ಹೂವಿನ ಹಡಗಲಿ

ಅರ್ಹ ಕಲಾವಿದರಿಗೆ ಮಾಸಾಶನ ಸರಕಾರ ಕರ್ತವ್ಯ - ವೈ.ಮಲ್ಲಪ್ಪ

ಅರ್ಹ ಕಲಾವಿದರಿಗೆ ಮಾಸಾಶನ ಸರಕಾರ ಕರ್ತವ್ಯ - ವೈ.ಮಲ್ಲಪ್ಪ


ಲೋಕದರ್ಶನ ವರದಿ  

               ಹೂವಿನಹಡಗಲಿ  28:   ಅರ್ಹ ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೈ ಮಲ್ಲಪ್ಪ ಗವಾಯಿ ಹೇಳಿದರು.  ತಾಲೂಕಿನ ಸೋಗಿ ಗ್ರಾಮದಲ್ಲಿ    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ  ಸೀತಾಮಾತೆ ಮಹಿಳಾ ಜಾನಪದ ಸಾಂಸ್ಕೃತಿಕ  ಕಲಾ ಟ್ರಸ್ಟ್‌ ಹುಗಲೂರು ಇವರ ಸಹಯೋಗದೊಂದಿಗೆ ಇಲಾಖೆಯ ಪ್ರಾಯೋಚಿತ ಕಾರ್ಯಕ್ರಮ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

                 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಲಲಿತಕಲೆ ಹಾಗೂ ಶಿಲ್ಪಕಲೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಮಾಸಿಕ ಪಿಂಚಣಿಮಾಸಾಶನ ಸೌಲಭ್ಯ ಸಿಗಲಿ ಎಂದರು.  ಡಾ. ಎಸ್ ಕರಿಬಸಪ್ಪ ಜಾನಪದ ಕಲಾವಿದರು ಸೋಗಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಧ್ಯಕ್ಷತೆಯನ್ನು  ರಾಜ್ಯ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ  ಡಿ. ಕೊಟ್ರ​‍್ಪ ಹುಗಲೂರು  ವಹಿಸಿದ್ದರು. ಇಲಾಖೆ ಪ್ರಾಯೋಜಿತ ಕಾರ್ಯಕ್ರಮ ದಲ್ಲಿ ಕೆ.ಶಿವಪ್ಪ ಸಂಗಡಿಗರು ಸುಗಮ ಸಂಗೀತ ನಡೆಸಿಕೊಟ್ಟರು.                   ಈ ವೇಳೆ ಸಹ ಕಲಾವಿದರಾಗಿ ಪಿ. ಅಜ್ಜಪ್ಪ,  ಜಿ ನಿಂಗಪ್ಪ, ಹೊಸಮನಿ ಬಸವರಾಜ, ಕೆ. ಮಹಾಬಲೇಶ್ವರ​‍್ಪ, ಡಿ. ಬೆಟ್ಟಪ್ಪ, ಎಂ.ನಿಂಗನಗೌಡ,ಬಿ. ಈಶಪ್ಪ, ಹಾರ್ಮೋನಿಯಂ ಬಿ.ಕಸ್ತೂರ​‍್ಪ  ಸೋಗಿ  ತಬಲ ಬಿ.ರುದ್ರ​‍್ಪ,  ಸೀತಾಮಾತೆ ಜಾನಪದ ಕಲಾ ಟ್ರಸ್ಟ್‌ ಅಧಿಕಾರಿ  ಮೇಟಿ ನಿಖಿಲ, ಸವಿತಾ, ಟಿ.ದೇವಕ್ಕ, ಸರ್ವಕ್ಕ,  ಹೆಚ್ ಬಿ ಸರ್ವಮ್ಮ,ಶಿವಮ್ಮ,ಪವಿತ್ರ ಎಚ್ ಪಿ.ಎ ಬಸಮ್ಮ, ಎಚ್ ಪಿ  ನಾಗಮ್ಮ ಇದ್ದರು. 


ಸುದ್ದಿ ಓದಿ