ಜಮಖಂಡಿ

ಜಮಖಂಡಿ ಸಕ್ಕರೆ ಕಾರ್ಖಾನೆ ಉಳಿಸಲು ರೈತರ ಹೋರಾಟದ ಎಚ್ಚರಿಕೆ

ಜಮಖಂಡಿ ಸಕ್ಕರೆ ಕಾರ್ಖಾನೆ ಉಳಿಸಲು ರೈತರ ಹೋರಾಟದ ಎಚ್ಚರಿಕೆ

ಲೋಕದರ್ಶನ ವರದಿ 


ಜಮಖಂಡಿ 25 : ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮಖಂಡಿ ಶುಗರ್ಸ ಕಾರ್ಖಾನೆಗೆ ಬಾಂಬ್ ಬ್ಲಾಸ್ಟ್‌ ಮಾಡಲು ಮಹಾರಾಷ್ಟ್ರದಿಂದ ಬಂದಿರುವ ಜನರು. ಸಕ್ಕರೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಮತ್ತು ಪ್ರತಿಭಟನಾಕಾರ ರೈತರ ಮೇಲೆ ಗುಂಡಾಗಿರಿ ಮಾಡಲು ಯತ್ನಿಸಿರುವುದು ಖಂಡನೀಯ ಎಂದು ರೈತ ಮುಖಂಡ ಬಿ.ಎಸ್‌. ಸಿಂಧೂರ ಹಾಗೂ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ರಾಜು ಮೇಲಿಕೇರಿ ಆಕ್ರೋಶ ವ್ಯಕ್ತಪಡಿಸಿದರು. 

ಕಬ್ಬಿನ ಬಾಕಿ ಬಿಲ್ ಕೇಳಲು ಬಂದ ರೈತರು ಸಕ್ಕರೆ ಕಾರ್ಖಾನೆಯ ಮುಂಭಾದಲ್ಲಿ ಪ್ರತಿಭಟನೆ ನಡೆಸುತ್ತಿದ ಸಮಯದಲ್ಲಿ ಪೇಟ್ರೋಲ್, ಡಿಸೇಲ್ ಹಾಗೂ ಸ್ಪೋಟಕ್ಕ ವಸ್ತುಗಳು ಮತ್ತು ಮಾರಕಾಸ್ತ್ರಗಳಿಂದ ಬೆದರಿಸಿ. ಕಾರ್ಖಾನೆಯನ್ನು ಧ್ವಂಸಗೊಳಿಸುವ ಉದ್ದೇಶದಿಂದ ಕೆಲವರು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೈತರಿಗೆ ಸುಮಾರು ರೂ.4 ಕೋಟಿ ಬಾಕಿ ಬಿಲ್ ಪಾವತಿಸಿಲ್ಲ. ಕಬ್ಬು ಸಾಗಣೆ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಸಿಬ್ಬಂದಿಗೆ ಮೂರು ತಿಂಗಳ ವೇತನವೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಕಾಯುವ ಬದಲು ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದು ಆರೋಪಿಸಿದರು. 

ಕಾರ್ಖಾನೆಯ ನಿರ್ವಹಣೆಗೆ ಸಂಬಂಧಿಸಿದಂತೆ ಅ.27 ರಂದು ನಡೆಯುವ  ಷೇರುದಾರರ ಸಭೆಯಲ್ಲಿ ಕಾನೂನುಬದ್ಧ ನಿರ್ಧಾರ ಕೈಗೊಳ್ಳಬೇಕು. ರೈತರ ಸಹಕಾರವಿಲ್ಲದೆ ಯಾವುದೇ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ರೈತರ ಬಾಕಿ ಪಾವತಿಸಿ. ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಡಿಎಸ್‌ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾತನಾಡಿ, ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಧ್ವಂಸಗೊಳಿಸಲು ಯತ್ನಿಸಿದವರನ್ನು ಇದಕ್ಕೆ ಕುಮ್ಮಕ್ಕು ನೀಡಿದವರನ್ನು ತಕ್ಷಣ ಬಂಧಿಸಿ, ಸಮಗ್ರ ತನಿಖೆ ನಡೆಸಬೇಕು. ಕಾರ್ಖಾನೆಯನ್ನು ಉಳಿಸಲು ರೈತರು ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಕಾರ್ಖಾನೆಯನ್ನೆ ನಾಶ ಮಾಡಲು ಯತ್ನಿಸುತ್ತಿರುವ ರಾಜು ಕಡಪಟ್ಟಿ ಸೇರಿದಂತೆ  ಕಾರ್ಖಾನೆಗೆ ಕಪ್ಪು ಚುಕ್ಕೆ ತರುವ ಕಾರ್ಯ ಮಾಡುತ್ತಿರುವವರನ್ನು ಕೂಡಲೇ ಬಂದಿಸಬೇಕು ಎಂದು ಆಗ್ರಹಿಸಿದರು. 

ರೈತರ ಪರಿಶ್ರಮದಿಂದ ನಿರ್ಮಾಣವಾದ ಕಾರ್ಖಾನೆಯನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ.

ರೈತರ ಬಾಕಿ ಪಾವತಿಸಿ. ಅವರಿಗೆ ನ್ಯಾಯ ಒದಗಿಸಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಕಾರ್ಖಾನೆಯನ್ನು ಸಮರ​‍್ಕವಾಗಿ ನಡೆಸಿ ರೈತರಿಗೆ ನ್ಯಾಯಯುತ ಕಬ್ಬಿನ ಬೆಲೆ ನೀಡುವವರು ಯಾರೇ ಆಗಿದ್ದರೂ ಅವರಿಗೆ ರೈತರ ಸಹಕಾರವಿದೆ. ಆದರೆ. ಗುಂಡಾಗಿರಿ ಮೂಲಕ ಕಾರ್ಖಾನೆಯನ್ನು ಮುಚ್ಚಿಸುವ ಅಥವಾ ಧ್ವಂಸಗೊಳಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ಅಭಯಕುಮಾರ ನಾಂದ್ರೆಕರ, ಬಾಹುಬಲಿ ಆಲಗೂರ, ಸಂಗಪ್ಪ ಅಂಕಲಗಿ, ಅನೀಲ ಜಾದವ, ರಾಘು ಗೋಲಬಾವಿ, ನಿಖಿಲ ಪಾಟೀಲ, ಭರತೇಶ ಖಿದ್ರಾಪುರ, ರವಿ ಕವಳೆ, ರವಿ ಐಗಳಿ, ಕಲ್ಲಪ್ಪ ಗಿರಡ್ಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು. 


ಸುದ್ದಿ ಓದಿ