ಹಾವೇರಿ

ವಿಶ್ವ ಮಾನಸಿಕ ದಿನಾಚರಣೆ ಹಾಗೂ ರಕ್ತದಾನ ಶಿಬಿರ

ವಿಶ್ವ ಮಾನಸಿಕ ದಿನಾಚರಣೆ ಹಾಗೂ ರಕ್ತದಾನ ಶಿಬಿರ

ಲೋಕದರ್ಶನ ವರದಿ 


ಹಾವೇರಿ 15: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಇಂಜೀನೀಯರಿಂಗ್ ಕಾಲೇಜ್,  ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ತಾಲೂಕಾ ಆರೋಗ್ಯ ಕಚೇರಿ, ಬಳಿಗಾರ ಮಾನಸಿಕ ಆರೋಗ್ಯ ಆಸ್ಪತ್ರೆ, ಪರಿವರ್ತನಾ ಮಹಿಳಾ ಸಂಘ ಹಾಗೂ ಹಾವೇರಿ ರಕ್ತದ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ರಕ್ತದಾನ ಶಿಬಿರ”  ದೇವಗಿರಿ ಸರ್ಕಾರಿ ಇಂಜೀನೀಯರಿಂಗ್ ಕಾಲೇಜ್‌ನಲ್ಲಿ ಗುರುವಾರ ಜರುಗಿತು.  

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿ ಅಧ್ಯಕ್ಷರಾದ ರಮೇಶ ಎನ್‌. ಎಂ.  ಅವರು ಉದ್ಘಾಟನೆ ನೆರವೇರಿಸಿದರು.ಮನೋವೈದ್ಯ ಡಾ. ವಿಜಯಕುಮಾರ ಬಳಿಗಾರ ಅವರು ಮಾನಸಿಕ ಆರೋಗ್ಯದ ಬಗ್ಗೆ   ಉಪನ್ಯಾಸ ನೀಡಿದರು. ಸರ್ಕಾರಿ ಇಂಜೀನೀಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ. ಮುನಿರಾಜು ಎಂ ಅಧ್ಯಕ್ಷತೆ ವಹಿಸಿದ್ದರು.  

ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಹೆಚ್‌. ವಿ., ಜಿಲ್ಲಾ ನ್ಯಾಯವಾದಿಗಳ ಸಂಘ ಅಧ್ಯಕ್ಷ ಹೆಚ್‌. ಸಿ. ಸಿದ್ದನಗೌಡರ, ಕಾಲೇಜು ರೆಡ್‌ಕ್ರಾಸ್ ಘಟಕ ಸಂಯೋಜಕ ಅಫ್ರೋಜ್‌ಖಾನ್, ಎನ್‌.ಎಸ್‌.ಎಸ್‌. ಘಟಕದ ಪ್ರೇಮಾನಂದ ಕುಂಬಾರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ  ಡಾ. ರಶ್ಮಿ ಜಿ. ಎಸ್‌. ಬಸವರಾಜ, ಡಾ. ಪರಿವರ್ತನಾ ಮಹಿಳಾ ಸಂಘ ಅಧ್ಯಕ್ಷೆ ಡಾ.ಉಮಾ ವಿಜಯಕುಮಾರ ಬಳಿಗಾರ,  ತಾಲೂಕ ಆರೋಗ್ಯ ಭಾರತಿ  ಕಾರ್ಯದರ್ಶಿ ವಿನಾಯಕ ಎಸ್‌. ಕುಂಬಾರ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ