ಮಹಿಳೆ

ಬ್ಯೂಟಿ ಟಿಪ್ಸ್

ಬ್ಯೂಟಿ ಟಿಪ್ಸ್

-ಭಾಗ್ಯಶ್ರೀ ಶಿವಸಿಂಗ್ ರಜಪೂತ , ಧಾರವಾಡ 

 ಸುಂದರತೆ ಎಂದೊಡನೆ ಎಲ್ಲರಿಗೂ ಥಟ್ಟನೆ ನೆನಪಿಗೆ ಬರುವವರೆ ಹೆಂಗಳೆಯರು  ಅದರಲ್ಲೂ ಮುಖ್ಯವಾಗಿ ಅವರು  ತಮ್ಮ ಮುಖದ ಕಾಂತಿಗೋಸ್ಕರ  ಹೆಚ್ಚಿನ ಕಾಳಜಿ ವಹಿಸುತ್ತಾರೆ ಅವರಿಗಾಗಿ ಕೆಲವೊಂದು ಸಲಹೆಗಳು.

ಕೊಳಿತ ಬಾಳೆಹಣ್ಣಿನಲ್ಲಿ  ಒಂದು  ಚಮಚ  ಜೇನುತುಪ್ಪ, ಒಂದು ದೊಡ್ಡ ಚಮಮದಷ್ಟು ಕಡಲೆಹಿಟ್ಟನ್ನು ಚೆನ್ನಾಗಿ  ಕಲೆಸಿ  ಅದನ್ನು  ಫೇಸ್ ಪ್ಯಾಕ್  ಮಾಡಿ  ಲೇಪಿಸಿಕೊಂಡು  ಅರ್ಧ ಗಂಟೆಯ  

ನಂತರ  ತಣ್ಣೀರಿನಿಂದ ಮುಖ ತೊಳೆಯಬೇಕು.  ಇದರಿಂದ ಮುಖದ ಕಾಂತಿ ಹೆಚ್ಚಿಸಲು ಸಹಾಯವಾಗುತ್ತದೆ 

ಕೋಳಿಮೊಟ್ಟೆಯ ಬಿಳಿಲೋಳೆಯಲ್ಲಿ ಒಂದು ದೊಡ್ಡ ಚಮಚದಷ್ಟು  ಜೇನುತುಪ್ಪ ಕಲೆಸಿ  ಫೇಸ ಪ್ಯಾಕ್ ಮಾಡಿ.( ಈ ಮಿಶ್ರಣವನ್ನು ಹಚ್ಚುವುದು ಕಷ್ಟ ವಾದರೆ  ಬ್ರಷಗಳು ಸಿಗುತ್ತವೆ ಮಿಶ್ರಣ  ಲೇಪನ ಮಾಡಲು ಸುಲಭವಾಗುತ್ತದೆ  ಬಳಸಿಕೊಳ್ಳಿ ) ನಂತರ ಅದು ಚೆನ್ನಾಗಿ ಒಣಗಿದ ಮೇಲೆ  ತಣ್ಣೀರಿನಿಂದ   ತೊಳೆದುಕೊಳ್ಳಬೇಕು  ಮುಖವು ಕಾಂತಿಯುತವಾಗಿ ಕಾಣುವುದು. 

ತಾಜಾ ಪುದೀನಾ ಎಲೆಗಳನ್ನು ರುಬ್ಬಿಕೊಂಡು   4   ಟೇಬಲ್ ಸ್ಪೂನ್ ಗಳಷ್ಟು  ಪೇಸ್ಟ ಮಾಡಿ  ಅದಕ್ಕೆ  ಎರಡು  ಟೀ ಸ್ಪೂನ್  ಕಡಲೆ ಹಿಟ್ಟು ,   ಕಲೆಸಬೇಕು  ನಂತರ ಈ ಮಿಶ್ರಣವನ್ನು  ಮುಖಕ್ಕೆ ಹಚ್ಚಿಕೊಂಡು  ಹದಿನೈದು ನಿಮಿಷಗಳ ನಂತರ ಚೆನ್ನಾಗಿ  ತಣ್ಣೀರಿನಿಂದ ಮುಖ ತೊಳೆಯಬೇಕು.

ಒಂದು  ಚಮಚ ಕಿತ್ತಳೆ ಸಿಪ್ಪೆಯಿಂದ ಮಾಡಿದ ಪುಡಿಯಲ್ಲಿ ಅಷ್ಟೇ  ಪ್ರಮಾಣದಲ್ಲಿ ಜೇನುತುಪ್ಪ  ಅರ್ಧ ಚಮಚ  ನಿಂಬೆರಸ  ಮುಖಕ್ಕೆ  ಪ್ಯಾಕ್ ಮಾಡಿ  ಒಣಗಿದ ನಂತರ  ತಣ್ಣೀರಿನಿಂದ ತೊಳೆಯಬೇಕು . ಕಿತ್ತಳೆ  ಹಣ್ಣಿನ  ಸಿಪ್ಪೆ ಪುಡಿ  ಲಭ್ಯವಿರಲ್ಲದಿದ್ದಲ್ಲಿ  ಮೂಸಂಬಿ  ಹಣ್ಣಿನ  ಸಿಪ್ಪೆಯ ಪುಡಿ ಮಾಡಿಕೊಂಡು  ವರ್ಷ ಇಡೀ ಬಳಸಬಹುದು.  


ಸುದ್ದಿ ಓದಿ