ಜಮಖಂಡಿ

ಜಮಖಂಡಿ ಎ.ಪಿ.ಎಂ.ಸಿ ಮಾರುಕಟ್ಟೆ ಮೊಬೈಲಗಳ ಕಳವು

ಜಮಖಂಡಿ ಎ.ಪಿ.ಎಂ.ಸಿ ಮಾರುಕಟ್ಟೆ ಮೊಬೈಲಗಳ ಕಳವು

ಜಮಖಂಡಿ ಎ.ಪಿ.ಎಂ.ಸಿ ಮಾರುಕಟ್ಟೆ ಮೊಬೈಲಗಳ ಕಳವು  

ಜಮಖಂಡಿ 26 ;  ನಗರದ ಎ.ಪಿ.ಎಂ.ಸಿ ಕಾಯಿಪಲ್ಲೆ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೊಬೈಲಗಳನ್ನು ಕಳೆದುಕೊಂಡ ದೂರುದಾರರ ಸಾರ್ವಜನಿಕರ ಸಿ.ಇ.ಆಯ್‌.ಆರ್ ಆಪ್ ಮೂಲಕ ಶಹರ ಠಾಣೆಯ ಪೋಲಿಸರು ಪತ್ತೆ ಹಚ್ಚಿ ದೂರುದಾರ ಸಾರ್ವಜನಿಕರಿಗೆ ಡಿ,ಎಸ್,ಪಿ, ಶಾಂತವೀರ ನೀಡಿದರು. 

ನಗರದ ಶಹರ ಪೋಲಿಸ್ ಠಾಣೆಯ ಆವರಣದಲ್ಲಿ ಮೊಬೈಲಗಳನ್ನು ಕಳೆದುಕೊಂಡ ದೂರುದಾರರ ಸಾರ್ವಜನಿಕರ ಡಿ,ಎಸ್,ಪಿ. ಶಾಂತವೀರ ಈ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ  ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು ಸಹಾಯಕ ಪೋಲಿಸ ವರಿಷ್ಠಾಧಿಕಾರಿಗಳ ಹಾಗೂ ಸಿ.ಪಿ.ಐ ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಪಿ,ಎಸ್,ಐ ಅನೀಲ ಕುಂಬಾರ ನೇತೃತ್ವದಲ್ಲಿ ಪೋಲಿಸ ಸಿಬ್ಬಂದಿಗಳು ಸೇರಿ ತಾಲೂಕು ಜಿಲ್ಲಾ ಕೇಂದ್ರ ಹಾಗೂ ಹೊರ ರಾಜ್ಯಗಳಲ್ಲಿದ್ದ ಕಳೆದುಹೋದ ಮೊಬೈಲಗಳನ್ನು ಸಿ,ಇ,ಆಯ್,ಆರ್ ಆಪ್ ಮೂಲಕ 24 ಮೊಬೈಲಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ದೂರುದಾರರಿಗೆ ನೀಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

ದೇಶದಲ್ಲಿ 22ಲಕ್ಷ ಮೊಬೈಲಗಳ ಕಳೆದಿರುವ ದೂರು ದಾಖಲಾಗಿವೆ. ಅದರಲ್ಲಿ 11 ಲಕ್ಷ ಮೊಬೈಲಗಳನ್ನು ರಿಕವರಿ ಮಾಡಲಾಗಿದೆ. ಕರ್ನಾಟಕದಲ್ಲಿ 2ಲಕ್ಷ ಮೊಬೈಲಗಳ ಕಳೆದಿರುವ ದೂರು ದಾಖಲಾಗಿವೆ. 1ಲಕ್ಷ 3 ಸಾವಿರ ಸಿ.ಇ.ಆಯ್‌.ಆರ್ ಆಪ್ ಮೂಲಕ ರಿಕವರಿ ಮಾಡಲಾಗಿದೆ. ಈ ಆಪ್ ಮೊಬೈಲನಲ್ಲಿ ಬಳಕೆ ಮಾಡಿ ದೂರು ದಾಖಲಿಸಬಹುದು ಇದರಿಂದ ಕಳೆದುಹೋದ ಮೊಬೈಲ ಪತ್ತೆಗೆ ಸರಳವಾಗುವುದು ಎಂದರು.ಪೋಲಿಸ್ ಸಿಬ್ಬಂದಿಗಳ ಕಾರ್ಯಕ್ಕೆ ಪ್ರಶಂಸಿಸಿ ಡಿ.ವೈ.ಎಸ್‌.ಪಿ ಶಾಂತವೀರ ಈ ನಗದು ಬಹುಮಾನ ನೀಡಿದರು. 

ಈ ಸಂದರ್ಭದಲ್ಲಿ ಸಿ.ಪಿ.ಐ ಮಲ್ಲಪ್ಪ ಮಡ್ಡಿ, ಪಿ.ಎಸ್‌.ಐ ಅನೀಲ ಕುಂಬಾರ, ಪೋಲಿಸ್ ಸಿಬ್ಬಂದಿಗಳಾದ ಪ್ರಕಾಶ ಕಾಖಂಡಕಿ, ಶಂಕರ ಆಸಂಗಿ,ಶೇಖರ ನಾಯಕ, ಮುಸ್ತಾಕ ಬೂದಿಹಾಳ, ಪರುಶುರಾಮ ಘಾಟಗೆ, ಪ್ರಕಾಶ ಹೊಸಮನಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ