ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಬೇಕು: ಕೊಡಲಗಿ
ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಬೇಕು: ಕೊಡಲಗಿ
ಬಳ್ಳಾರಿ: ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದಲು ಮಹಾನ್ ವ್ಯಕ್ತಿಗಳು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ ಎಂದು ಸಿರುಗುಪ್ಪ ತಹಶಿಲ್ದಾರ್ ಎಸ್.ಪಿ.ಕೊಡಲಗಿ ಅವರು ಹೇಳಿದರು.
ಶ್ರೀಗುರು ಕೊಟ್ಟೂರೇಶ್ವರ ಪ್ರಕಾಶನದ ಸಂಯುಕ್ತಾಶ್ರಾಯದಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀ ಆಭಯಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಮೌನದೊಳಗಿನ ಮನಸ್ಸು ಲೋಕಾರ್ಪಣೆ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಸಕರ್ಾರಿ ನೌಕರಿ ದೊರೆತ ನಂತರ ಮೋಜು ಮಸ್ತಿಗೆ ಇಳೆಯುವವರನ್ನು ನೋಡಿದ್ದೇವೆ ಆದರೆ ಕೆಂಚಪ್ಪ ಅವರು ಗ್ರಾಮ ಲೆಕ್ಕಿಗ ಅಂತ ಒತ್ತಡದ ವೃತ್ತಿಯಲ್ಲಿ ಇದ್ದುಕೊಂಡು ಕೃತಿ ಬರೆದಿರುವುದನ್ನು ಕಂಡರೆ ನಿಜಕ್ಕೂ ಪ್ರಶಂಸನೀಯ ಕೆಲಸ ಎಂದರು.
ಗ್ರಾಮ ಲೆಕ್ಕಧಿಕಾರಿ ಅಂತ ದೊಡ್ಡ ಒತ್ತಡದ ಹುದ್ದೆಯಲ್ಲಿ ಇದ್ದುಕೊಂಡು ಅದರ ನಡುವೆ ಸಿಕ್ಕ ಅಲ್ಪಸ್ವಲ್ಪ ಸಮಯವನ್ನು ಸದುಪಯೋಗಪಡಿಸಿಕೊಂಡು ಈ ಕೃತಿಯನ್ನು ಹೊರತಂದಿದ್ದಾರೆ ಎಂದು ಹೇಳಿದ ಅವರು ಮೌನದೊಳಗಿನ ಮನಸ್ಸು ಕೃತಿ ತರುವುದರ ಹಿಂದೆ ಸಾಕಷ್ಟು ಶ್ರಮ ಕಾಣುತ್ತೀದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾಲ ಬದಲಾದರು, ಕನ್ನಡ ನಾಡಿನಲ್ಲಿ ಸಾಹಿತ್ಯ ಬರಹಕ್ಕೆ ಸಾವಿಲ್ಲ, ಕವಿಯು ಸ್ವಾತಂತ್ರ ಜೀವ, ಆತನ ಬರವಣಿಗೆ ನಿರಂತರ ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದರು.
ಬಡತನಕ್ಕೂ ಕಷ್ಟಗಳಿಗೂ ಅವಿನಾಭಾವ ಸಂಭಂದವಿದೆ, ಅದರ ಮೂಲಕವೇ ಅವಮಾನದ ಜೊತೆಗೆ ಬಹುಮಾನ ಸ್ವೀಕರಿಸಲು ಸಹಕಾರಿ. ಇಂತಹ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಹೂವಿನ ಹಡಗಲಿಯ ಹಿರಿಯ ಸಾಹಿತಿ ತೋ.ಮ.ಶಂಕ್ರಯ್ಯ ಅವರು ಮೌನದೊಳಗಿನ ಮನಸ್ಸು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ನಾಲ್ಕೂ ಕವಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ಟರು ಇಂದು ಕಾಲೇಜ್ ಪ್ರಾಂಶುಪಾಲರಾದ ಹೆಚ್.ಎನ್.ವೀರಭದ್ರಪ್ಪ ಅಧ್ಯಕ್ಷ ತೆ ವಹಿಸಿದ್ದರು. ಮೌನದೊಳಗಿ ಮನಸ್ಸು ಕೃತಿಯ ಕತೃ ಎಂ.ಕೆಂಚಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕ ಕಸಪ ಅಧ್ಯಕ್ಷ ನಾಗರಾಜ್ ಸ್ವಾಮಿ, ಹಿರಿಯ ಸಾಹಿತಿಗಳಾದ ಹಾಲಪ್ಪ ಚಿಟಗೇರಿ, ವೆಂಕಟೇಶ್ ಅವರು ಮಾತನಾಡಿದರು. ಎಂ.ಕೆ.ಶೇಕ್, ತಹಶಿಲ್ದಾರಾದ ವಿಶ್ವನಾಥ್, ವೀರಾಪುರ ಶೀರೆಸ್ತುದಾರ ಶಶಿಕಾಂತ್, ಕಂದಾಯ ನೀರಿಕ್ಷಕರಾದ ಎಚ್.ಎಂ.ಶೇಷಗಿರಿ, ಸಾದಿಕ್, ಕಸಪ ಜಿಲ್ಲಾ ಸಂಚಾಲಕ ಎಂ.ಪಂಪಾಪತಿ, ಶಾಲಿ ಚಂದ್ರಮೌಳಿ, ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ವೀರುಪಾಕ್ಷಪ್ಪ, ರಮೇಶ್, ದರೂರು ಎಲ್. ರುದ್ರುಮುನಿ, ಶ್ರೀಮಹಷರ್ಿ ವಾಲ್ಮೀಕಿ ವಿದ್ಯಾಥರ್ಿ ಕ್ಷೇಮಾಭಿವೃದ್ಧಿ ಪರಿಷತ್ ಸಂಘದ ತಾಲೂಕು ಅಧ್ಯಕ್ಷ ದರೂರು ಎನ್.ವೀರಭದ್ರಪ್ಪ, ಕರೂರು ಹೋಬಳಿಯ ಕಸಪ ಅಧ್ಯಕ್ಷ ವೀರುಪಾಕ್ಷಿ ಗೌಡ. ಮಹಾಂತೇಶ್ ಪ್ರಾಥರ್ಿಸಿದರು, ದೊಡ್ಡಬಸಪ್ಪ ಸ್ವಾಗತಿಸಿದರು, ರಾಮಪ್ಪ ಹಾಗೂ ನಾಗರಾಜ್ ನಿರೂಪಿಸಿದರು,ಅಂದಾನ ಗೌಡ ವಂದಸಿದರು.