ಗದಗ

ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನಾತ್ಮಕ ಪದನಾಮ ಬಳಸಲು ಶಾಸಕ ಎಚ್‌.ಕೆ. ಪಾಟೀಲರಿಗೆ ಮನವಿ

ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನಾತ್ಮಕ ಪದನಾಮ ಬಳಸಲು ಶಾಸಕ ಎಚ್‌.ಕೆ. ಪಾಟೀಲರಿಗೆ ಮನವಿ

ಲೋಕದರ್ಶನ ವರದಿ 


           ಗದಗ, 05, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ತಮ್ಮ ಸೇವೆಯನ್ನು ಸಲ್ಲಿಸ ಬಯಸುವರು ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿ ಕ್ಷೇತ್ರದ ಜನತೆ ಆಶೋತ್ತರಗಳಿಗೆ ಸ್ಪಂದಿಸವ ವ್ಯಕ್ತಿಗಳಿಗೆ ಸಂವಿಧಾನ ತನ್ನದೇ ಆದ ರೀತಿಯಲ್ಲಿ ವಿವಿಧ ಸ್ಥರಗಳಲ್ಲಿ ಸಂವಿಧಾನಾತ್ಮಕ ಒಂದು ಪದನಾಮವನ್ನು ಸಂವಿಧಾನ ನೀಡಿದೆ ಆದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ   ಎಚ. ಕೆ. ಪಾಟೀಲರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಫೇಸ್ಬುಕ್) ಶುಭಾಶಯ, ಪುಣ್ಯ ಸ್ಮರಣೆ, ಜನ್ಮದಿನೋತ್ಸವ, ಕಾರ್ಯಕ್ರಮಗಳ ಭಾವಚಿತ್ರಗಳ ಪೋಸ್ಟಗಳಲ್ಲಿ ಇತ್ತೀಚೆಗೆ ಹಾಗೂ ಹೊಸ ಮುಖ್ಯಮಂತ್ರಿಯಾದ ನಂತರ ತಮ್ಮ ಹೆಸರನ್ನು ಡಾ. ಎಚ. ಕೆ. ಪಾಟೀಲ ಎಂದು ಮಾತ್ರ ನಮೂದಿಸಿ ಗದಗ ಮತಕ್ಷೇತ್ರದ ಮತದಾರರು ನೀಡಿದ ಸಂವಿಧಾನಾತ್ಮಕ ಪದನಾಮವನ್ನು ನಮೂದಿಸದೆ ಇರುವುದು.

          ಸಾರ್ವಜನಿಕ ಕ್ಷೇತ್ರದಲ್ಲಿ ಚರ್ಚೆಗೆ ಹಾಗೂ ಅವರ ಮುಂದಿನ ನಡೆ ಬಗ್ಗೆ ಕೂತುಹಲ ಮೂಡಿಸಿದೆ ಎಂದು ಸಾಮಾಜಿಕ ಚಿಂತಕರಾದ ವಿಶ್ವನಾಥ ಶೀರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಶಾಸಕರು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ರೀತಿಯ ಜವಾಬ್ದಾರಿಯನ್ನು ನಿಭಾಯಿಸಿ ತಮ್ಮ ಆದ ಚಾಪು ಮೂಡಿಸಿದ್ದಾರೆ ಅದೇ ರೀತಿ ಗದಗ ಕ್ಷೇತ್ರದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಾಗೆ ಮತದಾರರು ನೀಡಿರುವ ಸಂವಿಧಾನಾತ್ಮಕ ಪದನಾಮವು ಕೇವಲ ಸರ್ಕಾರಿ ಹಾಗೂ ಖಾಸಗಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗೆ ಸೀಮಿತವಾಗಿದೆ.

            ಇಂದಿನ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು ತಮ್ಮದೇ ಆದಾ ಛಾಪು ಮೂಡಿಸಿವೆ. ಜೊತೆಗೆ ಪ್ರತಿ ಕ್ಷಣದ ಸುದ್ದಿಯನ್ನು ಆ ಕ್ಷಣದಲ್ಲಿಯೇ ಸಾಮಾನ್ಯರಿಗೆ ಮುಟ್ಟಿಸುವ ಕಾರ್ಯಗಳಿಗೆ ಸೂಕ್ತ ವೇದಿಕೆಯಾಗಿವೆ. ಆದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟಗಳಲ್ಲಿ ತಮ್ಮ ಹೆಸರಿನ ಮುಂದೆ ಗದಗ ಮತಕ್ಷೇತ್ರದ ಮತದಾರರು ನೀಡಿದ ಸಂವಿಧಾನಾತ್ಮಕ ಪದನಾಮವನ್ನು ನಮೂದಿಸಲು ಮೂಲಕ ಈ ವಿನಂತಿಸಿದ್ದಾರೆ. 


ಸುದ್ದಿ ಓದಿ