ಹಾವೇರಿ

ಕಾಂಗ್ರೆಸ್ ಸಂಘಟನೆ ಬಲವರ್ಧನೆಗೆ ಸೃಜನ್ ಅಭಿಯಾನ ಆರಂಭ

ಕಾಂಗ್ರೆಸ್ ಸಂಘಟನೆ ಬಲವರ್ಧನೆಗೆ ಸೃಜನ್ ಅಭಿಯಾನ ಆರಂಭ


             ಹಾವೇರಿ 05 : ಸಂಘಟನ್ ಸೃಜನ್ ಅಭಿಯಾನ -2 ನೇ ಹಂತ ಆರಂಭಿಸಿದೆ.ಹಾವೇರಿ ಶಹರ ಹಾಗೂ ಕರ್ಜಗಿ ಬ್ಲಾಕ್ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವೀಕ್ಷಕ ಹೆಚ್‌. ಬಿ.ಮಂಜುನಾಥ ಹೇಳಿದರು.ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಬ್ಲಾಕ್ ನಲ್ಲಿ ಹೋಗಿ ಮುಖಂಡರು, ಕಾರ್ಯಕರ್ತರು ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು.40-60 ವರ್ಷದೊಳಗಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕು. ಕನಿಷ್ಠ 3-5 ಅಭ್ಯರ್ಥಿಗಳ ಪಟ್ಟಿಯನ್ನು ಕಳಿಸಲಾಗುವುದು. ''

               ಮುಂದಿನ ಜಿಪಂ,ತಾಪಂ, ಗ್ರಾಪಂ ಚುನಾವಣೆ ಹಿತದೃಷ್ಟಿಯಿಂದ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಸಂಕಲ್ಪ ಮಾಡಲಾಗಿದೆ.. ಬಿಎಲ್‌. ಎ-2 ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಲಿದ್ದಾರೆ.ಕಾರ್ಯಕರ್ತರನ್ನು ಹುರುಪು ಗೊಳಿಸುವ ನಿಟ್ಟಿನಲ್ಲಿ ಮುಂದಾಗುತ್ತೇವೆ.ಪಕ್ಷದ ಮುಖಂಡರು, ಶಾಸಕರು, ಜಿಲ್ಲಾಧ್ಯಕ್ಷರು, ನಿಗಮ ಮಂಡಳಿ ಅವರ ಸಮ್ಮುಖದಲ್ಲಿ ಅರ್ಜಿ ಆಹ್ವಾನಿಸಲಾಗುವುದು. ಪ್ರತಿ ಬ್ಲಾಕ್ ನಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಲಾಗುವುದು ಎಂದರು.ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ 450 ಬ್ಲಾಕ್ ಕಾಂಗ್ರೆಸ್ ಸಮಿತಿ ಇದೆ.

                 ಅನೇಕ ವರ್ಷಗಳಿಂದ 10,15,20 ವರ್ಷಗಳ ಕಾಲ ಸಂಘಟನೆ ಮಾಡಿದ್ದಾರೆ. ಹೊಸ ಶಕ್ತಿ ಬರುವ ನಿಟ್ಟಿನಲ್ಲಿ ಬೇರು ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಹರಿಪ್ರಸಾದ್ ಅವರು ಸಕ್ರಿಯವಾಗಿ ಪಕ್ಷ ಕಟ್ಟಲು ಮುಂದಾಗಿದ್ದಾರೆ. ದೇಶದ 950 ಸಂಘಟನಾ ಜಿಲ್ಲೆಗಳು ಇವೆ. ಈ ಎಲ್ಲ ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕರ್ನಾಟಕ 450 ಬ್ಲಾಕ್ ಕಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯ, ಮಹಿಳೆಯರು, ಎಸ್ಸಿ, ಎಸ್ಟಿ,ಒಬಿಸಿ ಎಲ್ಲರಿಗೂ ನ್ಯಾಯ ಒದಗಿಸಬೇಕು..

             ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳು ಇದ್ದು, 12 ಬ್ಲಾಕ್ ಕಾಂಗ್ರೆಸ್ ಕಮಿಟಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಆರು ಶಾಸಕರು ಇದ್ದು, ಬರುವ 2028ರ ಚುನಾವಣೆಯಲ್ಲಿ ಮತ್ತೊಮ್ಮೆ ಎಲ್ಲ ಶಾಸಕರು ಆಯ್ಕೆ ಆಗಬೇಕು. 2029ರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಂಸದರು ಆಗಬೇಕು. ಪ್ರತಿ ಬ್ಲಾಕ್ ನಲ್ಲಿ 5 ಜನರ ಆಕಾಂಕ್ಷಿಗಳ ಪಟ್ಟಿ ಸೂಚಿಸಲು ತಿಳಿಸಿದ್ದಾರೆ. ಈ ಪೈಕಿ ಒಬ್ಬರು ಮಹಿಳೆಯರು ಕಡ್ಡಾಯವಾಗಿ ಇರಬೇಕು ಎಂದರು.

                  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಪ್ರಜಾಪ್ರಭುತ್ವ ಕಗ್ಗೊಲೆಯನ್ನು ಬಿಜೆಪಿ ಮಾಡುತ್ತಿದೆ. ಎಸ್‌ಐಆರ್, ಸಂವಿಧಾನ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ.ಎಸ್‌ಐಆರ್ ಪ್ರಕ್ರಿಯೆ ಖಂಡಿಸಿ ನ. 5ರಂದು ಬೆಳಗ್ಗೆ 11 ಘಂಟೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ.

            ಜಿಲ್ಲೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವೀಕ್ಷಕರಾದ ಟಿ.ಎಂ.ಶಾಹಿದ್, ಪುಷ್ಪಾ ನಾಯ್ಕ, ಕೋಟ್ರೇಶಪ್ಪ ಬಸೇಗಣ್ಣಿ, ಎಂ.ಎಂ.ಹಿರೇಮಠ, ಎಂ.ಎಂ. ಮೈದೂರ, ಗುಡ್ಡನಗೌಡ ಅಂದಾನಿಗೌಡ್ರ, ಶಂಕರ ಮೆಹರವಾಡೆ, ಅತಾವುಲ್ಲ ಖಾಜಿ, ಮಹಾದೇವಗೌಡ ಗಾಜಿಗೌಡ್ರ, ಲತಾ ಹುಗ್ಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ