ಮುಂದಗೋಡ

ಪಶ್ಚಿಮ ಪದವಿಧರರ ಚುನಾವಣೆ 767 ಮತ ಚಲಾವಣೆ

ಪಶ್ಚಿಮ ಪದವಿಧರರ ಚುನಾವಣೆ 767 ಮತ ಚಲಾವಣೆ

ಮುಂಡಗೋಡ 24: ಪಶ್ಚಿಮ ಪದವಿಧರ ಕ್ಷೇತ್ರದ  ಚುನಾವಣೆಯ ಮತದಾನ ಮಾಡಲು ಅರ್ಹ ಮತದಾರರು  ಇಲ್ಲಿಯ ತಹಶೀಲ್ದಾರ ಕಚೇರಿಗೆ ಆಗಮಿಸಿ ಮತ ಚಲಾವಣೆ ಮಾಡಿದರು. ಮತದಾನ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಿತು. ಪದವಿಧರ ಮತದಾರರಲ್ಲಿ ಗಂಡು: 582, ಹೆಣ್ಣು 360 ಒಟ್ಟು 942 ಮತದಾರರಲಿ 767 ಮತದಾರರು ಮತ ಚಲಾಯಿಸಿದ್ದಾರೆ. 491 ಪುರುಷರು ಮತಚಾಲಾಯಿಸಿದರೆ 276 ಹೆಣ್ಣು ಮಕ್ಕಳು ಮತಚಲಾಯಿಸಿದ್ದಾರೆ ಒಟ್ಟು ಶೇ.81.42 ಮತದಾರರು ಚಲಾಯಿಸಿದಂತಾಗಿದೆ. ಬೆಳಗ್ಗೆ ಯಿಂದ ಮಧ್ಯಾಹ್ನದವರೆಗೆ ಮತದಾರರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾವಣೆ ಮಾಡಿದರು. ಮಧ್ಯಾಹ್ನ ಸುಮಾರು 1.30 ಗಂಟೆಗೆ  540 ಮತದಾರರು ಮತಚಲಾಯಿಸಿದ್ದಾರೆ ಎಂದು ಹೇಳಲಾಗಿತ್ತು. ಮಧ್ಯಾಹ್ನದವರೆಗೆ ಮತ ಚಲಾಯಿಸಿರುವುದು ನೋಡಿದರೆ  ಸಂಜೆ 4 ಗಂಟೆಯವರೆಗೆ ಶೇ.90-95 ರಷ್ಟು ಮತ ಚಲಾವಣೆಯಾಗುತ್ತದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಅಂದು ಕೊಂಡಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಮಳೆಯು ಸುರಿಯಲು ಪ್ರಾರಂಭ ಮಾಡಿ ಸಂಜೆ 7 ಗಂಟೆಯವರಿಗೂ ಮಳೆ ಬರುತ್ತಲೆ ಇತ್ತು. ಮಳೆಯ ಕಾರಣದಿಂದ ಮತದಾನ ಶೇ.81.42 ರಷ್ಟು ಆಗಲಿ ಸಾಧ್ಯವಾಯಿತು. ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳು ಮತಚಲಾಯಿಸಲು ಅರ್ಹರಾಗಿದ್ದರೆ ಅವರಿಗೆ ಮತಚಲಾಯಿಸಲು ರಜೆ ನೀಡಲಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್‌ ಏರಿ​‍್ಡಸಿದ್ದರು. 


ಸುದ್ದಿ ಓದಿ