ಗುಳೇದಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಮಂಗಳವಾರ ಆಯುಧ ಪೂಜೆ, ಪಲ್ಲಕ್ಕಿ ಉತ್ಸವ
ಉಗರಗೋಳ 21 : ಲಕ್ಷಾಂತರ ಭಕ್ತರು ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಗೆ ವಿವಿಧ ಕಾಣಿಕೆಗಳನ್ನು ಸಮರ್ಿಸಿ ಭಕ್ತಿ ಮೇರೆದರು. ರೇಣುಕಾ ಯಲ್ಲಮ್ಮಾ ದೇವಸ್ಥಾನದ ಪ್ರಾಂಗಣದಲ್ಲಿ ಆರ್ಚಕರು ಆಯುಧಗಳನ್ನು ಹೊತ್ತು ಪ್ರದಕ್ಷಿಣಿ ಹಾಕಿದರು. ಭಕ್ತರ ಹರ್ಷೋದ್ದಾರದ ಮಧ್ಯೆ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಸಕಲ ಜೀವರಾಶಿ ಒಳಿತಿಗೆ ಅರ್ಚಕರು ಪ್ರಾರ್ಥಿಸಿದರು. ಯಲ್ಲಮ್ಮನ ಸನ್ನಿಧಿಗೆ ಕರ್ನಾಟಕ, ಗೋವಾ, ಆಂದ್ರ್ರದೇಶ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರ
ಯಲ್ಲಮ್ಮ ದೇವಸ್ಥಾನ ಕಾರ್ಯಧರ್ಶಿ ರಾಜಶ್ರೀ ಜೈನಾಪೂರ, ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ, ಅಲ್ಲಮಪ್ರಭು ಪ್ರಭುನವರ, ಶೀತಲ ಕಡಟ್ಟಿ, ಸಿ ಎನ್ ಕುಲಕರ್ಣಿ, ಆರ್ ಎಸ್ ಸವದತ್ತಿ, ಸದಾನಂದ ಈಟಿ, ಮಂಜುನಾಥಗೌಡ ಸಂಧಮನಿ, ನಿಂಗನಗೌಡ ಸಾವಕ್ಕನವರ, ಏಕನಗೌಡ ಮುದ್ದನಗೌಡ್ರ, ಬಸನಗೌಡ ಶೆಟ್ಟಿನಗೌಡ್ರ, ಜಗದನಗೌಡ ಪೊಲೇಶಿ, ಪರಸನಗೌಡ ಕಾಳಿಂಗೌಡ್ರ, ವಿಶ್ವನಾಥಗೌಡ ರೇಣ್ಕೀಗೌಡ್ರ, ಕೆಂಚನಗೌಡ ರೇಣ್ಕೀಗೌಡ್ರ, ಪರಸನಗೌಡ ರೇಣ್ಕೀಗೌಡ್ರ, ಬಸನಗೌಡ ಪರಸರುಷಿ, ಬಸನಗೌಡ ಸಂಧಿಮನಿ, ವಿಶ್ವನಾಥಗೌಡ ಲಿಂಗರುಷಿ, ಯಲ್ಲಪ್ಪಗೌಡ ಗಂದಿಗವಾಡ, ಪಂಡಿತ ಯಡೂರಯ್ಯ, ಭಿಮಣ್ಣಾ ಭಾರ್ಕಿ, ರೇಣಪ್ಪ ಮಂಗಳಾರ್ತಿ, ನ್ಯಾಮದೇವ ಹುಲಗಣ್ಣವರ, ಸತೀಶ ಚಿರಚನವರ, ಶಿವು ಮಂಗಳಾರ್ತಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಲಕ್ಷಾಂತರ ಭಕ್ತರು ಇದ್ದರು.