ಗದಗ

ರಾಜ್ಯ ಮಟ್ಟದ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಗದಗ ಜಿಲ್ಲೆಯ ಪ್ರಕೃತಿ ಸ್ವ-ಸಹಾಯ ಸಂಘ

ರಾಜ್ಯ ಮಟ್ಟದ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಗದಗ ಜಿಲ್ಲೆಯ ಪ್ರಕೃತಿ ಸ್ವ-ಸಹಾಯ ಸಂಘ
'Prakruthi' Self-Help Group from Gadag district selected for the state-level 'Kaushalya Karnataka' (

ಲೋಕದರ್ಶನ ವರದಿ 

                ಗದಗ05 : ಮೀನು ಸಾಕಾಣಿಕೆಯಲ್ಲಿ ತೊಡಗಿಕೊಂಡು ಸ್ವಾವಲಂಬನೆ ಹಾದಿಯಲ್ಲಿರುವ ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಕೃತಿ ಮಹಿಳಾ ಸ್ವ-ಸಹಾಯ ಸಂಘವು 2026ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸ್ವ-ಸಹಾಯ ಸಂಘದ ವಲಯದಲ್ಲಿ ಸಂತಸ ಮೂಡಿಸಿದೆ.

                ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ ಒಟ್ಟು 8 ಸ್ವ-ಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗಿದ್ದು,  ಈ ಪೈಕಿ ಪ್ರಕೃತಿ ಸ್ವ ಸಹಾಯ ಸಂಘವನ್ನೂ ಸಹ ಆಯ್ಕೆ ಮಾಡಲಾಗಿದೆ. ಇದೇ ತಿಂಗಳು 5 ರಂದು ಬೆಂಗಳೂರಿನ ಹೊಟೆಲ್ ಲಲಿತ್ ಅಶೋಕನಲ್ಲಿ  ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಜರುಗುವ ‘ಬೆಂಗಳೂರು ಕೌಶಲ್ಯ ಸಮ್ಮಿತ್‌’ ಕಾರ್ಯಕ್ರಮದಲ್ಲಿ ಕೌಶಲ್ಯ ಕರ್ನಾಟಕ ಪ್ರಶಸ್ತಿ ಪ್ರಶಸ್ತಿ ನೀಡಲಾಗುತ್ತಿದೆ.                    ಜೀವನೋಪಾಯಕ್ಕಾಗಿ ಕೇವಲ ಕೃಷಿ ಮತ್ತು ಕೂಲಿ ಕೆಲಸಗಳಿಗೆ ಮಾತ್ರ ಸೀಮಿತಗೊಳ್ಳದೇ, ಸ್ಥಳೀಯ ಸಂಪನ್ಮೂಲಗಳನ್ನು ಸಮರ​‍್ಕವಾಗಿ ಬಳಸಿಕೊಂಡಲ್ಲಿ ಹೊಸ ಉದ್ಯೋಗಾವಕಾಶಗಳನ್ನೂ ಸಹ ರೂಪಿಸಬಹುದು ಎಂಬುದಕ್ಕೆ ಗದಗ ತಾಲೂಕಿನ ಸಂಬಾಪುರ ಗ್ರಾಮದ ಪ್ರಕೃತಿ ಸ್ವಸಹಾಯ ಸಂಘದ ಮಹಿಳೆಯರು ಉತ್ತಮ ಉದಾಹಣೆಯಾಗಿದ್ದಾರೆ. ಸಣ್ಣ ಕೆರೆಯೊಂದರಲ್ಲಿ ಮೀನು ಸಾಕಾಣಿಕೆ ಕೈಗೊಂಡು ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಇತರೇ ಮಹಿಳೆಯರಿಗೆ ಮಾದರಿಯಾಗಿದ್ದಾರೆ.  


ಸುದ್ದಿ ಓದಿ