ಕಪ್ಪು ಬಿಳುಪು
-ಪ್ರಭಾ .ಅ. ಪಾಟೀಲ , ಬೆಳಗಾವಿ
ನಮ್ಮ ಕಥಾನಾಯಕಿ ಗೀತಾ ಕಪ್ಪು ಬಣ್ಣದವಳು ನೋಡಲು ಲಕ್ಷಣವಾಗಿದ್ದಳು ಅವಳು ಒಬ್ಬಳೆ ತಂಗಿ ಸ್ಮಿತಾ ಬೆಳ್ಳಗೆ ತೆಳ್ಳಗೆ ಸುಂದರವಾಗಿದ್ದಳು, ಓದಿನಲ್ಲೂ ಜಾಣೆ. ಆದರೆ ಗೀತಾ ಓದಿನಲ್ಲೂ ಅಷ್ಟಕ್ಕಷ್ಟೇ, ಖುಷಿ ಅಂದರೆ ಅವಳಿಗೆ ಆಟದಲ್ಲಿ ಯಾವಾಗಲೂ ವಿಶೇಷ ಆಸಕ್ತಿ. ಮಧ್ಯಮವರ್ಗದ ಬ್ಯಾಂಕ್ ಕ್ಲಕರ್್ ಸೀತಾರಾಮ ಮತ್ತು ಲಕ್ಷ್ಮಮ್ಮನವರ ಮಕ್ಕಳು ಇವರಿಬ್ಬರು.
ಅದೇಕೋ ತಂದೆ ಸೀತಾ ರಾಮರಿಗೆ ಸ್ಮಿತಾ ಎಂದರೇ ಪಂಚ ಪ್ರಾಣ ಎಲ್ಲದರಲ್ಲೂ ಜಾಣೆ ಎಂದು ಆದರೆ ತಾಯಿಗೆ ಇಬ್ಬರು ಮಕ್ಕಳು ಒಂದೇ. ತಂಗಿಗೆ ನಾನೇ ಎಂಬ ಅಹಂಭಾವ ಏನಾದರೂ ತಪ್ಪು ಮಾಡಿ ಅಕ್ಕನನ್ನು ಅಪ್ಪನಿಂದ ಬಯಸುವುದು ಎಂದರೆ ಅವಳಿಗೆ ಒಂಥರಾ ಖುಷಿ.
ತಂದೆ ಗದರಿಸಿದಾಗ ತಾಯಿ ಸಾಂತ್ವಾನ ಹೇಳಿ ಮಗಳ ಪರವಹಿಸಿ,"ಏನ್ರೀ ನೀವು ಯಾವಾಗ ನೋಡಿದರೂ ಅವಳದೇ ಸರಿ ಅಂತೀರಿ ನೋಡ್ರಿ ಒಂದು ದಿನ ಗೀತಾನ ಮುಂದೆ ಬತರ್ಾಳೆ ನಮ್ಮ ಮನೆತನದ ಹೆಸರು ಬೆಳೆಸುತ್ತಾಳೆ"" ಅಂತ ಮಗಳಪರವಹಿಸಿ ನಿಲ್ಲುತ್ತಿದ್ದರು.
ಶಾಲೆಯಲ್ಲಿ ಪೀರೀಯೆಡ ಬಂತೆಂದರೆ ಗೀತಾಗೆ ಸ್ವರ್ಗ ಮೂರೇ ಗೇಣು ಓಟದಲ್ಲಿ ಜಿಂಕೆಯಂತೆ ನೆಗೆಯುತ್ತಿದ್ದಳು. ಓಡಿ ಒನ್ 100 ಮೀಟರ್ ಎರಡು ನೂರು ಮೀಟರ್ ನಾಲ್ಕು ನೂರು ಮೀಟರ್ ರೀಲೆಯಲ್ಲಿ ಇವಳೀಗೆ ಬಹುಮಾನ ಕಟ್ಟಿಟ್ಟ ಬುತ್ತಿ ಹೀಗಾಗಿ ಪ್ರಿನ್ಸಿಪಾಲರು ಆಗೋ ಆಟದ ಟೀಚರ್ಗೆ ಅಚ್ಚುಮೆಚ್ಚು ಗೀತಾ ಬಹುಮಾನ ಹಿಡಿದು ಮನೆಗೆ ಬಂದ ಗೀತಾಗೆ ತಂದೆಯು""ಏನು ದೊಡ್ಡ ಆಗಾದ ಮಾಡಿ ಓದಿನಲ್ಲಿ ಆದರೂ ತೋರಿಸು ನಿನ್ನ ಶ್ಯಾಣ್ಯಾತನ ಗಂಡು ಹುಡುಗ ರಂಗ ಬರೀ ಆಟದಾಗ ಇದ್ದರೆ ಹೆಂಗ ಮುಂದ ಕೊಡತೋಗೂ ಹುಡುಗಿ ನೋಡೋಕು ಮೊದಲ ಕರಗ ಅದಿ ""ಅಂತ ಅವಳ ಮುಂದೆ ಮಾತನಾಡಿದಾಗ ಗೀತಾಳಿಗಾದ ಸಂಕಟ ಹೇಳತೀರದು "ಕಪ್ಪಾಗಿ ಹುಟ್ಟಿದ್ದು ನನ್ನ ತಪ್ಪೇ ಅವ್ವ ಎಂದು ಹೇಳಿ ತಾಯಿಯ ಮುಂದೆ ಕಣ್ಣೀರು ಹಾಕುವಳು ಸಾಯಿ ಸಾಂತ್ವಾನ ಹೇಳಿ" ಗೀತಾ ನೀ ಇದನ್ನ ಚಾಲೆಂಜ್ ಆಗಿ ತಗೋ ನಿಮ್ಮಪ್ಪ ಗನಾ ಹೇಳ್ತೀನಿ.
ನಿನಗೆ ಎದುರಾಗ ಇಷ್ಟವೂ ಅದನ್ನೇ ಮಾಡು ನಡಿ ನಿಮ್ಮ ಪ್ರಿನ್ಸಿಪಾಲರು ಜೋಡಿ ನಾನು ಮಾತಾಡ್ತೀನಿ "ಅಂತ ಹೇಳಿ ಸಮಾಧಾನ ಮಾಡಿದರು. ಮುಂದೆ ಬೆಳೆದಂತೆ ಗೀತಾ ಓದಿನಲ್ಲೂ ಸುಧಾರಿಸುತ್ತಾ ಓಟದಲ್ಲೂ ಮುಂದುವರೆದಳು ತಾಯಿ ಮಗಳನ್ನು ಬೇಗ ಎಬ್ಬಿಸಿ ಕೋಚ ಹತ್ತಿರ ಅಭ್ಯಾಸಕ್ಕೆ ಕಳಿಸ ಹತ್ತಿದರು ಗಂಡನ ವಿರೋಧವಿದ್ದರೂ ಲೆಕ್ಕಿಸದೆ ಹೀಗೆ ಸಾಗಿದ ಗೀತಾಳ ಸಾಧನೆ ಮೊದಲು ತಾಲೂಕು ಮಟ್ಟದಲ್ಲಿ ಮೊದಲ ಬಹುಮಾನ ಆಮೇಲೆ ಜಿಲ್ಲಾ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಮುಂದುವರೆದಳು,,,
ಆದರೆ ತಂಗಿ ಸ್ಮಿತಾ ಸೌಂದರ್ಯದ ಅಹಂನಿಂದ ಬರೀ ಫ್ಯಾಶನ್ ಗೆಳತಿಯರ ಜೊತೆ ಪಿಕ್ನಿಕ್ ಓಡಾಟಗಳಿಗೆ ಸಿಲುಕಿ. ಅಭ್ಯಾಸದಲ್ಲಿ ಹಿಂದೆ ಉಳಿಯ ಹತ್ತಿದಳು ಅದರಿಂದ ಮನನೊಂದ ತಂದೆ ತಾಯಿ ಅವಳಿಗೆ ಬೇಗ ಒಳ್ಳೆಯವರ ನೋಡಿ ಮದುವೆ ಮಾಡಿದರು ಗೀತಾ ತಂದೆ ತಾಯಿಗೆ ನನಗೆ ಈಗಲೇ ಮದುವೆ ಬೇಡ ನನ್ನ ಸಾಧನೆಗೆ ಅಡ್ಡಿಯಾಗುವುದೆಂದು ತಿಳಿಸಿ ಹೇಳಿ ಒಪ್ಪಿಸಿದ್ದಳು.
ಇಂದಿನ ದಿನ ಗೀತಾ ಒಬ್ಬ ಒಲಂಪಿಕ್ ಚಾಂಪಿಯನ್ ಬಂಗಾರ ಪದಕ ಗಳಿಸಿದ ಹೆಣ್ಣು ಮಗಳು ಎಂದು ತಾತ್ಸಾರ ತೋರಿದ ತಂದೆ ತಂಗಿ ಇಂದು ಹೆಮ್ಮೆಯಿಂದ ತಲೆಯೆತ್ತಿ ನನ್ನ ಮಗಳು ನನ್ನ ಅಕ್ಕ ಎಂದು ಹೇಳುತ್ತಾರೆ ಸಮಾಜದ ಜನ ಕಪ್ಪು ಬಣ್ಣ ಮರೆತು ಅವಳ ಸಾಧನೆಗೆ ಹೆಮ್ಮೆ ಪಡುತ್ತಾರೆ ಇಡೀ ಭಾರತ ದೇಶದಲ್ಲಿ ಹೆಸರು ಮಾಡಿ ಟಿವಿ ಪೇಪರ್ ಎಲ್ಲದರಲ್ಲೂ ಅವಳ ಹೆಸರು"ಚಿನ್ನದ ಪದಕ"ಗೆದ್ದ ಗೀತಾ ಎಂದು.
ಆ ದಿನಗಳಲ್ಲಿ ತಾಯಿ ಮಗಳ ಪರ ಧ್ವನಿ ಎತ್ತಿ ಮಾತನಾಡಿ ಪ್ರೋತ್ಸಾಹಿಸಿದ್ದಕ್ಕೆ ಅವರಿಗೊಂದು ದೊಡ್ಡ ಸಾಷ್ಟಾಂಗ ಜೀವನದಲ್ಲಿ ಕಪ್ಪು-ಬಿಳುಪು ಬಣ್ಣ ಮುಖ್ಯವಾಗುವುದಿಲ್ಲ ನಾವು ಹೇಗೆ ಬದುಕಿ ತೋರಿಸುತ್ತೇನೆ ಎನ್ನುವುದರ ಮೇಲೆ ಜೀವನ ನಿಂತಿದೆ.
ತಂದೆ ತಾಯಿ ಯಾದವರು ಮಕ್ಕಳಲ್ಲಿ ತಾರತಮ್ಯ ತೋರದೆ ಅವರಿಗೆ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಉತ್ತಮ ಎಂದು ನನ್ನ ಕಳಕಳಿಯ ವಿನಂತಿ ಯಾವ ಮಗುವಿನಲ್ಲಿ ಯಾವ ಪ್ರತಿಭೆ ಇದೆಯೋ ಯಾರಿಗೆ ಗೊತ್ತು ಅವರು ದೊಡ್ಡ ಗಾಯಕರು ಆಗಬಹುದುಲೇಖಕರೂ ಆಗಬಹುದು ಡಾಕ್ಟರ್ ಇಂಜಿನಿಯರ್ ಪೇಂಟರ್ ಕಲಾಕಾರರು ನೃತ್ಯಗಾರ ಹೀಗೆ ಅನೇಕ ವಿಷಯಗಳಲ್ಲಿ ಸಾಧನೆಯನ್ನು ಮಾಡಬಹುದು ನಾವು ಆ ನಿಟ್ಟಿನಲ್ಲಿ ಮುಂದೆ ಸಾಗೂನವೇ.