ಕೋಡಿಯಾಲ ಹೊಸಪೇಟೆ: ವಾಲ್ಮೀಕಿ ವೃತ್ತದ ಸುತ್ತಲೂ ಅಂಗಡಿಗಳು, ತೆರವುಗೊಳಿಸಲು ಕರವೇ ಆಗ್ರಹ
ರಾಣೇಬೆನ್ನೂರು:13 ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಕುಮಾರಪಟ್ಟಣ ವೃತ್ತದ ಲ್ಲಿನ ಶ್ರೀ,ಮಹರ್ಷಿ ವಾಲ್ಮೀಕಿ ವೃತ್ತದ ಸುತ್ತ-ಮುತ್ತಲು ಅಕ್ರಮ ಅಂಗಡಿಗಳು ಆವರಿಸಿಕೊಂಡು, ವಾಲ್ಮೀಕಿ ಮಹರ್ಷಿಗಳ ಮೂರ್ತಿಯನ್ನೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕೂಡಲೇ ಅಕ್ರಮವಾಗಿ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸಲು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಶಿವಮುತ್ತಪ್ಪ ಗುತ್ತೂರು ಅವರು, ಗ್ರಾಮದ ವೃತ್ತದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಗಳ ಮೂರ್ತಿ ಸಾರ್ವಜನಿಕರ ದೃಷ್ಟಿಯಲ್ಲಿ ಆಕರ್ಷಕ ಮತ್ತು ಸುಂದರವಾಗಿ ವೃತ್ತದಲ್ಲಿ ವಿಶೇಷ ಮೆರಗು ತಂದಿದೆ ಇಂತಹ ಸಂದರ್ಭದಲ್ಲಿ ಅಂಗಡಿಕಾರರು ಸುತ್ತಲೂ ಹಾಕಿರುವ ಅಂಗಡಿಗಳಿಂದ, ಮಹರ್ಷಿಗಳ ಮೂರ್ತಿ ಕಾಣದೆ. ಕಳಾಹೀನವಾದ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.
ಅಲ್ಲದೆ ವೃತ್ತದಲ್ಲಿ ಅಂಗಡಿಯನ್ನು ಹಾಕಿರುವ ಕಾರಣ,
ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ವಾಹನ ಸಂಚಾರ ದಟ್ಟಣೆ ಇಲ್ಲಿದೆ
ಪರಿಣಾಮ ಬಸ್ಸುಗಳು, ಲಾರಿಗಳು ಆಟೋ ವಾಹನ, ದ್ವಿಚಕ್ರ ವಾಹನಗಳು, ಕಾರವಾಹನಗಳು, ಸಂಚಾರ ಕಾರಣ ಬಹಳಷ್ಟು ಅಪಘಾತಗಳು ಸಂಭವಿಸುವ ವಾತಾವರಣ ಇಲ್ಲಿದೆ.
ಪಂಚಾಯಿತಿ ಆಡಳಿತವು ಸುತ್ತಲಿರುವ ಅಂಗಡಿಗಳನ್ನು ತೆರವು ಗೊಳಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಒಂದು ವೇಳೆ ಪಂಚಾಯಿತಿ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಮಾನಗಳಲ್ಲಿ ಪ್ರತಿಭಟನೆ ಮತ್ತು ಧರಣೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.