ಗದಗ

ಲಿಜ್ಜತ್ ಪಾಪಡ್ ತಯಾರಿಕೆಯಿಂದ ಮಹಿಳೆಯರಲ್ಲಿ ಆರ್ಥಿಕ ಶಕ್ತಿಯ ಬಲವರ್ಧನೆ : ಪ್ರಭು ಎಲ್ ಬುರಬುರೆ

ಲಿಜ್ಜತ್ ಪಾಪಡ್ ತಯಾರಿಕೆಯಿಂದ ಮಹಿಳೆಯರಲ್ಲಿ ಆರ್ಥಿಕ ಶಕ್ತಿಯ ಬಲವರ್ಧನೆ : ಪ್ರಭು ಎಲ್ ಬುರಬುರೆ
Strengthening the Economic Empowerment of Women Through the Production of Lijjat Papad: Prabhu L. B

ಲೋಕದರ್ಶನ ವರದಿ 

             ಗದಗ 31:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 24 ನೇ ವಾರ್ಡಿನಲ್ಲಿನ ನಾಲ್ವಡ ಗಲ್ಲಿಯ   ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡ ಹಾಗೂ   ಮಹಿಳಾ ಗ್ರಹ ಉದ್ಯೋಗ ಲಿಜ್ಜತ್ ಪಾಪಡ್ ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 31/ ರ ಶನಿವಾರ ಬೆಳಿಗ್ಗೆ 11:30 ಕ್ಕೆ ಬಡಾವಣೆಯ ಮಹಿಳೆಯರಿಗಾಗಿ ಗ್ರಹೋಧ್ಯಮವಾದ   ಮಹಿಳಾ ಗ್ರಹ ಉದ್ಯೋಗ ಲಿಜ್ಜತ್ ಪಾಪಡ್ ಕುರಿತು ಪ್ರೋತ್ಸಾಹ ಸಭೆಯನ್ನು  ಸನ್ಮಾನ್ಯ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್ ಬುರಬುರೆ ರವರ ನೇತೃತ್ವದಲ್ಲಿ ಜರುಗಿತು. 

             ಸಭೆಯ ಕೇಂದ್ರ ಬಿಂದುವಿನಲ್ಲಿ ಮಾತನಾಡಿದ ಪ್ರಭು ಎಲ್ ಬುರಬುರೆ ರವರು ಕಳೆದ 69 ವರ್ಷಗಳ ಹಿಂದೆ ಯಾವುದೇ ಅತ್ಯಾಧುನಿಕ ಪ್ರಗತಿಯಿಲ್ಲದೆ ಮುಂಬಯಿಯ  7 ಜನ ಮಹಿಳೆಯರ ಸಂಘಟನೆಯ ಶಕ್ತಿಯೊಂದಿಗೆ ಅಂದಿನ ಕಾಲದಲ್ಲಿ ಕೇವಲ 80 ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡು ಪಾಪಡ್ ಉತ್ಪಾದನೆಯನ್ನು ಪ್ರಾರಂಭಿಸಿ ಇಂದು ವಾರ್ಷಿಕ 1600 ಕೋಟಿಗಿಂತಲೂ ಹೆಚ್ಚಿನ ವಹಿವಾಟು ನಡೆಸುತ್ತಿರುವ ಏಕೈಕ ಮಹಿಳಾ ಗ್ರಹೋಧ್ಯೇಮವಾಗಿ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿರುವ ಸಂಸ್ಥೆಯೇ ಶ್ರೀ ಮಹಿಳಾ ಗ್ರಹ ಉದ್ಯೋಗ ಲಿಜ್ಜತ್ ಪಾಪಡ್ ಆಗಿದೆ. ಈ ಒಂದು ಉತ್ಪಾದನಾ ಘಟಕವನ್ನು ಸನ್ಮಾನ್ಯ ಶಾಸಕರಾದ ಎಚ್ ಕೆ ಪಾಟೀಲ್ ಸಾಹೇಬರು ಹಾಗೂ ಮಾಜೀ ಶಾಸಕರಾದ ಡಿ ಆರ್ ಪಾಟೀಲ್ ರವರ ಪರಿಕಲ್ಪನೆಯ ದ್ಯೋತಕವಾಗಿ ಇಂದು ನಮ್ಮ ಗದಗ ನಗರದಲ್ಲಿಯು ಈ ಒಂದು ವಿಶೇಷ ಮಹಿಳಾ ಉದ್ಯಮದ ಘಟಕವನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಲಿಜ್ಜತ್ ಪಾಪಡ್ ತಯಾರಿಕೆಯಿಂದ ಮಹಿಳೆಯರಲ್ಲಿ ಆರ್ಥಿಕ ಶಕ್ತಿಯ ಬಲವರ್ಧನೆಗೆ ನಾಂದಿ ಎಂದು ನುಡಿದರು. 

                  ಈ ಸಂಧರ್ಭದಲ್ಲಿ   ಶ್ರೀ ಮಹಿಳಾ ಗ್ರಹೋಧ್ಯಮದ ಬೆನ್ ಸಂಪರ್ಕಿತರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ಎಚ್ ಕೆ ಪಾಟೀಲ್ ಸೇವಾ ತಂಡದ ಸಂಯೋಜಕರಾದ ಎಮ್ ಸಿ ಶೇಖ್, ರಾಮಣ್ಣ ಬಾಕಳೆ, ಕ್ಯಾಪ್ಟನರಾದ ಶಿವಪ್ಪ ಬಳ್ಳಾರಿ, ದಾದಾಪೀರ ಮುಂಡರಗಿ, ನಾಗರಾಜ್ ಕುರಗೋಡ್, ಕುಲಭೂಷಣ ಹುಯಿಲಗೋಳ, ಸಲೀಮ್ ಮಕಾನದಾರ,ಎಚ್ ಕೆ ಪಾಟೀಲ್ ಸೇವಾ ತಂಡದ ವ್ಯವಸ್ಥಾಪಕರಾದ ರಾಘವೇಂದ್ರ ಪಾಲನಕರ, ಬಡಾವಣೆಯ ಮಹಿಳೆಯರಾದ ಪೂರ್ಣಿಮಾ ಕಂದಗಲಮಠ, ನೇತ್ರಾ ಗಾಳೆಪ್ಪನವರ, ಅನುಷಾ ಗಾಳೆಪ್ಪನವರ, ವೀಣಾ ಗಾಳೆಪ್ಪನವರ, ಜಯಲಕ್ಷ್ಮಿ ನರಗುಂದ, ಲಲಿತಾ ವತ್ಸಲಾ, ವಿಜಯಲಕ್ಶ್ಮೀ, ಮೇಲಮಾಳಗಿ, ವೀಣಾ, ಮುಜುಮದಾರ, ಶಾಂತಾ ಅಂಗಡಿ, ಲಕ್ಷ್ಮೀ ಬೀಕ್ಷಾವತಿಮಠ, ಸಿಂಧೂ ರಾಯ್ಕರ, ಅಕ್ಷತಾ ಅನ್ವೇಕರ, ಸುಧಾ ಜಿನಗಾ, ಶೋಭಾ, ರುಕ್ಮಿಣಿ ರಾಯ್ಕರ, ಪ್ರಿಯಾ ರೇವಣಕರ, ನೇತ್ರಾ ಪಟ್ಟಣಶೆಟ್ಟಿ, ಭವ್ಯಾ ಜಾಧವ, ಪಾರ್ವತಿ ಪಟ್ಟಣಶೆಟ್ಟಿ,ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ