ಮಹಿಳೆ

ಕೊರೊನಾದಲ್ಲೂ ಮಿಂಚಿದ ಮಹಿಳಾ ಮಾರುಕಟ್ಟೆ

ಕೊರೊನಾದಲ್ಲೂ ಮಿಂಚಿದ ಮಹಿಳಾ ಮಾರುಕಟ್ಟೆ

- ಸುರೇಶ ಗುದಗನವರ

ರಾಮದುರ್ಗ

ನಮ್ಮ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಅಪಾರ. ಹಳೆಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂಧಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿವೆ. ದಿನನಿತ್ಯದ ಜೀವನದಲ್ಲಿ ನಮ್ಮ ಅನೇಕ ಕೆಲಸಕಾರ್ಯಗಳಿಗೆ ಇವುಗಳನ್ನು ಅವಲಂಬಿಸಿದ್ದೇವೆ. ಸಾಮಾಜಿಕ ಜಾಲತಾಣಗಳು ಒಂದು ಕ್ರಾಂತಿಕಾರಕ ಅವಿಷ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುವದನ್ನು ನಾವು ಕೇಳುತ್ತಿದ್ದೇವೆ. ಸಾಮಾಜಿಕ ಜಾಲತಾಣವು ಇಂದಿನ ಜೀವನಶೈಲಿಗೆ ಎಷ್ಟು ಅಗತ್ಯ ಇದೆಯೋ ಅಷ್ಟೇ ಅಪಾಯಕಾರಿ ಕೂಡಾ ಎಂಬುದು ವಾಸ್ತವ ಸತ್ಯ. ಆದರೆ ನಾವು ಇದನ್ನು ಹೇಗೆ ಗ್ರಹಿಸುತ್ತೇವೆ ಮತ್ತು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೆವೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಕೊರೋನಾ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್, ಟ್ವೀಟರ್ ಮುಂತಾದವುಗಳ ಬಳಕೆ ಜಾಸ್ತಿಯಾಗಿದೆ. ಇವೆಲ್ಲವುಗಳೂ ನಮ್ಮನ್ನು  ಪ್ರಪಂಚದ ಯಾವದೇ ಮೂಲೆಯಲ್ಲಿದ್ದರೂ ಒಂದುಗೂಡಿಸುತ್ತವೆ. ಫೇಸ್ಬುಕ್ನಲ್ಲಿ ಹಲವು ಕಥೆ-ಕವನ, ಸಾಹಿತ್ಯ, ಸಂಗೀತ ಹಾಗೂ ಗುಂಪಿನಲ್ಲಿ ಬರೆಯುವರ ಕಥೆ, ಕವಗಳನ್ನು ಓದಿದಾಗ ಸಂತಸ ಮತ್ತು ಅಚ್ಚರಿಯಾಗುತ್ತದೆ. ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಈ ಪ್ರತಿಭೆಗಳ ಬಗ್ಗೆ ಯಾರಿಗೆ ಗೊತ್ತಾಗುತ್ತಿತ್ತು ? ಹೀಗೆ ಕೊರೋನಾ ಸಂಕಷ್ಟದ ದಿನಗಳಲ್ಲಿ ಅನೇಕ ಮಹಿಳೆಯರನ್ನು ಒಂದೇ ವೇದಿಕೆಯಡಿಯಲ್ಲಿ ಒಟ್ಟುಗೂಡಿಸಿ, 'ಮಹಿಳಾ ಮಾರುಕಟ್ಟೆ' ಎಂಬ ರಚನಾತ್ಮಕ ಫೇಸ್ಬುಕ್ ಗುಂಪೊಂದನ್ನು ಪ್ರಾರಂಭಿಸಿದವರು ಅಪಣರ್ಾರಾವ್.

ಮೂಲತಃ ಅಪಣರ್ಾರಾವ್ ಅವರು ಚಿತ್ರದುರ್ಗದ ಹೊರಕೆರೆ ದೇವರಪುರದವರು. ಅವರು ಹುಟ್ಟಿದ್ದು ಬೆಂಗಳೂರು, ಹೈಸ್ಕೂಲ್ನಲ್ಲಿ ಶುರುವಾದ ನಾಟಕದ ಹವ್ಯಾಸವು ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿಯೂ ಮುಂದುವರೆಯಿತು. ನಂತರ ಅಪಣರ್ಾರಾವ್ ಅವರು ಫೈನ್ ಆಟ್ರ್ಸನಲ್ಲಿ ಒಂದು ವರ್ಷದ ತರಬೇತಿ ಪಡೆದರು. ಅವರು 1994ರಲ್ಲಿ ವಿನಯರಾವ್ ರವರನ್ನು ಮದುವೆಯಾಗಿ ಮುಂಬೈಗೆ ತೆರಳಿದರು. ಕನ್ನಡ ಸಂಘ-ಸಂಸ್ಥೆಗಳಲ್ಲಿ ಒಡನಾಟ ಬೆಳೆಸಿಕೊಂಡ ಅಪಣರ್ಾರಾವ್ ಗೋರೆಗಾಂವ್ ಕನರ್ಾಟಕ ಸಂಘದ ಯುವ ವಿಭಾಗದ ನಿದರ್ೇಶಕಿಯಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಹಾಗೆಯೇ ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಗಳಿಸಿದರು. ಸಧ್ಯ ಅರ್ಥಪೂರ್ಣ ಬರಹಗಳಿಂದ ಕನ್ನಡಗರಿಗೆ ಚಿರಪರಿಚಿತರು.

ಕೊರೋನಾ ಲಾಕ್ಡೌನ್ನಿಂದಾಗಿ ಜಗತ್ತೇ ಆಥರ್ಿಕ ಕುಸಿತವನ್ನು ಎದುರಿಸುವ ಸಮಯದಲ್ಲಿ ಅಪಣರ್ಾರಾವ್ 'ನಾನೂ ಬೆಳೆಯಬೇಕು, ಜೊತೆಗೆ ಬೇರೆಯವರನ್ನೂ ಬೆಳೆಸಬೇಕು' ಎಂಬ ಉದ್ದೇಶದೊಂದಿಗೆ ಕಳೆದ ಮೇ 25ರಂದು 'ಮಹಿಳಾ ಮಾರುಕಟ್ಟೆ' ಎಂಬ ಫೇಸ್ಬುಕ್ ಗುಂಪೊಂದನ್ನು ಪ್ರಾರಂಭಿಸಿದರು. ಈ ಫೇಸ್ಬುಕ್ ಗುಂಪು ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ಆರಂಭವಾದ ಎರಡು ತಿಂಗಳ ಅವಧಿಯಲ್ಲಿಯೇ 14 ಸಾವಿರಕ್ಕೂ ಅಧಿಕ ಮಹಿಳೆಯರು ಗುಂಪಿನ ಸದಸ್ಯೆಯರಾಗಿರುವದು. ಇದೊಂದು ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಈ ಮಾರುಕಟ್ಟೆ. ಇಲ್ಲಿ ನೀವು ತಯಾರಿಸಿದ, ಬೆಳೆದ, ತಂದಿಟ್ಟುಕೊಂಡಿದ್ದ, ಯಾವದೇ ತರಹದ ಸಾಮಾನು ಅಥವಾ ಪದಾರ್ಥಗಳನ್ನು ಇಲ್ಲಿ ಹಾಕಿ ಮಾರಬಹುದು. ಅವುಗಳ ಸಂಪೂರ್ಣ ಮಾಹಿತಿ ಹಾಗೂ ಬೆಲೆಯನ್ನು ಇಲ್ಲಿಯೇ ಪೋಸ್ಟ್ ಮಾಡುವದು ಖಡ್ಡಾಯ ಆಯಾ ವಸ್ತುಗಳಿಗೆ ಅವರವರೇ ಜವಾಬ್ದಾರರು. ಇದೊಂದು ಎಲ್ಲಾ ಮಹಿಳೆಯರಿಗೂ ಅನುಕೂಲವಾಗಲೇಂದು ನಿಮರ್ಿತವಾದ ಗುಂಪು, ಫೇಸ್ಬುಕ್ ಅಕೌಂಟ್ ಮೂಲಕ ಕನ್ನಡದಲ್ಲಿ 'ಮಹಿಳಾ ಮಾರುಕಟ್ಟೆ' ಎಂದು ಟೈಪಿಸಿ ಸದಸ್ಯರಾದ ತಕ್ಷಣ ಮೇಲಿನ ವಾಕ್ಯಗಳು ತಮ್ಮನ್ನು ಸ್ವಾಗತಿಸುತ್ತವೆ. ಇದು ಮಹಿಳೆಯರಿಂದಲೇ ಮಹಿಳೆಯರಿಗಾಗಿ, ಮಹಿಳೆಯರೇ ನಿರ್ವಹಿಸುತ್ತಿರುವ 'ಮಹಿಳಾ ಮಾರುಕಟ್ಟೆ' ಫೇಸ್ಬುಕ್ ಗುಂಪು.

'ಮಹಿಳಾ ಮಾರುಕಟ್ಟೆ'  ಫೇಸ್ಬುಕ್ ಇರುವದು ಮಹಿಳೆಯರ ಅನುಕೂಲಕ್ಕಾಗಿ ಎಂಬುದು ಅಪಣರ್ಾರಾವ್ ಅವರ ಖಡಕ್ ನಿಲುವು. ಹೀಗಾಗಿ ಮಹಿಳಾ ಮಾರುಕಟ್ಟೆಯ ಫೇಸ್ಬುಕ್ನಲ್ಲಿ ಪುರಷರ ಸದಸ್ಯತ್ವಕ್ಕೆ ಅವಕಾಶವಿಲ್ಲ. ತಾಯಿ, ಸಹೋದರಿ, ಪತ್ನಿಯ ನೆರವಿನಿಂದ ಮನೆಯಲ್ಲಿ ಹಲವು ಉತ್ಪನ್ನಗಳು ತಯಾರಾಗುತ್ತಿದ್ದರೇ ಅವರ ಹೆಸರಿನ ಫೇಸ್ಬುಕ್ ಅಕೌಂಟ್ ಮೂಲಕ ಸದಸ್ಯತ್ವ ಪಡೆಯಬಹುದು. ಅಲ್ಲದೇ ಕನ್ನಡಿಗ ಮಹಿಳೆಯರು ಮಾತ್ರ ಗುಂಪಿಗೆ ಸೇರಬಹುದು. ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡುವದು ಕಡ್ಡಾಯ. ಯಾವದೇ ಫೇಕ್ ಅಕೌಂಟಗೆ ಅವಕಾಶವಿಲ್ಲ. ಉತ್ಪನ್ನ ಮಾರಾಟ ಮಾಡುವವರಿಗೆ ಅವರು ಯಾವದೇ ರೀತಿಯ ಹಣವನ್ನು ಪಡೆಯುತ್ತಿಲ್ಲದಿರುದು ವಿಶೇಷ. ಅಪಣರ್ಾರಾವ್ರವರು ಸದಸ್ಯೆಯರ ಹಲವು ಸಮಸ್ಯೆಗಳಿಗೆ ಸ್ಪಂದಿಸಿ ಉತ್ತರ ನೀಡಿ ವ್ಯಾಪಾರಕ್ಕೆ ಉತ್ತೇಜನ ನೀಡುತ್ತಾರೆ.

ಮನೆಯೊಳಗೆ ಇದ್ದುಕೊಂಡೇ ಆಥರ್ಿಕವಾಗಿ ಸಬಲರಾಗಲು ಬಯಸುವ ಮಹಿಳೆಯರಿಗೆ 'ಮಹಿಳಾ ಮಾರುಕಟ್ಟೆ' ಒಂದು ಉತ್ತಮ ವೇದಿಕೆಯನ್ನು ಒದಗಿಸಿದೆ. ಇದೊಂದು ಅನೌಪಚಾರಿಕ ಮಹಿಳೆಯರ ಗುಂಪಾಗಿದ್ದು, ಇಲ್ಲಿ ಮಹಿಳೆಯರು ಉತ್ಪಾದಿಸುವ ಗೃಹೋಪಯೋಗಿ ವಸ್ತುಗಳನ್ನು ಪರಿಚಯಿಸಬಹುದು.  ಉತ್ಪಾದಕರಿಂದ ಬೆಲೆ, ಪ್ರಮಾಣ, ಸಂಪರ್ಕದ ಮೊಬೈಲ್ ಸಂಖ್ಯೆ ಮೊದಲಾದ ವಿವರಗಳನ್ನು ಜಾಲತಾಣದಲ್ಲಿಯೇ ಪಡೆದ ಸದಸ್ಯೆಯರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಹೀಗೆಯೇ ಆಹಾರೋತ್ಪನ್ನಗಳು, ಕೃಷಿ ಉತ್ಪನ್ನಗಳು, ವಸ್ತ್ರಾಭರಣ, ಕರಕುಶಲವಸ್ತುಗಳು ಮುಂತಾದವುಗಳೆಲ್ಲವೂ ಮಹಿಳೆಯರ ನಡುವೆ ವಿನಿಮಯವಾಗುತ್ತಿರುವದು ಆಶ್ಚರ್ಯಕರ. ಮಹಿಳಾ ಮಾರುಕಟ್ಟೆ ಕೇವಲ ವಸ್ತುಗಳ ವಿನಿಮಯಕ್ಕೆ ಸೀಮಿತವಾಗಿಲ್ಲ. ಅದು ವಾರಕ್ಕೊಂದು ದಿನ ವೃತ್ತಿ ಸಂಬಂಧ ಸೇವೆಗಳ, ಟೇಲರಿಂಗ್ ಸೇವೆಗಳ ಆನ್ಲೈನ್ ಕ್ಲಾಸುಗಳನ್ನು ನಡೆಸುತ್ತದೆ. ಅಲ್ಲದೇ ಸಲಹೆ ಸೂಚನೆ, ಅನುಭವ ಹಂಚಿಕೆ, ಚಿಂತನ-ಮಂಥನಗಳಿಗೂ ಅವಕಾಶ ಕಲ್ಪಿಸಿದೆ. ಸ್ವಂತ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಆಗಾಗ ಫೇಸ್ಬುಕ್ ಲೈವ್ ಮೂಲಕ ಪರಿಚಯಿಸುತ್ತಿರುವದು ಹೆಮ್ಮೆಯ ಸಂಗತಿ.

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು, ಪದವಿ ಪಡೆದ ಕನಸು ಕಾಣುತ್ತಿರುವ ಉತ್ಸಾಹಿ ಯುವತಿಯರು, ಜೀವನಾನುಭವದ ಅಜ್ಜಿಯಂದಿರು ಮುಂತಾದವರು ಗುಂಪಿನಲ್ಲಿ ಉತ್ಸಾಹದಿಂದ ತೊಡಗಿದ್ದಾರೆ. ಇವರೆಲ್ಲರ ಪ್ರತಿಭೆಗಳನ್ನು ಬಳಸಿಕೊಂಡು ಅತೀ ಕಡಿಮೆ ಸಮಯದಲ್ಲಿ ಗ್ರಾಹಕ ಸ್ನೇಹಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದು ವಿಸ್ಮಯವೇ ಸರಿ. ಮಹಿಳಾ ಮಾರುಕಟ್ಟೆ ಗುಂಪಿನಿಂದ ರೇಷ್ಮೇ, ಖಾದಿ, ಹತ್ತಿ, ಇಳಕಲ್ ಸೀರೆಗಳು, ವಿವಿಧ ಬ್ರಾಂಡ್ನ ಬಟ್ಟೆಗಳು, ಆಭರಣಗಳು, ಅಗಸೆ, ಶೇಂಗಾ, ಕಡಲೆಬೇಳೆ, ಗುರೆಳ್ಳ ಇತ್ಯಾದಿ ಚಟ್ನಿಪುಡಿ, ಪುಳಿಯೋಗರೆ, ಬಿಸಿಬೇಳೆ, ವಾಂಗೀಭಾತ್, ಚಿತ್ರಾನ್ನ ಇತ್ಯಾದಿ ಪುಡಿಗಳು, ಅಪ್ಪೆಮಿಡಿ, ನಿಂಬೆ, ಮಾವಿನ ಇತ್ಯಾದಿ ಉಪ್ಪಿನಕಾಯಿಗಳು, ದೇಸಿ ಹಸುವಿನ ತುಪ್ಪ, ಜೇನುತುಪ್ಪ, ಕೊಬ್ಬರಿ ಎಣ್ಣೆ, ಸಾವಯವ ಬೆಲ್ಲ, ಚಕ್ಕುಲಿ, ಕೋಡುಬಳೆ, ಸಿಹಿ-ಖಾರ ತಿಂಡಿಗಳು, ಹಲಸಿನ ಹಪ್ಪಳ, ಚಿಪ್ಸ್, ಕಾಳುಮೆಣಸು, ಮೆಹಂದಿ ಪುಡಿ, ಕೇಶ ತೈಲಗಳು, ವಿವಿಧ ವಿನ್ಯಾಸಗಳು, ಅರಿಸಿನ-ಕುಂಕುಮ, ಡ್ರೈ ಫ್ರೂಟ್ಸ್, ವಯರ್ ಬ್ಯಾಗ್, ಪಸರ್ುಗಳು ಮುಂತಾದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೇ ಮಹಿಳೆಯರು ತಾವು ಉತ್ಪಾದಿಸಿದ ಯಾವದೇ ಉತ್ಪನ್ನವನ್ನು ಗುಂಪಿನ ಮೂಲಕ ಮಾರಬಹುದು. ಹಾಗೆಯೇ ನಿಮಗೆ ಸಾವಯವ ಬೆಲ್ಲದ ಪುಡಿ ಬೇಕಾದರೆ, ಈ ಫೇಸ್ಬುಕ್ ಪೇಜ್ನಲ್ಲಿ 'ನನಗೆ ಇಷ್ಟು ಕೆ.ಜಿ. ಬೆಲ್ಲದ ಪುಡಿ ಬೇಕಿತ್ತು' ಎಂದು ಟೈಪಿಸಿದರೆ ಅದನ್ನು ಹೊಂದಿರುವ ಗುಂಪಿನ ಸದಸ್ಯರು ತಕ್ಷಣ ಪ್ರತಿಕ್ರಿಯೆ ಮಾಡುತ್ತಾರೆ. ಅನಂತರ ನೀವು ಖರೀದಿಸಬಹುದು.

ಮಹಿಳಾ ಮಾರುಕಟ್ಟೆ ಗುಂಪಿನ ಸದಸ್ಯೆಯರು ಉತ್ಪನ್ನಗಳನ್ನು ಕೋರಿಯರ್ ಅಥವಾ ಅಂಚೆ ಮೂಲಕ ಗ್ರಾಹಕರಿಗೆ ಕಳುಹಿಸುತ್ತಾರೆ. ಆ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ಹಾಗಾಗಿ ಉತ್ಪನ್ನದ ಬೆಲೆಯ ಜೊತೆಯಲ್ಲಿ ಸಾಗಾಣೆ ವೆಚ್ಚವನ್ನು ಗ್ರಾಹಕರು ಒಟ್ಟಾಗಿ ನೀಡಬೇಕು. ಗ್ರಾಮೀಣ ಪ್ರದೇಶದ ಮಹಿಳೆಯರು ಉತ್ಪನ್ನಗಳನ್ನು ಗ್ರಾಹಕರಿಗೆ ಅಂಚೆಯ ಮೂಲಕವೇ ಕಳುಹಿಸಬಹುದು. ಸಾಮಾನ್ಯವಾಗಿ ಎಲ್ಲ ಹಳ್ಳಿಗಳಲ್ಲಿ ಅಂಚೆ ಕಛೇರಿಗಳ ಸೌಲಭ್ಯವಿದೆ. ಅಂಚೆಯ ಮೂಲಕವೇ ಗ್ರಾಹಕರಿಗೆ ವಸ್ತುಗಳನ್ನು ಕಳುಹಿಸಿ, ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಗಾಂಧೀಜಿಯವರ ಸ್ವದೇಶಿ ಚಳುವಳಿಯ ಕನಸು ಮತ್ತು ಮಹಿಳಾ ಸಬಲೀಕರಣದ ಪರಿಕಲ್ಪನೆ ಅನುಷ್ಠಾನಕ್ಕೆ ಇದುವೇ ಉತ್ತಮ ಮಾರ್ಗ ಎಂದು ಅರ್ಥ ಮಾಡಿಕೊಂಡಿದ್ದಾರೆ ಅಪಣರ್ಾರಾವ್.

ಮಹಿಳಾ ಮಾರುಕಟ್ಟೆಯನ್ನು ಪ್ರಾರಂಭಿಸಿದ ಕನ್ನಡತಿ ಅಪಣರ್ಾರಾವ್ರಿಗೆ ಶೋಭಾ, ಸಮೀಕ್ಷಾ, ಮತ್ತು ಕಾವ್ಯ ಅವರು ನಿವರ್ಾಹಕರಾಗಿ ಕೈಜೋಡಿಸಿದ್ದಾರೆ. ಸ್ವಾಭಿಮಾನ, ಸ್ವಾವಲಂಬನೆ ಈ ಮಾರುಕಟ್ಟೆಯ ಪ್ರಮುಖ ಲಕ್ಷಣ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುವ ಮಹಿಳೆಯರಿಗಾಗಿ ಪ್ರಾರಂಭಿಸಿದ ಮಹಿಳಾ ಮಾರುಕಟ್ಟೆ ಈಗಾಗಲೇ ಜನಮನ್ನಣೆಗಳಿಸಿದ, ಮಹಿಳಾ ಸಬಲೀಕರಣದಲ್ಲಿ ಅವರದು ಮೌನದಿಟ್ಟ ಹೆಜ್ಜೆ. ಅಪಣರ್ಾರಾವ್ರವರು ಈ ಸೇವಾಕಾರ್ಯದಲ್ಲಿ ದಿನದ ಹೆಚ್ಚಿನ ಸಮಯವನ್ನು ಮೀಸಲಾಗಿಟ್ಟಿದ್ದಾರೆ. ಸಾವಿರಾರು ಮಹಿಳೆಯರ ಬದುಕಿಗೆ ದಾರಿ ದೀಪವಾದ ಮಹಿಳಾ ಮಾರುಕಟ್ಟೆಗೆ ಮತ್ತು ಅದ್ಭುತ ಪರಿಕಲ್ಪನೆಗೆ ನಾಂದಿ ಹಾಡಿದ ಅಪಣರ್ಾರಾವ್ ಅವರಿಂದ ಮತ್ತಷ್ಟು ಮಹಿಳೆಯರಿಗೆ, ಸಮಾಜಕ್ಕೆ ಒಳಿತಾಗಲಿ. ಇಂಥದೊಂದು ತಂಡ ಕಟ್ಟಿದ ಅಪಣರ್ಾರಾವ್ ಮತ್ತು ಆಡಳಿತ ವರ್ಗದವರಿಗೆ ಅಭಿನಂದನೆಗಳು 

ಸುದ್ದಿ ಓದಿ