ಬೆಳಗಾವಿ

ದಸರಾ ಹಬ್ಬ ಸಮಾರೋಪ ದುರ್ಗಾಶಕ್ತಿ ಪ್ರೇರಣಾ ಪುರಸ್ಕಾರ ಪ್ರಧಾನ

ದಸರಾ ಹಬ್ಬ ಸಮಾರೋಪ ದುರ್ಗಾಶಕ್ತಿ ಪ್ರೇರಣಾ ಪುರಸ್ಕಾರ ಪ್ರಧಾನ

ಲೋಕದರ್ಶನ ವರದಿ 


         ಯಮಕನಮರಡಿ 21: ನಾಡ ದೇವತೆ ಶಕ್ತಿ ಮಾತೆಯ ನವ ಅವತಾರದಿ ನಾಡಿನಾದ್ಯಂತ ದಸರಾ ಉತ್ಸವ ಆಚರಿಸಿ ನಮ್ಮ ನಾಡಿನ ಕಲಾ ಸಂಸ್ಕೃತಿಗೆ ಮೆರಗು ನೀಡುವ ನಾಡಹಬ್ಬ ಪ್ರತಿಯೊಬ್ಬರು ದೇವಿಯನ್ನು ಆರಾಧಿಸಿ ಕಲೆ ಕಲಾವಿದರನ್ನು ಗೌರವಿಸುವುದರ ಜೊತೆಗೆ ಅವರಿಗೆ ಉತ್ತೇಜನ ಕೊಡಬೇಕೆಂದು ನ್ಯಾಯವಾದಿಗಳಾದ ಲಗಮಣ್ಣಾ ತೋರಣಹಳ್ಳಿ ಅಭಿವ್ಯಕ್ತ ಪಡಿಸಿದರು.


            ಚಿಕ್ಕೋಡಿ ಸಮೀಪದ ಧುಳಗನವಾಡಿ ರಂಗದರ್ಶನ ಗ್ರಾಮೀಣ ವಿಕಾಸ ಸಂಘದ ಆಶ್ರಯದಲ್ಲಿ ಕಳೆದ ದಿನಾಂಕ 20 ಅಕ್ಟೋಬರ್ 2026  ಸ್ಥಳೀಯ ದುರ್ಗಾದೇವಿ ಮಂದಿರದಲ್ಲಿ ಜರುಗಿದ ಹನ್ನೋಂದನೇಯ ವರ್ಷದ ಒಂಬತ್ತು ದಿನಗಳಿಂದ ನಡೆದುಕೊಂಡು ಬಂದ ದಸರಾ ಉತ್ಸವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿ, ಗಡಿಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸುವುದರಿಂದ ಸಾಹಿತಿ, ಕಲಾವಿದರಿಗೆ ವೇದಿಕೆ ಸೀಗುತ್ತದೆ, ಬೆಳೆಯುವ ಯುವಜನರಿಗೆ ಉತ್ತೇಜನ ನೀಡದಲು ಸಹಕಾರಿಯಾಗುತ್ತದೆ ಎಂದರು.   


ಸಂಘಟಕರಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಭರತ ಕಲಾಚಂದ್ರ ಇವರು ಮಾತನಾಡಿ, ನಮ್ಮ ನಾಡಿನ ಭಾಷೆಯ ಜೊತೆಗೆ ಪರಂಪರೆಯಿಂದ ಬಂದ ಶ್ರೀಮಂತ ಕಲಾ ಸಂಸ್ಕೃತಿ ಉಳಿಸುವಲ್ಲಿ ಕಲಾವಿದರಿಗೆ ಪ್ರೋತ್ಸಹ ನೀಡುವುದು, ಅತ್ಯಗತ್ಯವಾಗಿದೆ. ಹಳ್ಳಿಯ ಹಬ್ಬಗಳು ನಮ್ಮ ನಾಡಿನ ಪರಂಪರೆಯ ಪ್ರತೀಯವಾಗಿವೆ.   


ಸಮಾರಂಭದ ಅಧ್ಯಕ್ಷತೆಯನ್ನು ಪೂಜ್ಯ ಚನ್ನಮಲ್ಲಯ್ಯ ಮಠಪತಿ ವಹಿಸಿದರು. ಮಜಲಟ್ಟಿಯ ಮಾತೋಶ್ರೀ ಸಾವಿತ್ರಮ್ಮ ಬಿ. ಪಾಟೀಲ, ಶರತ ಮಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನೆಯಿಂದ ಪ್ರತಿವರ್ಷ ಮಹಿಳಾ ಸಾಧಕಿಯರಿಗೆ ನೀಡುವ 2026-27 ನೇ ಸಾಲಿನ ದುರ್ಗಾಶಕ್ತಿ ಪ್ರೇರಣಾ ಪುರಸ್ಕರವನ್ನು ನಿಪ್ಪಾಣಿಯ ಭರತನಾಟ್ಯ ಕಲಾವಿದೆ ವಿದುಷಿ ಶ್ರೇಯಾಲ ಅ. ಶಾಹ್ ಹಾಗೂ ಬಾಗಲಕೋಟದ ಜಾನಪದ ಸಂಗೀತ ಕಲಾವಿದೆ.

       

       ಪವಿತ್ರಾ ಜಾ. ಜಕ್ಕಪ್ಪನವರ ಇವರಿಗೆ ಶಾಲು ಹೋದಿಸಿ ಫಲ-ಪುಷ್ಪ ನೀಡಿ ಪೂಜ್ಯರು ಆತ್ಮೀಯವಾಗಿ ಪ್ರಶಸ್ತಿ ಪ್ರಾಧಾನ ಮಾಡಿದರು.  ವಿವಿಧ ಕಲಾವಿದರು ಸಂಗೀತ, ಭಜನಾ ಸೇವೆ ನಡೆಸಿಕೊಟ್ಟರು. ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀಯಾ ಕಲಾಚಂದ್ರ ಸ್ವಾಗತಿಸಿದರು. ಮಾರುತಿ ಕಾಮಗೌಡ ವಂದಿಸಿದರು. 


ಸುದ್ದಿ ಓದಿ