್ಇ ಪ್ರಾಚಾರ್ಯ ಜಯಚಂದ್ರ, ಬಿ.ಎಡ್ ಕಾಲೇಜ್ ಪ್ರಾಚಾರ್ಯ ಶ್ರೀ ಎನ್ ಎಮ್ ಕೊಣ್ಣೂರ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಪ್ರವೀಣ ಸರ್ ನಡೆಸಿಕೊಟ್ಟರು.