ಮಹಿಳೆ

ಟೀಕೆ ಬಿಡಿ ಸ್ಪೂರ್ತಿ ನೀಡಿ

ಟೀಕೆ ಬಿಡಿ  ಸ್ಪೂರ್ತಿ ನೀಡಿ

ಡಾ. ಹೇಮಾವತಿ ಸೊನ್ನೊಳ್ಳಿ 

ರಾಜಣ್ಣ ವಿದ್ಯಾಥರ್ಿದೆಸೆಯಿಂದಲೂ ಅತ್ಯಂತ ಚಟುವಟಿಕೆಯಿಂದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿಸುತ್ತಿದ್ದ ಮುಂದಾಳತ್ವವರಿಸಿಕೊಂಡು ಯಾವುದೇ ಕಾರ್ಯವನ್ನು ಯಶಸ್ವಿಯಾಗುವಂತೆ ಮಾಡುತಿದ್ದ ಯಾವುದೇ ತರಹದ ಸ್ವಾರ್ಥದಾಶೆ ಇಲ್ಲದೆ ತ್ಯಾಗ ಮನೋಭಾವನೆಯಿಂದ ಸಾಮಾಜಿಕ ಪ್ರಗತಿಪರ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಅತ್ಯಂತ ವಿನಯಶೀಲತೆಯುಳ್ಳ ಅವನ ನಡತೆ ಎಲ್ಲರಿಗೂ ಇಷ್ಟವಾಗುತಿತ್ತು ಅವನನ್ನು ಮೆಚ್ಚುವವರೆಲ್ಲ ರಾಜಣ್ಣ ಅಂದರ ರಾಜಾನ ನೋಡು ಅನ್ನುತ್ತಿದ್ದರು. ಆದರೆ ಅವನ ಕೆಲವು ಸ್ನೇಹಿತರು ಹಾಗೂ ಅವನ ಸುತ್ತಮುತ್ತಲಿರುವ ಕೆಲ ಜನರು ಅವನ ಜನಪ್ರಿಯತೆಯನ್ನು ಕಂಡು ಹೊಟ್ಟೆ ಕಿಚ್ಚು ಪಡುತ್ತಿದ್ದರು. ಅವನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದರು. ಜನ ಅವನೆಡೆಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ರಾಜಣ್ಣ ಇದಕ್ಕೆಲ್ಲ ಕಿವಿ ಕೊಡದೇ ತನ್ನ ಸತ್ಕಾರ್ಯಗಳಲ್ಲಿ ತಾನು ಮಗ್ನನಾಗಿರುತ್ತಿದ್ದ

ಸುಕನ್ಯಾ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿ.ಇ ಅಂತಿಮ ವರ್ಷದಲ್ಲಿ  ವ್ಯಾಸಂಗ ಮಾಡುತ್ತಿದ್ದಳು. ನೋಡಲು ತುಂಬಾ ಚೆಲುವೆ ಓದಿನಲ್ಲಿ ತುಂಬಾ ಜಾಣೆ ಪ್ರತಿ ವರ್ಷ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಪಾಸಾಗುತ್ತಿದ್ದಳು. ಕಾಲೇಜಿನ ಯಾವುದೇ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಅತ್ಯಂತ ಉತ್ಸುಕತೆಯಿಂದ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಳು. ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಪ್ರಾಂಶುಪಾಲರಿಂದ  ಹಾಗೂ ಉಪನ್ಯಾಸಕ ವರ್ಗದಿಂದ ಭೇಷ್ ಎನಿಸಿಕೊಳ್ಳುತ್ತಿದ್ದಳು ಆರದೆ ಸುಕನ್ಯಾ ಎಲ್ಲದರಲ್ಲೂ ಸೈ ಎನಿಸಿಕೊಳ್ಳುವುದು ಸಹಿಸಲು ಆಗುತ್ತಿರಲಿಲ.್ಲ ಅವಳ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದು ಹಾಗೂ ಅವಳ ನಡತೆ ಚೆನ್ನಾಗಿಲ್ಲ ಅಂತ ಸುಮ್ಮ ಸುಮ್ಮನೆ ಅವಳ  ಅಪಪ್ರಚಾರ ಮಾಡುತ್ತಿದ್ದರೂ. ಸುಕನ್ಯಾ ಇದೆಲ್ಲವನ್ನು ಗಮನಿಸಿಯೂ ಗಮನಿಸಿದಂತೆ ಇದ್ದು ತನ್ನ ಕಾರ್ಯಚಟುವಟಿಕೆಗಳಲ್ಲಿ ಮಗ್ನಳಾಗಿರುತ್ತಿದ್ದಳು.

ಶಾಲಿನಿಗೆ ಮದುವೆಯಾಗಿ ಎರಡು ಚಿಕ್ಕಮಕ್ಕಳಿದ್ದವು ಅವಳಿಗೆ ಅದೇನೋ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜಕೀಯ  ಕ್ಷೇತ್ರದಲ್ಲಿ ಸೇವೆ ಮಾಡಬೇಕೆನ್ನುವ ಆಶೆಯಾಯಿತು. ಅದನ್ನು ಅವಳ ಪತಿಗೆ ತಿಳಿಸಿದಾಗ ಅವನೂ ಕೂಡಾ ಆಯ್ತು ನಿನಿಚ್ಛೆಯಂತೆ ಮಾಡುವಂತೆ. ಪತ್ನಿಗೆ ಅಗತ್ಯವಿದ್ದಾಗ ಸಹಾಯ ಮತ್ತು ಸಹಕಾರ ನೀಡುವ ಭರವಸೆ ನೀಡಿದ ಇದರಿಂದ ಶಾಲಿನಿಗೆ ತುಂಬಾ ಸಂತೋಷವಾಯಿತು. ರಾಜಕೀಯದಲ್ಲಿ ತನ್ನನ್ನು ತೊಡಗಿಸಿಕೊಂಡು ಒಳ್ಳೆ ಸ್ಥಾನ ಪಡೆದುಕೊಂಡಳು ದಿನದಿಂದ ದಿನಕ್ಕೆ ಆ ಕ್ಷೇತ್ರದಲ್ಲಿ ಕೀತರ್ಿಯ ಶಿಖರವನ್ನು ಏರತೊಡಗಿದಳು ಶಾಲಿನಿಯ ಯಶಸ್ಸನ್ನು ಕಂಡ ಕೆಲ ಮಹಿಳೆಯರಿಗೆ ಹೊಟ್ಟೆ ಉರಿಯತೊಡಗಿತು ಮೊದಲ ಎಷ್ಟ ಸಾದಾ ಇದ್ದಳು ಈಗ ಎಷ್ಟ ಶಿಸ್ತ ಕಲಿತಾಳ ನೋಡ್ರಿ. ಅವಳಿಗೆ ಈಗ ಬಹಳ ಸೊಕ್ಕ ಬಂದೈತಿ ನೋಡ್ರಿ ಯಾರನ್ನೂ ಕಣ್ಣಿತ್ತಿ ಕೂಡಾ ನೋಡುವಳಲ್ಲಾ ನೋಡ್ರಿ ಗಂಡ ಮತ್ತು ಮಕ್ಕಳ ಕಡೆ ಲಕ್ಷ ಕೊಡದ ಹೊರಗ ಅಡ್ಡಾಡಕೊಂಡ ಇರತಾಳ ನೋಡ್ರಿ ಅನ್ನುತ್ತಿದ್ದರು. ಆದರೆ ಶಾಲಿನಿ ಈ  ಮಾತುಗಳನ್ನೆಲ್ಲ ಕೆಳಿಸಿಕೊಂಡು ಖಿನ್ನಳಾಗದೆ ಸಹನೆಯಿಂದ ಹಾಗೂ ಧೈರ್ಯದಿಂದ ಮುನ್ನಡೆಯುತ್ತಿದ್ದಳು.

ಸೋಮಶೇಖರ ಅವರು ಸರಕಾರದ ಒಂದು ಉನ್ನತ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಒಂದು ಹೆಣ್ಣು ಹಾಗೂ ಒಂದು ಗಂಡು ಎರಡು ಮಕ್ಕಳಿದ್ದರು ಶಹರದಲ್ಲಿ ಬಾಡಿಗೆ ಮನೆ ಹಿಡಿದು ಮನೆ ನಡೆಸುತ್ತಾ ಮಕ್ಕಳಿಗೆ ಒಳ್ಳೆ ಶಿಕ್ಷಣವನ್ನು ಕೊಡಿಸುತ್ತಿದ್ದರು. ಇಪ್ಪತ್ತು ವರ್ಷಗಳವರೆಗೆ ಸೇವೆಯನ್ನು ಸಲ್ಲಿಸುತ್ತಾ ತಾವು ಉಳಿತಾಯ ಮಾಡಿದ ಹಣದಿಂದ ಒಂದು ಸುವ್ಯವಸ್ಥಿತ ಸಾಧಾರಣ ಮನೆಯನ್ನು ಕೊಂಡುಕೊಂಡರು ಅತ್ಯಂತ ಪ್ರಮಾಣಿಕವಾಗಿ ಸೇವೆ ಸಲ್ಲಿಸುವವರು ಅವರು ಲಂಚ  ಪಡೆದು ಸಾಕಷ್ಟುಗಳಿಸುವ ಅವಕಾಶವಿದ್ದರೂ ಅವರು ಲಂಚಕ್ಕೆ ಕೈ ಒಡ್ಡಿರಲಿಲ್ಲ ಪರಿಶ್ರಮದಿಂದ ತಮ್ಮ ಬದಕನ್ನು ಕಟ್ಟಿಕೊಂಡವರು. ಆದರೆ ಇವರ ಏಳ್ಗೆಯನ್ನು ಕಂಡವರು ಅಯ್ಯ ಇಷ್ಟೆಂಗ ಮುಂದ ಬರತಾರಿ ಇವರಿಗೆ ನೌಕರಿಯೊಳಗೆ ಏನಾರ ತಿನ್ನಾಕ ಸಿಗತಿರಬೇಕ ತಗೋರಿ ಅದಕ ಇಷ್ಟ ಚಲೋ ಮಾಡಕೊಂಡಾಗ ಈಗ ಅಂತ ಅನ್ನುತ್ತಿದ್ದರು. ಈ  ಮಾತನ್ನು ಕೇಳಿದ ಸೋಮಶೇಖರ ಅವರಿಗೆ ತುಂಬಾ ವೇದನೆಯಾಗುತ್ತಿತ್ತು ಮನದಲ್ಲೆ ಹಳಹಳಿಸುತ್ತಿದ್ದರು. ಆದರೂ ತಮ್ಮನ್ನು ಸಾವರಿಸಿಕೊಂಡು ಯಾರೇನೆ ಅಂದರೂ ಮೇಲೊಬ್ಬ ದೇವನಿದ್ದಾನಲ್ಲ ಅವನಿಗೆ ನನ್ನ ಪ್ರಾಮಾಣಿಕತೆಯ ಅರಿವಿದೆಯಲ್ಲಾ ಸಾಕು ಎಂದು ತಮ್ಮ ಜೀವನನ್ನು ಸಾಗಿಸುತ್ತಿದ್ದರು.

ಇದೇಕೆ ಹೀಗೆ ಅಂತ? ಶರಣರು ಹೇಳ್ತಾರೆ ಪರಚಿಂತೆ ನಿಮಗೇಕಯ್ಯಾ ಎಂದು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡೋರು ಹೀಯಾಳಿಸಿ ಮಾತನಾಡೋದು ಅವರ ತನು ಮನ ಹಾಗೂ ಕಾರ್ಯಗಳ ಬಗ್ಗೆ ಟೀಕೆ ಮಾಡೋದು ಯಾಕೆ ಅಂತ? ನಿಮ್ಮ ನಿಮ್ಮ ಪಾಲಿನ ಕರ್ತವ್ಯಗಳು ನಿಮಗಿರುತ್ತವೆ ಅವುಗಳ ಕಡೆಗೆ ಲಕ್ಷ ಕೊಡಿ. ಟೀಕೆಗಳನ್ನು ಕೇಳಿದವರ ಮನಗಳು ಘಾಸಿಗೊಳ್ಳುತ್ತವೆ. ನಿಮಗೇನು ಲಾಭ ಅದರಿಂದ ನಿಮ್ಮ ಸಮಯವೂ ವ್ಯರ್ಥವಾಗುತ್ತದೆ. ಟೀಕೆಗಳನ್ನು ಮಾಡದೇ ಅದೇ ಸಮಯವನ್ನು ಸದುಪುಯೋಗ ಮಾಡಿಕೊಂಡು ನೀವೂ ಏನನನ್ನಾದರೂ ಸಮಾಜಕ್ಕೆ ಹಿತವಾಗುವಂಥ ಪ್ರಗತಿಪರ ಕಾರ್ಯಗಳಿಗೆ ಕೈ ಜೋಡಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನೇ  ತಾವು ಅಪರ್ಿಸಿಕೊಂಡು ಕಾರ್ಯಗೈಯುವರಿಗೆ ಪ್ರೋತ್ಸಾಹ ನೀಡಿ ಅವರೊಂದಿಗೆ ನೀವು ಸೇರಿಕೊಂಡು ಸೇವಾಮನೋಭಾವನೆಯಿಂದ ಕಾರ್ಯನಿರ್ವಹಿಸಿ ಆವಾಗ ನೋಡಿ ಎಲ್ಲರಿಗೂ ಚೆನ್ನ ಎಲ್ಲವೂ ಚೆನ್ನ ಅದಕ್ಕಾಗಿಯೇ ನಾನು ಹೇಳೋದು ಟೀಕೆ ಬಿಡಿ ಸ್ಪೂತರ್ಿ ನೀಡಿ.

ಸುದ್ದಿ ಓದಿ