ಗದಗ

ಗದಗ ಜಿಲ್ಲೆಗೆ ರಾಜ್ಯ ಮಟ್ಟದ ಹೆಮ್ಮೆಯ ಗರಿ ಪ್ರಕೃತಿ ಸ್ವಸಹಾಯ ಸಂಘಕ್ಕೆ ರಾಜ್ಯಮಟ್ಟದ ಕೌಶಲ್ಯ ಕರ್ನಾಟಕ ಪ್ರಶಸ್ತಿ 2026!

ಗದಗ ಜಿಲ್ಲೆಗೆ ರಾಜ್ಯ ಮಟ್ಟದ ಹೆಮ್ಮೆಯ ಗರಿ ಪ್ರಕೃತಿ ಸ್ವಸಹಾಯ ಸಂಘಕ್ಕೆ ರಾಜ್ಯಮಟ್ಟದ ಕೌಶಲ್ಯ ಕರ್ನಾಟಕ ಪ್ರಶಸ್ತಿ 2026!
A feather in the cap for Gadag district: The 'Prakruti' Self-Help Group receives the state-level 'S


          ಗದಗ 06: ಕರ್ನಾಟಕ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಬೆಂಗಳೂರು ಕೌಶಲ್ಯ ಶೃಂಗಸಭೆಹಿ2026ರ ಅಂಗವಾಗಿ ಪ್ರಧಾನ ಮಾಡಲಾಗುವ ಪ್ರತಿಷ್ಠಿತ ರಾಜ್ಯಮಟ್ಟದ ಕೌಶಲ್ಯ ಕರ್ನಾಟಕ ಪ್ರಶಸ್ತಿ 2026ಕ್ಕೆ ಗದಗ ಜಿಲ್ಲೆಯ ಹಾತಲಗೇರಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವ್ಯಾಪ್ತಿಯ ಸಂಭಾಪುರ ಗ್ರಾಮದ ಪ್ರಕೃತಿ ಸ್ವಸಹಾಯ ಗುಂಪು ಆಯ್ಕೆಯಾಗಿರುವುದು.

           ಇಡೀ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ದಿನಾಂಕ:-05-11-2026 ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ನಲ್ಲಿ ನಡೆದ ರಾಜ್ಯ ಮಟ್ಟದ ಸಮಾರಂಭದಲ್ಲಿ ಈ ಸ್ವಸಹಾಯ ಗುಂಪಿನ ಮಹಿಳೆಯರು ಹಾಗೂ ಜಿಲ್ಲಾ ಪಂಚಾಯಿತಿ ಎನ್‌.ಆರ್‌.ಎಲ್‌.ಎಂ. ಸಿಬ್ಬಂದಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು,ಇದು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಗ್ರಾಮೀಣ ಮಹಿಳೆಯರಿಗೆ ಮಾದರಿಯಾಗಿದೆ, ಹಾಗೂ ಇವರ ಪರಿಶ್ರಮ, ಸಾಧನೆ, ಸಂಘಟನಾ ಶಕ್ತಿ ಮತ್ತು ಸ್ವಾವಲಂಬನೆಗೆ ಸಂದ ಗೌರವವಾಗಿದೆ ಎನ್ನಬಹುದು.

           ಜಿಲ್ಲೆಯ ಹಾತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಂಭಾಪುರ ಗ್ರಾಮದ ಸ್ವ ಸಹಾಯ ಸಂಘದ ಮಹಿಳೆಯರ ಈ ಮಹತ್ವದ ಸಾಧನೆಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಹಾಗೂ ಮಾನ್ಯ ಯೋಜನಾ ನಿರ್ದೇಶಕರು ,  ಜಿಲ್ಲಾ ಪಂಚಾಯಿತಿ, ಗದಗ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರವೇ ಕಾರಣವಾಗಿದೆ.ಸದರಿ ಸಮಾರಂಭದಲ್ಲಿ ಮಾನ್ಯ ಘನ ಸರ್ಕಾರದ ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾಽಽಶರಣ್ ಪ್ರಕಾಶ್ ಪಾಟೀಲ್ ರವರು ಪ್ರಕೃತಿ ಸ್ವಸಹಾಯ ಗುಂಪಿಗೆ" ಕೌಶಲ್ಯ ಕರ್ನಾಟಕ ಪ್ರಶಸ್ತಿ 2026" ಯನ್ನು ವಿತರಿಸಿ ಗೌರವಿಸಿದರು. 


ಸುದ್ದಿ ಓದಿ