ಆಶಾಕಾರ್ಯಕತರ್ೆಯರ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಪಾವತಿಸವವರೆಗೂ ಕೆಲಸ ಸ್ಥಗಿತ
ಬಳ್ಳಾರಿ ಜ.07: ನಗರದ ಗಾಂಧಿ ಭವನದಲ್ಲಿ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ಬಳ್ಳಾರಿ ಘಟಕದಿಂದ ಕಾಮ್ ಬಂದ್ ಚಳುವಳಿ ಅಂಗವಾಗಿ ಪ್ರತಿಭಟನಾ ಸಭೆಯನ್ನು ಸಂಘಟಿಸಲಾಗಿತ್ತು ಎಲ್ಲಾ ತಾಲ್ಲೂಕಗಳಿಂದ 500ಕ್ಕೂ ಹೆಚ್ಚು ಆಶಾ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಸಂಘದ ಜಿಲ್ಲಾಧ್ಯಕ್ಷರು ಎ.ದೇವದಾಸ್ ಕೆಲಸಕ್ಕೆ ಬಾರದಿರುವ ಆಶಾ ಕಾರ್ಯಕತರ್ೆಯರಿಗೆ ಕೆಲವು ಅಧಿಕಾರಿಗಳು ಸಂಬಳದಲ್ಲಿ ಕಡಿತಗೊಳಿಸುವುದಾಗಿ, ಇಲ್ಲವೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ. 15 ತಿಂಗಳುಗಳಿಂದ ಸರಿಯಾಗಿ ಸಂಬಳವೇ ನೀಡದೆ ಇರುವಾಗ, ಸಂಬಳದಲ್ಲಿ ಕಡಿತಗೊಳಿಸುವುದಾಗಿ ಹೇಳುತ್ತಿರುವುದು ಅತ್ಯಂತ ಹಾಸ್ಯಾಸ್ಪದ.
ಯಾವುದೇ ಬೆದರಿಕೆಗೆ ಜಗ್ಗದೆ, ನಮ್ಮ ಹೋರಾಟವನ್ನು ಮುಂದುವರೆಸೋಣ. ಇಡೀ ರಾಜ್ಯದ 40,000 ಆಶಾಗಳು ನಾವು ಒಟ್ಟಾಗಿದ್ದರೆ, ಎಂತಹ ಸಮಸ್ಯೆ ಬೇಕಾದರೂ ಎದುರಿಸಬಹುದು" ಎಂದರು. ಸಂಘದ ಜಿಲ್ಲಾ ಕಾರ್ಯದಶರ್ಿ ಗೀತಾ, ಅಂಬಿಕಾ, ಗೌರಮ್ಮ, ರಾಮಕ್ಕ, ಶಿವಕುಮಾರಿ ಮುಂತಾದವರು ಪಾಲ್ಗೊಂಡಿದ್ದರು. ಸಭೆಯ ನಂತರ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.