ಗದಗ

ಗಯಾಳುಗಳ ಆರೋಗ್ಯ ವಿಚಾರಿಸಿದ- ಬಸವರಾಜ್ ಬೊಮ್ಮಾಯಿ

ಗಯಾಳುಗಳ ಆರೋಗ್ಯ ವಿಚಾರಿಸಿದ- ಬಸವರಾಜ್ ಬೊಮ್ಮಾಯಿ


            ಲಕ್ಷ್ಮೇಶ್ವರ  05 ; "ನಗರದ ಹೊರವಲಯದ ಶಿಗ್ಲಿ ರಸ್ತೆಯಲ್ಲಿ ಮೊನ್ನೆಯ ದಿನ ಸಂಭವಿಸಿದ ಬಸ್ ಮತ್ತು ಟ್ರ್ಯಕ್ಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತಾಪಿ ವರ್ಗದ ಗಾಯಳುಗಳನ್ನು ಬುಧವಾರ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಗದಗ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಅವರು ಖುದ್ದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

           ಈ ಸಮಯದಲ್ಲಿ ಭರತ ಬೊಮ್ಮಾಯಿ,ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷ್ಮೇಶ್ವರ ತಾಲೂಕಾ ಘಟಕದ ಅಧ್ಯಕ್ಷರು ಹಾಗೂ ಸಮಗ್ರ ರೈತ ಸಂಘಟನೆ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಮಾಗಡಿ,ಮುಖಂಡರಾದ ಹೊನ್ನಪ್ಪ ವಡ್ಡರ ಅವರು ಇದ್ದರು .ದೈನಂದಿನ ಕಷ್ಟದ ಕೆಲಸಗಳಿಗೆ ತೆರಳುತ್ತಿದ್ದ ವೇಳೆ ಇಂತಹ ದುರ್ಘಟನೆ ಸಂಭವಿಸಿರುವುದು ಅತ್ಯಂತ ದುಃಖದ ಸಂಗತಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಗಾಯಾಳುಗಳ ಬಳಿ ತೆರಳಿ, ವೈದ್ಯರೊಂದಿಗೆ ಚಿಕಿತ್ಸೆಯ ಪ್ರಗತಿಯ ಬಗ್ಗೆ ಚರ್ಚೆ ನಡೆಸಲಾಯಿತು.

          ಈ ಕಷ್ಟದ ಸಮಯದಲ್ಲಿ ಕುಟುಂಬದವರಿಗೆ ಧೈರ್ಯ ತುಂಬಿ,ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವದು ಹಾಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಗಾಯಗೊಂಡ ಎಲ್ಲರೂ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಗುಣಮುಖರಾಗಿ ಮರಳಿ ಎಂದರು 


ಸುದ್ದಿ ಓದಿ