ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಪೂರಕವಾದ ಬಹುಶಿಸ್ತೀಯ ಪ್ರದರ್ಶನ: ಡಾ. ರಾಜಶೇಖರ ಪವಾಡ ಶೆಟ್ಟರ
ಲೋಕದರ್ಶನ ವರದಿ
ಗದಗ 05 : ಬಹುಶಿಸ್ತೀಯ ವಸ್ತು ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಕ್ರೀಯಾಶೀಲತೆ, ಸೃಜನಶೀಲತೆ, ಜ್ಞಾನದ ಹರಿವು ಹೆಚ್ಚುವುದರಜೊತೆಗೆ ಪ್ರದರ್ಶನದ ಮೂಲಕ ವೀಕ್ಷಕರಿಗೆ ವಿವರಣೆ ನೀಡುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಮತ್ತು ಸಂವಹನ ಕೌಶಲ್ಯ ಹೆಚ್ಚುವುದೆಂದುಡಾ. ರಾಜಶೇಖರ ಪವಾಡಶೆಟ್ಟರ ತಿಳಿಸಿದರು.
ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಜರುಗಿದ ಬಹುಶಿಸ್ತೀಯ ವಸ್ತು ಪ್ರಾತ್ಯಕ್ಷಿಕೆ ಪ್ರದರ್ಶನ ‘ದರ್ಶನ-2.0’ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.
ಇದುವರೆಗೂ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಾತ್ಯಕ್ಷಿಕೆ ಪ್ರದರ್ಶನಗಳನ್ನು ಏರಿ್ಡಸಲಾಗಿದೆ, ಸಮಾಜ ವಿಜ್ಞಾನ, ಭಾಷೆ, ತಂತ್ರಜ್ಞಾನಗಳ ಕುರಿತಾಗಿ ಬಹುಶಿಸ್ತೀಯ ಪ್ರಾತ್ಯಕ್ಷಿಕೆ ಪ್ರದರ್ಶನ ಏರಿ್ಡಸಿರುವುದು ಅತ್ಯುತ್ತಮ ಕೆಲಸ. ಇಂತಹ ಸ್ತುತ್ಯಾರ್ಹವಾದ ಪ್ರಯೋಗವು ಬೇರೆ ಬೇರೆ ಮಹಾವಿದ್ಯಾಲಯಗಳಿಗೆ ನಿಜಕ್ಕೂ ಮಾದರಿಯಾದದು.
ಈ ಮೂಲಕ ಪುಸ್ತಕದಜ್ಞಾನವು ಪ್ರಾಯೋಗಿಕತೆಯ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಮನವರಿಕೆಯಾಗುವುದು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಬೆಳಸುವಲ್ಲಿ, ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲುಇಂತಹ ವೇದಿಕೆಗಳು ಅತ್ಯುತ್ತಮವಾದ್ದು, ಇಂತಹ ಪ್ರಧರ್ಶನಗಳು ವಿಜ್ಞಾನ್ಕಕೆ ಸೀಮಿತಗೊಳ್ಳದೇ, ಬಹುಶಿಸ್ತೀಯ ನೆಲೆಯಲ್ಲಿ ಯಶಸ್ವಿಯಾಗಿ ನೆಡಸಬಹುದುಎಂಬುದಕ್ಕೆಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಉತ್ತಮ ಹಾದಿ ನಿರ್ಮಿಸಿದೆ ಎಂದುಮುಂದುವರೆದು ಮಾತನಾಡಿದರು.
ನಿವೃತ್ತ ಪ್ರಾಚಾರ್ಯರಾದ ಡಾ. ಸಿ. ಎಸ್. ಹಸಬಿ ಮಾತನಾಡಿ ಕಲಾ ನಿಖಾಯದ ಬಹುತೇಕ ವಿದ್ಯಾರ್ಥಿಗಳು ಹಿಂಜರಿಕೆ, ಕೀಳರಿಮೆಗಳಿಂದ ಬಳಲುತ್ತಿದ್ದು ಅದರಿಂದ ಹೊರಬಂದುತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಲ್ಲಿ ಉಜ್ವಲವಾದ ಭವಿಷ್ಯವಿದೆ. ಇಂತಹ ಮಹತ್ಕಾರ್ಯಕ್ಕೆ ದರ್ಶನ-2.0 ವಸ್ತು ಪ್ರದರ್ಶನಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಜ್ಞಾನಾರ್ಜನೆ ಮಾಡುವ ವಿದ್ಯಾರ್ಥಿಗಳ ಜ್ಞಾನವನ್ನು ಹೊರ ಹಾಕಲು ಈ ಪ್ರದರ್ಶನವು ಉತ್ತಮ ವೇದಿಕೆಯಾಗಿದ್ದು, ತಾವು ಮಾಡಿದ ವಸ್ತುವಿನ ಮಾದರಿಯನ್ನು ವಿವರಿಸುವ ಪರಿ ನಿಜವಾದಜ್ಞಾನದಅನ್ವಯಿಕತೆ. ಇಂತಹಅತ್ಯುತ್ತಮಕಾರ್ಯ ಮಾಡಿದ ಮಹಾವಿದ್ಯಾಲಯವುಇನ್ನೂ ಹೆಚ್ಚು ಬೆಳವಣಿಗೆಯಾಗಲಿ ಎಂದು ಹಾರೈಸಿದರು.