ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ವೀರೇಶ್ ಇ. ದಮ್ಮೂರು ಆಯ್ಕೆ
ಬಳ್ಳಾರಿ 05 : ರಾಜ್ಯ 6 ರಿಂದ 8ನೇ ತರಗತಿವರೆಗಿನ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ 2026-31ನೇ ಸಾಲಿನ ಐದು ವರ್ಷದ ಅವಧಿಗೆ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಶಿಕ್ಷಕ ವೀರೇಶ್ ಇ. ದಮ್ಮೂರು ಅವರು ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026ರ ನವೆಂಬರ್ 1ರಂದು ನಡೆದ ಸಂಘದ ಕೇಂದ್ರ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ವೀರೇಶ್ ಇ. ದಮ್ಮೂರು ಅವರನ್ನು ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಸಂಘವನ್ನು ಸ್ಥಾಪಿಸಿದ ದಿನದಿಂದಲೂ ಸಂಘದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಕಾರ್ಯನಿರ್ವಹಿಸಿರುವ ಇವರು ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದೀಗ ಜಿಲ್ಲಾ ಮಟ್ಟದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಂಘಟನಾತ್ಮಕ ಕೆಲಸವನ್ನು ಪರಿಗಣಿಸಿ ರಾಜ್ಯ ಘಟಕವು ಇವರಿಗೆ ರಾಜ್ಯ ಮಟ್ಟದ ಜವಾಬ್ದಾರಿಯನ್ನು ನೀಡಿದೆ.
ವೀರೇಶ್ ಇ. ದಮ್ಮೂರು ಸಂಘಟನೆಯ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಕ್ಷಕರು, ಮುಖಂಡರು, ಪದಾಧಿಕಾರಿಗಳು, ಹಿತೈಷಿಗಳು ಹಾಗೂ ದಮ್ಮೂರು ಗ್ರಾಮದ ಹೆಚ್.ಹೊನ್ನೂರ್ಪ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.