ತಾಳಿಕೋಟಿ

ಪಟ್ಟಣದಲ್ಲಿ ಅಹಿಂದಾಕ್ರೋಶ ಯಾತ್ರೆಗೆ ಅದ್ದೂರಿ ಸ್ವಾಗತ

ಪಟ್ಟಣದಲ್ಲಿ ಅಹಿಂದಾಕ್ರೋಶ ಯಾತ್ರೆಗೆ ಅದ್ದೂರಿ ಸ್ವಾಗತ


          ತಾಳಿಕೋಟಿ 13: ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಜನಸಾಮಾನ್ಯರ ವೇದಿಕೆ ವತಿಯಿಂದ ನವೆಂಬರ್ 11ರಿಂದ 26ರವರೆಗೆ ಹಮ್ಮಿಕೊಂಡಿರುವ ಅಹಿಂದ ಆಕ್ರೋಶ ಯಾತ್ರೆಯನ್ನು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಜನಸಾಮಾನ್ಯರ ವೇದಿಕೆ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿಗಳಾದ ಎಲ್ಲಪ್ಪ ಹೆಗಡೆ, ಹಾಲುಮತ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯ್ಕಲ್ ಹಾಗೂ ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ ಅವರು ಮಾತನಾಡಿ 2025 ರ ಜಾತಿ ಗಣತಿ ಜಾರಿ, ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ಮರು ಸ್ಥಾಪನೆ, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಲಿ ಹುದ್ದೆಗಳ ಭರ್ತಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಬೇಕು ಎಂಬ ಐದು ಮಹತ್ವದ ಬೇಡಿಕೆಗಳನ್ನು ಇಟ್ಟುಕೊಂಡು ವೇದಿಕೆ ಯಾತ್ರೆ ಹಮ್ಮಿಕೊಂಡಿದೆ ಇದರ ಯಶಸ್ವಿಗೆ ಸಾರ್ವಜನಿಕರ ಸಹಕಾರ ಇರಲಿ ಎಂದು ಕೇಳಿಕೊಂಡರು. ಈ ಸಮಯದಲ್ಲಿ ಸಮುದಾಯದ ಗಣ್ಯರಾದ ಸಾಹೇಬಣ್ಣ ಆಲ್ಯಾಳ, ಬಸವರಾಜ್ ಅಮಲ್ಯಾಳ, ಸುನೀಲ ಹಂಡರಗಲ್, ಭೀಮಣ್ಣ ಕರೆಕಲ್, ಶರಣಪ್ಪ ಹಿರೇಕುರುಬರ, ಸಾಬಣ್ಣ ಬಿರಾದಾರ, ಮಾಳಿಂಗರಾಯ ಪೂಜಾರಿ ಹಾಗೂ ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ