ಗದಗ

ಭೀಕರ ಬರಗಾಲ ತತ್ತರಿಸಿದ ಅನ್ನದಾತರು

ಭೀಕರ ಬರಗಾಲ ತತ್ತರಿಸಿದ ಅನ್ನದಾತರು


           ಲಕ್ಷ್ಮೇಶ್ವರ" 05 ;  ರಾಜ್ಯದಲ್ಲಿ ಎಂದು ಕಂಡರೆಯದ ಭೀಕರ ಬರಗಾಲ ಆವರಿಸಿದ್ದು ಇದಕ್ಕೆ ಅನ್ನದಾತರು ಕತ್ತರಿಸಿ ಹೋಗಿದ್ದಾರೆ ಕೃಷಿಯನ್ನೇ ನಂಬಿರುವ ಅನ್ನದಾತರಿಗೆ ಕೃಷಿಯನ್ನು ಬಿಟ್ಟರೆ ಅವರ ಬದುಕು ಇಲ್ಲ ಕಾಲಕ್ಕೆ ತಕ್ಕಂತೆ ಮುಂಗಾರು ಹಿಂಗಾರು ಬಿತ್ತನೆ ಉತ್ತಮ ಬೆಳೆ ತೆಗೆಯುವುದೊಂದೇ ಅವರ ಬದುಕುಸಾಲ ಸೂಲ ಮಾಡಿ ಯಾದರೂ ಸಮಯಕ್ಕೆ ತಕ್ಕಂತೆ ಬಿತ್ತನೆ ಮಾಡುತ್ತಾ ಹಲವಾರು ಕನಸುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುವನೇ ಅನ್ನದಾತರ ಆದರೆ ಈ ಸಾರಿ ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾಗಿ ಸಂಪೂರ್ಣ ಬೆಳೆ ನಾಶವಾಗಿದೆ.

          ಇದರಿಂದ ಸಾಕಷ್ಟು ಹಾನಿಯನ್ನು ಅನುಭವಿಸಿದರು ಸಹ ಅನ್ನದಾತರು ದತ್ತಿಗಿಡದೆ ಹಿಂಗಾರು ಬೆಳೆನಾದರೂ ತೆಗೆಯಬೇಕು ಎಂಬ ಕನಸು ಕಂಡಿದ್ದರು ಆದರೆ ಪ್ರಸ್ತುತ ದಿನಮಾನಗಳಲ್ಲಿ ಹಿಂಗಾರು ಮಳೆ ಸಹ ಬೀಳದೆ ಅನ್ನದಾತರು ಕಂಗಲಾಗಿದ್ದಾರೆ ಹಾಗೂ ಕೆಲ ದೇಶದ ಭಾಗದಲ್ಲಿ ಹವಾಮಾನದ ಬದಲಾವಣೆಯಿಂದ ಚಂಡು ಮಾರುತ ಪರಿಣಾಮವಾಗಲು ರಾಜ್ಯದಲ್ಲಿ ಮಳೆ ಆಗಬಹುದು ಎಂಬ ಆಶಾಭಾವನೆಯನ್ನು ಕಟ್ಟಿಕೊಂಡಿದ್ದ ಅನ್ನದಾತರ ಬಾಳು ನುಚ್ಚುನೂರಾಗಿದೆ ಇದರಿಂದ ಇರುವ ಬೆಳೆಯನ್ನು ಹೊರಗುವ ಮೂಲಕ ಭೀಕರ ಬರಗಾಲದಿಂದ ಅನ್ನದಾತರು ತತ್ತರಿಸುವಗಿದ್ದಾರೆ ಮುಂದೆ ಹೇಗೆ ನಮ್ಮ ಬದುಕು ಎಂದು ಚಿಂತೆಯನ್ನು ಪಡುತ್ತಿದ್ದಾರೆ.

               ಅದರಂತೆ ತಾಲೂಕಿನ ಗೊಜನೂರು ಗ್ರಾಮದಲ್ಲಿ ರೈತರು ಬೆಳೆದ ಶೇಂಗಾ ಬೆಳೆಕಾಯಿ ಇಲ್ಲದೆ ಒಣಗಿರು ಬೆಳೆಯನ್ನು ಹರಗುವ ಮೂಲಕ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಿದ್ದಾರೆ ಇನ್ನಾದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ವಿಮಾ ಕಂಪನಿಗಳು ರೈತರ ಬೆಳೆ ವಿಮಾ ಹಣವನ್ನು ಬೇಗನೆ ಬಿಡುಗಡೆಗೊಳಿಸಲು ಸರ್ಕಾರ ರೈತರಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಲು ಮುಂದಾಗಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಕೃಷಿಕ ಸಮಾಜದ ತಾಲೂಕ ಅಧ್ಯಕ್ಷ ಗೊಜನೂರು ಗ್ರಾಮದ ರೈತ ಚೆನ್ನಪ್ಪ ಷಣ್ಮುಖಿ ಅವರು ಆಗ್ರಹಿಸಿದ್ದಾರೆ 


ಸುದ್ದಿ ಓದಿ