ಬಳ್ಳಾರಿ: ವಚನಗಳ ಅಧ್ಯಯನದಿಂದ ಸಮಸಮಾಜದ ನಿರ್ಮಾಣ ಸಾಧ್ಯ: ಕುಲಪತಿ ರಮೇಶ ಹೇಳಿಕೆ
ಲೋಕದರ್ಶನ ವರದಿ
ಬಳ್ಳಾರಿ 10: ವಚನಗಳ ಅಧ್ಯಯನದಿಂದ ಸಮಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಸ.ಚಿ.ರಮೇಶ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠವು ದಿ: 10ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ದೇವರ ದಾಸಿಮಯ್ಯ ವಚನಗಳ ಪ್ರಸ್ತುತತೆ ಕುರಿತ ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರ ದಾಸಿಮಯ್ಯ ಅವರ ವಚನಗಳನ್ನು ಒಳಗೊಂಡಂತೆ ವಚನಕಾರರೆಲ್ಲರ ವಚನಗಳನ್ನು ಯಾಕೆ? ಹೇಗೆ? ಯಾರಿಗೆ? ಪ್ರಸ್ತುತ ಎಂಬ ಮೂರು ಪ್ರಶ್ನೆಗಳ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬದುಕಿದ ವಚನಕಾರ ದಾಸಿಮಯ್ಯ ಅವರ ಕಾಲದ ಸಾಮಾಜಿಕ ಸಮಸ್ಯೆಗಳಾದ ಹಸಿವು, ಬಡತನ, ಶ್ರೀಮಂತ-ಬಡವ, ಮೇಲು ಕೀಳು ಇವು ಸಮಕಾಲೀನ ಸಮಸ್ಯೆಗಳಾಗಿದ್ದು, ಇಂದಿಗೂ ಅಂದಿಗೂ ಅಂತಹ ವ್ಯತ್ಯಾಸಗಳು ಕಾಣಿಸುತ್ತಿಲ್ಲ. ಆಗ ಏಕದೈವ ಆರಾಧನೆ ಇದ್ದರೆ ಇಂದು ದೇಸಿ ನೆಲೆಯಲ್ಲಿ ಬಹುದೇವತೆಗಳ ಆರಾಧನೆ ಹಾಗೂ ಬಹುಸಂಸ್ಕೃತಿಗಳಿವೆ. ನಂಬಿಕೆ ಮೌಲ್ಯಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.
ವಿಶೇಷ ಉಪನ್ಯಾಸ ನೀಡುತ್ತ ಕೊಪ್ಪಳದ ಲೇಖಕ ವಿಠ್ಠಪ್ಪ ಗೋರಂಟ್ಲಿ ಇಡೀ ಶರಣ ಸಾಹಿತ್ಯಕ್ಕೆ ಆದ್ಯ ವಚನಕಾರರಾಗಿ ಅದ್ಭುತ ಕ್ರಾಂತಿಯ ಕೇಂದ್ರ ಬಿಂದು ವ್ಯಕ್ತಿ ಎಂದರೆ ದೇವರ ದಾಸಿಮಯ್ಯ ಎಂದು ಹೇಳಿದರು. ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಎಂಬ ವಿವಾದ ಮುಖ್ಯವಲ್ಲ. ಆದರೆ ಈ ಕುರಿತು ಸಂಶೋಧನೆ ಚರ್ಚೆ ನಡೆಯಲಿ. ಬುದ್ಧ, ಬಸವ, ಕಬೀರ ಮುಂತಾದವರು ಸಾರ್ವಕಾಲಿಕ ಸಾರ್ವದೇಶಿಕ ಸತ್ಯವನ್ನು ಹೇಳಿರುವ ಕಾರಣದಿಂದ ಇಂದಿಗೂ ಪ್ರಸ್ತುತರಾಗಿದ್ದಾರೆ. ಬಸವಣ್ಣ ತನ್ನ ವಚನಗಳಲ್ಲಿ ದಾಸಿಮಯ್ಯನನ್ನು ಕೊಂಡಾಡಿದ್ದಾರೆ. ಸಮಾನತೆ ಸಮಾನ ಬದುಕು ಹಂಚಿಕೆ, ಲಿಂಗ ಸಮಾನತೆ ಮೊದಲಾದ ವಿಚಾರಗಳನ್ನು ಮೊಟ್ಟ ಮೊದಲು ಬಿತ್ತಿದವರು ವಚನಕಾರರು. ಜನರ ಆಡು ಭಾಷೆಯ ಮೂಲಕ ವಚನದ ರಚನೆಯ ಪರಿಕಲ್ಪನೆಯನ್ನು ದಾಸಿಮಯ್ಯ ಕೊಟ್ಟಿದ್ದಾರೆ. ಮುರಿದುಕಟ್ಟುವ ಕೆಲಸವನ್ನು ಮಾಡಿದ್ದಾರೆ. ಕೆಳವರ್ಗದಿಂದ ಬಂದ ಶರಣರೆಲ್ಲರನ್ನು ಜಾತಿ ವೃತ್ತಿ ಮೂಲದಿಂದ ಗುರುತಿಸಲಾಗಿದೆ. ಜಾತಿ ಮೂಲಕ ದಾಸಿಮಯ್ಯನನ್ನು ಗುರುತಿಸುವ ಕ್ರಮ ಸರಿಯಲ್ಲ. ಇಂದಿನ ಸಮಾಜದ ವಿಷಮತೆಯನ್ನು ಸರಿಪಡಿಸಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಅವರು ಉಪನ್ಯಾಸದಲ್ಲಿ ತಿಳಿಸಿದರು.
ಮಾನ್ಯ ಕುಲಪತಿಯವರು ವಿಠ್ಠಪ್ಪ ಗೋರಂಟ್ಲಿ ಅವರನ್ನು ಗೌರವಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ.ಅಶೋಕಕುಮಾರ ರಂಜೇರೆ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯದ ಪೀಠಗಳು ಜನಪರ ಶೈಕ್ಷಣಿಕ ಸಾಮಾಜಿಕ ಕಾಳಜಿಯಿಂದ ಕಾರ್ಯನಿರ್ವಹಿಸುತ್ತ್ತಿವೆ. ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ 11 ಪೀಠಗಳನ್ನು ಹೊಂದಿದೆ. ಕನರ್ಾಟಕ ಸರ್ಕಾರವು ಒನಕೆ ಓಬವ್ವ ಅಧ್ಯಯನ ಪೀಠವನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭ ಮಾಡುತ್ತಿದೆ ಎಂದು ತಿಳಿಸಿದರು. ವೇದಿಕೆ ಮೇಲಿದ್ದ ಗಣ್ಯರೆಲ್ಲರೂ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿದರು. ಅಧ್ಯಯನ ಪೀಠದ ಸಂಚಾಲಕರಾದ ಡಾ.ಗೋವಿಂದ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಪ್ರಾಥಿಸಿದರು ವಿದ್ಯಾರ್ಥಿ ವಿಶ್ವನಾಥ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ವಂದಿಸಿದರು. ಕಾರ್ಯಕ್ರಮದಲ್ಲಿ ಡೀನರು, ಅಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾಥರ್ಿಗಳು ಹಾಗೂ ಕಮಲಾಪುರ, ಹೊಸಪೇಟೆಯ ನೇಕಾರ ಸಮುದಾಯದ ಅನೇಕರು ಆಸಕ್ತಿಯಿಂದ ಭಾಗವಹಿಸಿದ್ದರು.