ಹಾವೇರಿ

ಹಾವೇರಿ ಜಿಲ್ಲೆಯಿಂದ 25ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಯಾಣ

ಹಾವೇರಿ ಜಿಲ್ಲೆಯಿಂದ 25ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಯಾಣ


       ಹಾವೇರಿ 29:  “ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು,  ಕೋಮು ಸೌಹಾರ್ದತೆಗಾಗಿ, ಸಂವಿಧಾನದ 371(ಜೆ) ಕಲಂ  ಸಮರ​‍್ಕವಾಗಿ ಜಾರಿಗಾಗಿ ಕಲಬುರಗಿಯಲ್ಲಿ ನಡೆಯುವ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌.ಎಫ್‌.ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನಕ್ಕೆ ಹಾವೇರಿ ಜಿಲ್ಲೆಯಿಂದ 25 ಕ್ಕೂ ಅಧಿಕ ಪ್ರತಿನಿಧಿಗಳು ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.

      ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐನ 17ನೇ ರಾಜ್ಯ ವಿದ್ಯಾರ್ಥಿಗಳ ಸಮ್ಮೇಳನವು ಅಕ್ಟೋಬರ್ 30, 31 ಮತ್ತು ನವೆಂಬರ್ 01, 2026 ಕಲಬುರಗಿಯ ಕೆಪಿಟಿಸಿಎಲ್ ಭವನ ಕರುಣೇಶ್ವರ ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 30, ಶುಕ್ರವಾರದಂದು ಕಲಬುರಗಿ ನಗರದಲ್ಲಿ ಬೃಹತ್ ವಿದ್ಯಾರ್ಥಿಗಳ ಮೆರವಣಿಗೆ ಮತ್ತು ಜಗತ್ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಯಲಿದೆ.

          17ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಆದರ್ಶ ಎಂ ಸಾಜಿ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಮುಖ್ಯ ಭಾಷಣಕಾರರಾಗಿ ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಹೋರಾಟದ ರೂವಾರಿಗಳಲ್ಲಿ ಒಬ್ಬರಾದ ಎಸ್‌ಎಫ್‌ಐ ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾದ ಆಯಿಷಿ ಘೋಷ್ ಅವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ .

            ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ಅಧ್ಯಕ್ಷತೆ ವಹಿಸಲಿದ್ದಾರೆ, ಪ್ರಾಸ್ತಾವಿಕವಾಗಿ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಲಿದ್ದಾರೆ. ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರು ಹಾಗೂ ನಾಡಿನ ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಜೊತೆಯಾಗಲಿದ್ದಾರೆ.  ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳು ಈ ಬಹಿರಂಗ ಸಭೆಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಕರೆ ನೀಡಿದರು.

              ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ್, ಕಾರ್ಯದರ್ಶಿ ಚೈತ್ರಾ ಕೊರವರ, ಉಪಾಧ್ಯಕ್ಷ ಶಂಭುಲಿಂಗ ಸವದತ್ತಿ, ಪರಶುರಾಮ ಎಸ್, ಹಾವಿವು ಅಧ್ಯಕ್ಷೆ ಪೂಜಾ ಬಾರ್ಕಿ ಮುಖಂಡರಾದ ಕಾಂತೇಶ್ ಹಳ್ಳೇರ, ನಿಂಗರಾಜ ಪೂಜಾರ, ವಿಕಾಸ ದುರಗಣ್ಣನವರ, ಧನುಷ್ ದೊಡ್ಡಮನಿ, ಸೌಂದರ್ಯ ವೈ, ಅಭಿ ವಡ್ಡರ, ಕೀರ್ತಿ ಜಾಡರ, ಮನೋಜ್ ಮಾಳಗಿ, ಅಪ್ಪು, ಅನುಶ್ರೀ, ರೇಣುಕಾ, ಶಶಿ, ಯಸೀನ್ ಕೇರಳ, ಫಕ್ಕೀರೇಶ ಯರಗನ್ನಿ, ಅಕ್ಷಯ ಲಮಾಣಿ, ಮನೋಹರ ಕಳ್ಳಿಮನಿ, ಸ್ವಪ್ನಾ ಕಬ್ಬೆರ, ತನುಜಾ ಎಸ್ ನಾಗಮ್ಮನವರ,  ವರ್ಷಾ ಕೋಟಿ ಸೇರಿದಂತೆ ಅನೇಕರು ಪ್ರಯಾಣದಲ್ಲಿದ್ದರು. 


ಸುದ್ದಿ ಓದಿ