ಒಂದೇ ಬಸ್ ಹತ್ತುತ್ತಿದ್ದ ನಾಲ್ಕು ಪ್ರಯಾಣಿಕರ ಮೊಬೈಲ್ ಎಗರಿಸಿದ ಕಳ್ಳರು
ಲಕ್ಷ್ಮೇಶ್ವರ" 06 ; ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಂಗಳೂರು ಗದಗ ಮಾರ್ಗ ತೆರಳುವ ಬಸ್ ಹತ್ತುವ ಸಮಯದಲ್ಲಿ ನಾಲ್ಕು ಜನ ಯುವಕರ ಮೊಬೈಲನ್ನು ಎಗರಿಸಿದ ಕಳ್ಳ ಕದಿಮರು ದೀಪಾವಳಿ ಹಬ್ಬದ ಹಿನ್ನೆಲೆ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಸಹ ಹೆಚ್ಚಾಗುತ್ತಿದೆ
ಇದರಿಂದ ಪ್ರಯಾಣಿಕರು ಸಿಟಿ ಹಿಡಿಯುವ ಗದ್ದಲದಲ್ಲಿ ನಾ ಮುಂದು ತಾ ಮುಂದು ಎಂದು ಬಸ್ ಹತ್ತುತ್ತಾರೆ ಇಂಥ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಾರೆ ಅದರಂತೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಂಗಳೂರು ಗದಗ ಮಾರ್ಗಕ್ಕೆ ತೆರಳುವ ಬಸ್ ಹತ್ತುವ ಸಮಯದಲ್ಲಿ ಒಂದೇ ಬಸ್ ಹತ್ತುವ ನಾಲ್ಕು ಪ್ರಯಾಣಿಕರ ಮೊಬೈಲನ್ನು ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಮೊಬೈಲನ್ನು ಎಗರಿಸಿದ್ದಾರೆ ಮೊಬೈಲನ್ನು ಕಳೆದು ಕೊಂಡವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ವಿಷಯ ತಿಳಿದು ಬಸ್ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು ಮೊಬೈಲ್ ಕಳೆದು ಕೊಂಡವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಲ್ಲಾ ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಲಗೇಜ್ ಮತ್ತು ಮೊಬೈಲ್ ಬಗ್ಗೆ ಹೆಚ್ಚು ಜಾಗೃತಿ ವಹಿಸುವುದು ಅಗತ್ಯವಾಗಿದೆ