ಹಾವೇರಿ

ನೀರ್ಜೀವ ಜನನಗಳನ್ನು ತಡೆಗಟ್ಟಲು ಆರೋಗ್ಯ ವ್ಯವಸ್ಥೆಯ ಜೊತೆ ಕುಟುಂಬ ಮತ್ತು ಸಮುದಾಯದ ಪಾತ್ರ ಮುಖ್ಯ

ನೀರ್ಜೀವ ಜನನಗಳನ್ನು ತಡೆಗಟ್ಟಲು ಆರೋಗ್ಯ  ವ್ಯವಸ್ಥೆಯ ಜೊತೆ ಕುಟುಂಬ ಮತ್ತು ಸಮುದಾಯದ ಪಾತ್ರ ಮುಖ್ಯ
The role of families and the community, alongside the healthcare system, is crucial in preventing st

ಲೋಕದರ್ಶನ ವರದಿ 

ಹಾವೇರಿ:ಅ.17 :   ಪ್ರತಿಯೊಬ್ಬ ತಾಯಿಗೂ ಸುರಕ್ಷಿತ ಗರ್ಭದಾರಣೆ ಮತ್ತು ಪ್ರತಿಯೊಂದು ಮಗುವಿಗೂ ಆರೋಗ್ಯಕರ ಆರಂಭ ದೊರೆಯಬೇಕು, ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯವನ್ನು ಸುಧಾರಿಸಲು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಆರೋಗ್ಯ ಕಾರ್ಯಕ್ರಮಗಳನ್ನು ಮತ್ತು ಸೇವೆಗಳನ್ನು ಜಾರಿಗೆ ತಂದಿವೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ ಅವರು ಹೇಳಿದರು. 

ಇತ್ತೀಚೆಗೆ ಹಾವೇರಿ ನಗರದ "ಭಾರತೀಯ ವೈದ್ಯಕೀಯ ಸಂಘದ ಸಭಾ” ಭವನದಲ್ಲಿ ನವದೆಹಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌  ಬೆಂಗಳೂರು ಸೆಂಟ ಜಾನ್ಸ ಸಂಶೋಧನಾ ಸಂಸ್ಥೆ  ಹಾಗೂ ಕರ್ನಾಟಕ ಹೆಲ್ತ್‌ ಪ್ರಮೋಷನ್ ಟ್ರಸ್ಟ್‌   ಸಂಸ್ಥೆಯ ಸಹಯೋಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ನಡೆಸುತ್ತಿರುವ ನೀರ್ಜೀವ ಜನನಗಳನ್ನು ಕಡಿಮೆಗೊಳಿಸುವ ಅಧ್ಯಯನದ ಕುರಿತು ಜಿಲ್ಲೆಯ ಸ್ತ್ರೀ ರೋಗ ತಜ್ಞರು,  ಮಕ್ಕಳ ತಜ್ಞರು ಹಾಗೂ ಆರೋಗ್ಯ ಇಲಾಖೆ ಹಿರಿಯ ವೈದ್ಯಾಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.   

ಹಾವೇರಿ ಜಿಲ್ಲೆಯಲ್ಲಿಯೂ ಸಹ ಈ ಪ್ರಯತ್ನಗಳು ನಡೆಯುತ್ತಿದ್ದು ವಿಶೇಷವಾಗಿ ನೀರ್ಜೀವ ಜನನಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಕಡಿಮೆ ಮಾಡುವುದಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಸಹ ನೀರ್ಜೀವ ಜನನಗಳ ದರ ರಾಷ್ಟ್ರೀಯ ಗುರಿಯ ಹತ್ತಿರವಿದ್ದು ಅದನ್ನು ಕಡಿಮೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಅದಕ್ಕಾಗಿ ಆಸ್ಪತ್ರೆಯ ಆರೋಗ್ಯ ವ್ಯವಸ್ಥೆ, ಕುಟುಂಬ/ಸಮುದಾಯದ ಪಾತ್ರ,ಅತಿ ಮುಖ್ಯವಾಗಿದೆ  


ಸುದ್ದಿ ಓದಿ