ಚೆಸ್ ಸ್ಪರ್ಧೆ: ದಕ್ಷಿಣ ಭಾರತ ನಂತರ ವಿಶ್ವವಿದ್ಯಾಲಯ ಮಟ್ಟಕ್ಕೆ ನಿಖಿತಾ ಆಯ್ಕೆ
ಲೋಕದರ್ಶನ್ ವರದಿ
ಮುಂಡಗೋಡ 25 : ಅಕ್ಟೋಬರ್ 6 ಮತ್ತು 7ರಂದು ಭಟ್ಕಳದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಚದುರಂಗ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ನಿಖಿತಾ ಬಿ. ಹೇಗ್ಗಾದಿ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ತಂಡದ ಪರವಾಗಿ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆ ಹೈದರಾಬಾದ್ನ ವೊಕ್ಸೆನ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಿಖಿತಾ ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಸಿಂಗ್ ಹಜೇರಿ, ಕ್ರೀಡಾ ಸಂಚಾಲಕ ಬಲರಾಮ್, ಅಕ್ಷಯ್ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.