ಬಳ್ಳಾರಿ

ಜೂಜಾಟ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲು

ಜೂಜಾಟ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ  ಪ್ರಕರಣ ದಾಖಲು


ಬಳ್ಳಾರಿ. ಅ. 21 : ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಹಲಕುಂದಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ,  ವಿಜಯ ಅ ವಿಜಿ, ಖಾದರ್, ವಿಶಾಲ್, ಮುಕ್ತಿಯಾರ್, ಪ್ರಸಾದ್, ದುರ್ಗೇಶ್, ಇರ್ಫಾನ್, ಮಣಿಕಂಠ, ರುದ್ರೇಶ, ಮದರ್ ವಲಿ, ಖಾಜಾ, ಲೋಕೇಶ ತಂದೆ ಮಲ್ಲೇಶಪ್ಪ ಸೇರಿದಂತೆ 10 ಜನ ಆರೋಪಿತರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 296/2026 ಕಲಂ 87 ಕೆ.ಪಿ ಆ್ಯಕ್ಟ್‌ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ ಪಿ ಸುಮನ್ ಪನ್ನೇ ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ ರೂ 97,020/- ನಗದು ಹಣ, 19 ಮೋಟಾರ್ ಸೈಕಲ್‌ಗಳು, 14 ಮೊಬೈಲ್ ಫೋನ್‌ಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ. ವಿಜಯ ಅ ವಿಜಯ್ ಬಾಬು ತಂದೆ ಲೇಟ್ ಗುರುಸ್ವಾಮಿ, 39 ವರ್ಷ, ಭೋವಿ ಜನಾಂಗ, ಖಾಲಿ ಚೀಲ ವ್ಯಾಪಾರ, ವಾಸ ಬಂದಿಮೋಟ್, ಬಳ್ಳಾರಿ ನಗರ ಹಾಗೂ ಖಾದರ್ ಅ ವಡ್ಡರ ಬಂಡ ಖಾದರ್ ತಂದೆ ಜಹಾಂಗೆರ್, 27 ವರ್ಷ, ಮುಸ್ಲಿಂ, ವಾಸ ವಡ್ಡರಬಂಡೆ ಬಳ್ಳಾರಿ ನಗರ ಎಂಬುವರು ಕೂಡಿ ಅಂದರ್ ಬಹರ್ ಇಸ್ಪೀಟ್ ಜೂಜಾಟವನ್ನು ಆಡಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.


ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಮಾಲತೇಶ ಕೂನಬೇವು ಡಿ.ಎಸ್‌.ಪಿ, ಚಂದನ್ ಗೋಪಾಲ್‌.ಬಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಯವರಾದ ಭೀರ​‍್ಪ, ಚಂದ್ರಶೇಖರ್, ರಮೇಶ ಬಾಬು, ಮುಸ್ತಾಫ್ ಅಲಿ, ಮಂಜುನಾಥ್, ಮಾರ್ಕ, ಹೊನ್ನೂರ, ಪರಶುರಾಮ್ ರವರುಗಳ ತಂಡ ದಾಳಿ ಮಾಡಿರುತ್ತಾರೆ ಇವರುಗಳನ್ನು ಜಿಲ್ಲಾ ಎಸ್‌. ಪಿ ಡಾ. ಸುಮನ್ ಡಿ.ಪೆನ್ನೇಕರ್ ಶ್ಲಾಘಿಸಿದ್ದಾರೆ. 


ಸುದ್ದಿ ಓದಿ