ತಾಳಿಕೋಟಿ

ಆರ್‌.ಎಸ್‌. ಪಾಟೀಲ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಆರ್‌.ಎಸ್‌. ಪಾಟೀಲ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

 

        ತಾಳಿಕೋಟಿ 06 : ಜನನಾಯಕರು ವಿಜಯಪುರದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಆರ್‌.ಎಸ್‌. ಪಾಟೀಲ ಕೂಚಬಾಳ ಅವರ 54ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಯಿತು ಇಂದು ಬೆಳಿಗ್ಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಅಭಿಮಾನಿಗಳಿಂದ ಗೋದಾನ, ಮೇವು ದಾನ ಮತ್ತು ಸಂಕಲ್ಪ ಸೇವೆ ಸಲ್ಲಿಸಲಾಯಿತು.

       ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ ನಾಗರಾಜ ಬಳಗರ,ಕಿಶೋರ್ ಬಡಿಗೇರ, ಕಾಶಿನಾಥ ಗಾಯಕವಾಡ,ಸೇರಿದಂತೆ ಉಪಸ್ಥಿತರಿದ್ದರು.ಬೆಂಗಳೂರಿನ ನಾಗರಬಾವಿ ಸರಸ್ವತಿ ಅನಾಥ ಬಾಲ ಆಶ್ರಮದಲ್ಲಿ ಮಕ್ಕಳಿಗೆ ಉಪಾಹಾರ ಸೇವೆ. ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಭಿಮಾನಿ ಅನಿಲ ಕಳಸನ್ನವರ,ಪ್ರಕಾಶ ಪಾಟೀಲ ,ಶಿವರಾಜ್ ಬಿರಾದಾರ, ಭೀಮನಗೌಡ ಟಕ್ಕಳಕೀ, ಮುತ್ತು ಟಕ್ಕಳಕೀ ಸೇರಿದಂತೆ ಉಪಸ್ಥಿತರಿದ್ದರು.. ಸಂಕಲ್ಪ ಅನಾಥ ಸೇವಾ ನಿರಾಶ್ರಿತರ ಆಶ್ರಮ ಹಾಗೂ ಯಾದಗಿರಿ ಆಶ್ರಮದಲ್ಲಿ ಪ್ರಸಾದ ಸೇವೆ ಸಲ್ಲಿಸಲಾಯಿತು.

       ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ ಕನ್ಯಾಕೋಲುರು, ಮಲ್ಲನಗೌಡ ಪಾಟೀಲ,ಶಿವಾಜಿ ಶಹಾಪುರ,ಸಂತೋಷ ಗಾಯಕವಾಡ ಸೇರಿದಂತೆ ಉಪಸ್ಥಿತರಿದ್ದರು. ಮಸ್ಕಿ ಅಭಿನಂದನ ಸ್ಪೂರ್ತಿ ಧಾಮದಲ್ಲಿ ಒಂದು ದಿನದ ದಾಸೋಹ ಸೇವೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ,ನಾಗರಾಜ ಬಳಗಾರ,ಕಿಶೋರ್ ಬಡಿಗೇರ,ಕಾಶಿನಾಥ ಗಾಯಕವಾಡ,ಸಂತೋಷ ಗಾಯಕವಾಡ,ಮುನ್ನಾ ಠಾಕೂರು, ಶಿವು ದಡ್ಡಿ ಸೇರಿದಂತೆ ಉಪಸ್ಥಿತರಿದ್ದರು. 


ಸುದ್ದಿ ಓದಿ