ಮುಂದಗೋಡ

ಮುಂಡಗೋಡಿನಲ್ಲಿ ಅಪರೂಪದ ಬೆಕ್ಕು ಹಾವು ಪತ್ತೆ; ಸುರಕ್ಷಿತ ರಕ್ಷಣೆ!

ಮುಂಡಗೋಡಿನಲ್ಲಿ ಅಪರೂಪದ ಬೆಕ್ಕು ಹಾವು ಪತ್ತೆ; ಸುರಕ್ಷಿತ ರಕ್ಷಣೆ!


ಲೋಕದರ್ಶನ ವರದಿ 

 ಮುಂಡಗೋಡ 22: ಪಟ್ಟಣದ ಗಣೇಶ ಶಿರಾಲಿ ಅವರ ಅಂಗಡಿಯಲ್ಲಿ ಅಪರೂಪದ ಬೆಕ್ಕು ಹಾವು ಕಾಣಿಸಿಕೊಂಡಿದ್ದು, ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಕ್ಕಿನ ಕಣ್ಣಿನಂತಿರುವ ಲಂಬಾಕಾರದ ಪಾಪೆಗಳನ್ನು ಹೊಂದಿರುವ ಈ ಹಾವು ಸಾಮಾನ್ಯವಾಗಿ ರಾತ್ರಿ ವೇಳೆ ಸಕ್ರಿಯವಾಗಿರುತ್ತದೆ.


ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಈ ಪ್ರಭೇದ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಈ ಹಾವು ವಿಷದ ತೀವ್ರತೆ ಕಡಿಮೆ ಇರುವ ಪ್ರಭೇದಕ್ಕೆ ಸೇರಿದ್ದು, ಸಾಮಾನ್ಯವಾಗಿ ಮನುಷ್ಯರಿಗೆ ಹೆಚ್ಚಿನ ಅಪಾಯ ಉಂಟುಮಾಡುವುದಿಲ್ಲ ಎಂದು ತಿಳಿದುಬಂದಿದೆ. ಹಾವಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸಿ, ಸುರಕ್ಷಿತವಾಗಿ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗಿದೆ. 


ಸುದ್ದಿ ಓದಿ