ತಾಳಿಕೋಟಿ

ಇಂದು ಪಟ್ಟಣದಲ್ಲಿ ತಾಲೂಕಾ ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಇಂದು ಪಟ್ಟಣದಲ್ಲಿ ತಾಲೂಕಾ ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ


            ತಾಳಿಕೋಟಿ 31: ಪಟ್ಟಣದಲ್ಲಿ ತಾಲೂಕ ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗಿ ಇಂದು ಆಚರಿಸಲಾಗುವುದು. ಕಾರ್ಯಕ್ರಮದ ನಿಮಿತ್ಯವಾಗಿ ಬೆಳಿಗ್ಗೆ 8.30 ಗಂಟೆಗೆ ಭಗವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು.

        ನಂತರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆ ಎಸ್ ಡಿ ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಅಪ್ಪಾಜಿ ನಾಡಗೌಡರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ಜರಗುವುದು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರ ಸಹ ಅಧ್ಯಕ್ಷತೆ ಇರುವುದು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ ಅವರ ಘನ ಉಪಸ್ಥಿತಿ ಇರುವುದು.

             ತಾಳಿಕೋಟಿ ತಹಸಿಲ್ದಾರ್ ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಎಂ.ಎಸ್‌.ಅರಕೇರಿ ಧ್ವಜಾರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಎನ್, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಬಿ. ಹುಕ್ಕೇರಿ, ವಿಜಯಪುರ ಸಂಸದ ರಮೇಶ ಚಂ. ಜಿಗಜಿಣಗಿ, ರಾಜ್ಯಸಭೆ ಸದಸ್ಯೆ ಡಾ.ಸುಧಾ ಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ,

             ಸುನೀಲಗೌಡ ಪಾಟೀಲ, ಪಿ.ಎಚ್‌.ಪೂಜಾರ, ಕೇಶವ ಪ್ರಸಾದ ಎಸ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕರ್ನಾಟಕ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಬಿ.ಎಸ್‌.ಕವಲಗಿ, ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಸಂಗಮೇಶ ದೇಸಾಯಿ, ಕಸಾಪ ಅಧ್ಯಕ್ಷ ಆರ್‌. ಎಲ್‌. ಕೊಪ್ಪದ ಆಗಮಿಸುವರು.

          ಡಾ. ಅನೀಲಕುಮಾರ ಬ. ಇರಾಜ ವಿಶೇಷ ಉಪನ್ಯಾಸ ನೀಡುವರು. ತಾಪಂ ಇಓ ಅನಸೂಯಾ ಚಲವಾದಿ, ಬಿಇಓ ಎಂ ಎಸ್ ಬಡದಾನಿ, ಪುರಸಭೆ ಮುಖ್ಯಾ ಧಿಕಾರಿ ಸುನಿಲ್ ಪಾಟೀಲ ಹಾಗೂ ಸಿಪಿಐ ಮೊಹಮ್ಮದ್ ಫಸಿವುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿರುವರು. 


ಸುದ್ದಿ ಓದಿ