ಮುಂದಗೋಡ

ಮುಂಡಗೋಡಿನಲ್ಲಿ ಇತಿಹಾಸ ಸೃಷ್ಟಿಸಿದ ಪ್ರಥಮ ’ದುರ್ಗಾ ದೌಡ್‌’ ಯಶಸ್ವಿ!: ಮಾರಿಕಾಂಬಾ ದೇವಸ್ಥಾನದಲ್ಲಿ ವೈಭವದ ಮಹಾ ದುರ್ಗಾ ಆರತಿ

ಮುಂಡಗೋಡಿನಲ್ಲಿ ಇತಿಹಾಸ ಸೃಷ್ಟಿಸಿದ ಪ್ರಥಮ ’ದುರ್ಗಾ ದೌಡ್‌’ ಯಶಸ್ವಿ!: ಮಾರಿಕಾಂಬಾ ದೇವಸ್ಥಾನದಲ್ಲಿ ವೈಭವದ ಮಹಾ ದುರ್ಗಾ ಆರತಿ
First 'Durga Daud' Creates History in Mundagodi Success!: Magnificent Maha Durga Aarti at Marikamba

  

ಮುಂಡಗೋಡ 21 : ತಾಲೂಕಿನಲ್ಲಿ ​‍್ರ​‍್ರಥಮ ಬಾರಿಗೆ ದಸರಾ ಹಬ್ಬದ ಪ್ರಯುಕ್ತ ಕಳೆದ 9 ದಿನಗಳಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಗಿದ್ದ ’ದುರ್ಗಾ ದೌಡ್‌’ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮಂಗಳವಾರ ಪಟ್ಟಣದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಕೊನೆಯ ದಿನದ ’ದುರ್ಗಾ ಆರತಿ’ ಕಾರ್ಯಕ್ರಮ ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಂಡಿತು. ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಭಕ್ತಸಾಗರ: 9 ದಿನಗಳ ಕಾಲ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಭಕ್ತಿ ಅಲೆ ಎಬ್ಬಿಸಿದ್ದ ದುರ್ಗಾ ದೌಡ್ ಅಭಿಯಾನದ ಸಮಾರೋಪ ಸಮಾರಂಭ ಹಾಗೂ ಮಹಾ ದುರ್ಗಾ ಆರತಿಗೆ ಮಂಗಳವಾರ ಸಂಜೆ ತೆರೆಬಿದ್ದಿತು. ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜರುಗಿದ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ದೇವಿಯ ಭಕ್ತರು ಹಾಗೂ ಮಾತೃಶಕ್ತಿ ಕಿಕ್ಕಿರಿದು ಸೇರಿ ಮಂಗಳಾರತಿ ಬೆಳಗುವ ಮೂಲಕ ಕಣ್ತುಂಬಿಕೊಂಡರು. ಇಡೀ ದೇವಾಲಯದ ಆವರಣವು ದೇವಿಯ ಜೈಕಾರ ಹಾಗೂ ಭಜನೆಯ ಧ್ವನಿಯಿಂದ ಮುಗಿಲು ಮುಟ್ಟಿತ್ತು. ಯಶಸ್ವಿ ಸಂಘಟನೆಗೆ ಪ್ರಶಂಸೆ: ಮುಂಡಗೋಡಿನಲ್ಲಿ ಪ್ರಥಮ ಬಾರಿಗೆ  ದುರ್ಗಾ ದೌಡ್ ಸಮಿತಿಯ ವತಿಯಿಂದ ಆಯೋಜಿಸಲಾದ ಈ ನವರಾತ್ರಿ ಉತ್ಸವವು ಸಾರ್ವಜನಿಕರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಊರಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಳೆ ಹೆಚ್ಚಿಸಿದೆ. 


ಸುದ್ದಿ ಓದಿ